ಶೇಕ್ ಇಟ್ ಪುಷ್ಪಾವತಿ ಹಾಡಿಗೆ ಭರ್ಜರಿ ಸ್ಟೆಪ್ ಭೂಮಿಕಾ ಬಸವರಾಜ್; ವಿಡಿಯೋ ವೈರಲ್

ಶೇಕ್ ಇಟ್ ಪುಷ್ಪಾವತಿ ಹಾಡಿಗೆ ಭರ್ಜರಿ ಸ್ಟೆಪ್  ಭೂಮಿಕಾ ಬಸವರಾಜ್; ವಿಡಿಯೋ ವೈರಲ್

ಸೋಶಿಯಲ್ ಮೀಡಿಯಾದಲ್ಲಿ ಟಿಕ್ ಟಾಕ್ ಆ್ಯಪ್ ಬಂದಮೇಲೆ ಹಲವಾರು ಪ್ರತಿಭೆಗಳು ತಮ್ಮ ಟ್ಯಾಲೆಂಟ್ ಅನ್ನು ಪ್ರೂವ್ ಮಾಡಿ ಕೋಟೆಯ್ಯಾಂತರ ಮನಗಳನ್ನು ಗೆದ್ದರು. ಆದರೆ ಯಾವಾಗ ಅದು ಭಾರತದಲ್ಲಿ ಬ್ಯಾನ್ ಆಯಿತೋ ಆಗ ಇವರ ಎಲ್ಲಾ ಆಸೆಗಳಿಗೂ ತಣ್ಣೀರು ಎರಚಿದಂತೆ ಆಗಿತ್ತು. ಮತ್ತೊಮ್ಮೆ ಇವರಿಗೆಲ್ಲ ಅಂತಹ ಅವಕಾಶ ಮಾಡಿಕೊಟ್ಟಿದ್ದು ಇನ್ಸ್ಟಾಗ್ರಾಮ್ ರೀಲ್ಸ್ ಎನ್ನಬಹುದು. ಈಗ ರೀಲ್ಸ್ ಮಾಡುವ ಮೂಲಕ ಮತ್ತೊಮ್ಮೆ ಎಲ್ಲರೂ ಫೇಮಸ್ ಆಗುತ್ತಿದ್ದಾರೆ, ಈ ಲಿಸ್ಟ್ ನಲ್ಲಿ ಕರ್ನಾಟಕದಲ್ಲಿ ಹಲವಾರು ಜನರು ಇದ್ದಾರೆ, ಇವರೆಲ್ಲಾ ಸದ್ಯಕ್ಕೆ ಸೋಶಿಯಲ್ ಮೀಡಿಯಾ ಸ್ಟಾರ್ ಗಳು ಎಂದು ಕರೆಸಿಕೊಳ್ಳುತ್ತಿದ್ದಾರೆ.

ಸಿನಿಮಾಗಳಿಗಿಂತಲೂ ಮೊಬೈಲ್ ಮೂಲಕ ಹೆಚ್ಚಿನ ಜನರಿಗೆ ತಲುಪಲು ಅವಕಾಶಗಳು ಹೆಚ್ಚಿರುವುದರಿಂದ ಇವರಿಗೆ ಸಂಬಂಧಪಟ್ಟ ವಿಷಯಗಳು ಹಾಗೂ ಇವರ ವಿಡಿಯೋಗಳು ಬೇಗನೆ ವೈರಲ್ ಆಗಿ ಇವರು ಫೇಮಸ್ ಆಗುತ್ತಾರೆ. ಕರ್ನಾಟಕದ ಮಟ್ಟಿಗೆ ಸದ್ಯಕ್ಕೆ ಕಾಫಿ ನಾಡು ಚಂದು ಹಾಗೂ ಭೂಮಿಕ ಬಸವರಾಜು ಇಬ್ಬರು ಅಷ್ಟೇ ಫೇಮಸ್ ಆಗಿದ್ದಾರೆ ಎನ್ನಬಹುದು. ಇವರಿಬ್ಬರೂ ಕೂಡ ಮೂಲತಃ ಚಿಕ್ಕಮಗಳೂರಿನವರೇ ಆಗಿದ್ದಾರೆ.

ಭೂಮಿಕ ಬಸವರಾಜು ಅವರು ಕನ್ನಡದ ಯಾವುದೇ ನಟಮಣಿಗೂ ಕಡಿಮೆ ಇಲ್ಲದಂತಹ ಸೌಂದರ್ಯ ಟ್ಯಾಲೆಂಟ್ ಮತ್ತು ಅಭಿಮಾನಿಗಳನ್ನು ಪಡೆದಿದ್ದಾರೆ ಎನ್ನಬಹುದು. ತಮ್ಮ ಅದ್ಭುತವಾದ ಪ್ರತಿಭೆ, ಸೌಂದರ್ಯ, ಡ್ಯಾನ್ಸ್ ಮೂಲಕ ಸಾಕಷ್ಟು ಮನಸ್ಸುಗಳನ್ನು ಸೆಳೆದಿರುವ ಇವರು ಮಾಡುವ ವಿಡಿಯೋಗಳು ಕೂಡ ಅಷ್ಟೇ ಚೆನ್ನಾಗಿ ಇರುತ್ತವೆ. ಯಾವುದೇ ಟ್ರೆಂಡಿಂಗ್ ಹಾಡುಗಳಿಗೂ ಕೂಡ ತಪ್ಪದೇ ರಿಲ್ಸ್ ಮಾಡುವ ಇವರು ಈಗಾಗಲೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ನೂರಾರು ವಿಡಿಯೊ ಹಂಚಿಕೊಂಡಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Bhumika (@bhumika_basavaraj)