ಗಂಡ ತೀರಿಕೊಂಡು ವರ್ಷ ಆಗೋದ್ರೊಳಗೆ ಮತ್ತೊಂದು ಸಂಬಂಧಕ್ಕೆ ನೇತಾಕಿಕೊಂಡ ಮೇಘನಾ : ವಿಡಿಯೋ ವೈರಲ್

25 ವರ್ಷದ ಮೇಘನಾ 45 ರ ಹರೆಯದ ಶಂಕ್ರಣ್ಣನನ್ನು 2021 ಅಕ್ಟೋಬರ್ ನಲ್ಲಿ ಮದುವೆಯಾಗಿ ರಾಜ್ಯಾದ್ಯಂತ ಸುದ್ದಿಯಾಗಿದ್ದರು. ಶಂಕ್ರಣ್ಣ ಒಳ್ಳೆಯ ಹುಡುಗಿ ಎಂದು ಮದುವೆಯಾಗಿ ಮೋಸ ಹೋಗಿದ್ದರು. ಹೆಂಡತಿ ಮತ್ತು ಅಮ್ಮನ ಕಿತ್ತಾಟವನ್ನು ನೋಡಲಾರದೇ, ಶಂಕ್ರಣ್ಣ ತಾವೇ ಬೆಳೆಸಿದ ಹಲಸಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದರು. ಅದೂ ಕೂಡ ಮದುವೆಯಾಗಿ ಐದು ತಿಂಗಳಾಗಿತ್ತಷ್ಟೇ. ಸೊಸೆಯ ಕಾಟ ತಡೆಯಲಾರದೇ ಮಗ ಸೂಸೈಡ್ ಮಾಡಿಕೊಂಡಿದ್ದಾನೆ ಎಂದು ಮೇಘನಾ ವಿರುದ್ಧ ಶಂಕ್ರಣ್ಣ ಅವರ ತಾಯಿಯೂ, ಅಮ್ಮನ ಕಾಟಕ್ಕೆ ಮಗ ಹೀಗೆ ಸಾವನ್ನಪೊಪಿದ ಎಂದು ಮೇಘನಾ ಇಬ್ಬರೂ ಒಬ್ಬರನ್ನೊಬ್ಬರು ದೂರಿದ್ದರು. 

ಈ ವೇಳೆ ಮೇಘನಾ ಸದಾ ಇನ್ನೊಬ್ಬರ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದರು ಎಂದೂ ಕೂಡ ದೂರು ಕೇಳಿ ಬಂದಿದತ್ತು. ಮೇಘನಾ ಶಂಕ್ರಣ್ಣನನ್ನು ಮದುವೆಯಾಗುವ ಮುನ್ನ ಅವರಿಗೆ  ಮದುವೆಯಾಗಿತ್ತು. ಪತಿ ಎಲ್ಲೋ ಓಡಿ ಹೋಗಿದ್ದಾನೆ. ವಾಪಸ್ ಬರಲಿಲ್ಲ ಎಂದು ಮೇಘನಾ ಶಂಕ್ರಣ್ಣನನ್ನು ಮದುವೆಯಾಗಿದ್ದಳು. ಜೀವನ ನಡೆಸಲು ವಯಸ್ಸು, ಆಸ್ತಿ ಮುಖ್ಯವಲ್ಲ. ನಾವು ಹೇಗೆ ಬದುಕುತ್ತೀವಿ ಎಂಬುದು ಬಹಳ ಮುಖ್ಯ ಎಂದು ಮೇಘನಾ ಫಿಲಾಸಫಿ ಮಾತನಾಡಿದ್ದರು. ಶಂಕ್ರಣ್ಣ ಕೂಡ ಸಾವನ್ನಪ್ಪಿದ ಮೇಲೆ ಮೇಘನಾ ಎಲ್ಲೂ ಸುದ್ದಿಯಾಗಿರಲಿಲ್ಲ. ಆದರೆ ಇದೀಗ ಮತ್ತೆ ಕಾಣಿಸಿಕೊಂಡಿದ್ದಾರೆ. 

ಅದೂ ಕೂಡ ಕೆಎ 11 ಲೆಜೆಂಡ್ಸ್ ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಮೇಘನಾ ಅವರ ಫೋಟೋವನ್ನು ಟ್ರೋಲ್ ಮಾಡಲಾಗಿದೆ. ಮೇಘನಾ ಮತ್ಯಾರೋ ಹುಡುಗನ ಜೊತೆಗೆ ಇದ್ದು, ಇಬ್ಬರೂ ಮುತ್ತು ಕೊಡುತ್ತಿರುವ ಫೋಟೋವನ್ನು ಟ್ರೋಲ್ ಮಾಡಲಾಗಿದೆ. ಐಆರು ಅಂತ ಗೊತ್ತಾಯ್ತಾ..? ಇಷ್ಟೇ ಜೀವನ ಎಂದು ಟ್ಯಾಗ್ ಲೈನ್ ಅನ್ನು ನೀಡಲಾಗಿದೆ. ಶಂಕ್ರಣ್ಣ ಅವರ ಪಾಡಿಗೆ ಮದುವೆನೂ ಬೇಡ. ಏನೂ ಬೇಡ ಎಂದಿದ್ದರು. ಆದರೆ, ಮೇಘನಾ ಅವರ ಬಾಲಲ್ಲಿ ಬಂದು ನಡೆಯಬಾರದ ಘಟನೆಗಳು ನಡೆದು ಹೋದವು. ಆದರೆ, ಮೇಘನಾ ಮಾತ್ರ ತನ್ನ ಬದುಕಲ್ಲಿ ಏನೂ ಆಗೇ ಇಲ್ಲ ಎಂಬಂತೆ ಅರಾಮವಾಗಿದ್ದಾಳೆ.  

ರಂತೆ. ಅಲ್ಲದೇ, ಮನೆಯಲ್ಲಿ ಯಾವುದೇ ಕೆಲಸವನ್ನೂ ಮಾಡುತ್ತಿರಲಿಲ್ಲವಂತೆ. ಅತ್ತೆ ಬಳಿಯಿದ್ದ ಹಣವನ್ನು ಶಂಕ್ರಣ್ಣನಿಂದ ತೆಗೆದುಕೊಂಡ ಮೇಘನಾ ತಂದೆಗೆ ಬೈಕ್ ಕೊಡಿಸಿದ್ದಳಂತೆ. ಜೊತೆಗೆ ಕಿವಿಗೆ ಓಲೆಯನ್ನೂ ಮಾಡಿಸಿಕೊಂಡಿದ್ದಳಂತೆ. ಇನ್ನು ಮೇಘನಾ ರೂಮ್ ತುಂಬಾ ಬರೀ ಮೇಕಪ್ ವಸ್ತುಗಳೇ ಇವೆ, ಯಾವಾಗಲೂ ಅಲಂಕಾರ ಮಾಡಿಕೊಂಡು ಊರು ಸುತ್ತುತ್ತಿರುತ್ತಾಳೆ ಎಂದು ಹೇಳಿದ್ದಾರೆ. 

ಮನೆಗೆ ಬಂದಾಗಿನಿಂದ ಒಂದು ದಿನವೂ ಅಡುಗೆ ಮಾಡದ ಮೇಘನಾಳ ಬಟ್ಟೆಯನ್ನು ಸಹ ಅವರ ಅತ್ತೆಯೇ ಒಗೆಯುತ್ತಿದ್ದರಂತೆ. ನಿತ್ಯ ಮೇಘನಾ ಶಂಕ್ರಣ್ಣನ ಬಳಿ ಆಸ್ತಿ ಮಾರಿ ಬೆಂಗಳೂರಿಗೆ ಹೋಗೋಣ, ಬೇರೆ ಹೋಗೋ ಎಂದೆಲ್ಲಾ ಹೇಳುತ್ತಿದ್ದಳಂತೆ. ಇದನ್ನೇ ಕೇಳಿಸಿಕೊಂಡು ಸುಮ್ಮನಿದ್ದರಂತೆ. ಇಡೀ ಊರಿಗೆ ಗೊತ್ತು ಕೇಳಿ ಎಂದಿದ್ದಾರೆ ಅಜ್ಜಿ. ಅಲ್ಲದೇ, ಮೇಘನಾ ಸುಖಾಸುಮ್ಮನೆ ತನ್ನ ಮೇಲೆ ದೂರು ಒಪ್ಪಿಸಿದ್ದಕ್ಕೆ ಶಂಕ್ರಣ್ಣನ ಅಮ್ಮನಿಗೆ ಹೊಡೆಯಲು ಹೋಗಿದ್ದನಂತೆ. ಅದೇ ಬೇಸರದಲ್ಲಿ ನೇಣು ಹಾಕಿಕೊಂಡಿದ್ದಾನೆ. ನನಗಿನ್ಯಾರು ಗತಿ ಎನ್ನುತ್ತಾರೆ ಅಜ್ಜಿ. ಆದರೆ, ಈಗ ಮೇಘನಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಳೆ. ಇದೇ ಸಂದರ್ಭದಲ್ಲಿ ಶಂಕ್ರಣ್ಣ ಆತ್ಮಹತ್ಯೆ ಮಾಡಿಕೊಂಡಿರುವುದು ವಿಪರ್ಯಾಸವೇ ಸರಿ.