ಶಿವಣ್ಣನ ಹಾಡಿಗೆ ವೇದಿಕೆ ಮೇಲೆ ಕುಣಿದು ಕುಪ್ಪಳಿಸಿದ ಶಾರುಕ್ ಖಾನ್ ; ವೈರಲ್ ವಿಡಿಯೋ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ರಾಜ್ ಕುಮಾರ್ ಅವರ ಕುಟುಂಬದ ಒಂದೊಂದು ಕುಡಿಗಳು ಒಂದೊಂದು ಮುತ್ತುಗಳು. ಇತ್ತೀಚೆಗಷ್ಟೇ ಶಿವರಾಜ್ ಕುಮಾರ್ ಅವರ ನಟನೆಯ ವೇದ ಚಿತ್ರ ರಿಲೀಸ್ ಆಗಿತ್ತು. ಇದಾದ ಬಳಿಕ ಶಿವಣ್ಣ ಅವರು ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಆದರೆ, ಅದಕ್ಕೂ ಮುನ್ನ ಶಿವರಾಜ್ ಕುಮಾರ್ ಅವರು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಜಡ್ಜ್ ಸ್ಥಾನದಲ್ಲಿ ಕುಳಿತಿದ್ದರು. ಮಕ್ಕಳು ಬಂದು ಡ್ಯಾನ್ಸ್ ಮಾಡಿದಾಗಲೆಲ್ಲಾ ಶಿವಣ್ಣ ಕೂಡ ಸಕತ್ ಎಂಜಾಯ್ ಮಾಡುತ್ತಿದ್ದರು. ಅದ್ಭುತವಾಗಿ ಡ್ಯಾನ್ಸ್ ಮಾಡಿದವರಿಗೆ ಹ್ಯಾಟ್ ಕೊಟ್ಟು ಪ್ರಶಮಶಿಸುತ್ತಿದ್ದರು. 

ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರೇ ಕನ್ನಡ ಇಂಡಸ್ಟ್ರಿಯ ನಾಯಕತ್ವವನ್ನು ವಹಿಸಿಕೊಳ್ಳಬೇಕು ಎಂದು ಹಲವರು ಮನವಿ ಕೂಡ ಮಾಡಿದ್ದರು. ಅಭಿಮಾನಿಗಳಷ್ಟೇ ಅಲ್ಲದೆ ನಟ-ನಟಿಯರು ಕೂಡ ಕನ್ನಡಿಗರಿಗೆ ಅನ್ಯಾಯವಾಗುತ್ತಿದೆ. ಹಾಗಾಗಿ ಶಿವರಾಜಕುಮಾರ್ ಅವರು ನಾಯಕತ್ವ ವಹಿಸಿಕೊಳ್ಳಬೇಕು ಎಂದು ಕೋರಿಕೊಂಡಿದ್ದರು. ಅದಕ್ಕೂ ಶಿವಣ್ಣ ಅವರು ಒಲ್ಲೆ ಎಂದಿದ್ದರು. ಇನ್ನು ಶಿವಣ್ಣ ಅವರು ಯಾವುದೇ ಕಾರ್ಯಕ್ರಮಕ್ಕೆ ಹೋದರೂ, ಅಲ್ಲಿನ ವಾತಾವರಣಕ್ಕೆ ತಕ್ಕಂತೆ ಹೊಂದಿಕೊಳ್ಳುತ್ತಾರೆ. ಡೌನ್ ಟು ಅರ್ತ್ ಎಂಬಂತೆ ಶಿವಣ್ಣ ಅವರು ಚಿಕ್ಕವರಿಗೂ ಗೌರವ ಕೊಡುತ್ತಾರೆ. 

ಹೀಗೆ ಶಿವಣ್ಣ ಅವರು ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದು. ಈ ಕಾರ್ಯಕ್ರಮದಲ್ಲಿ ಬಾಲಿವಿಡ್ ನಟ ಶಾರುಕ್ ಖಾನ್ ಕೂಡ ಆಗಮಿಸಿದ್ದರು. ಆಗ ಮೈಕ್ ಹಿಡಿದು ಮಾತನಾಡಿದ ಶಾರುಕ್ ಖಾನ್ ಅವರು ಶಿವಣ್ಣ ಅವರಿಗೆ ಮೈಕ್ ಕೊಟ್ಟರು. ಶಿವಣ್ಣ ಹಾಡು ಹಾಡಲು ಶುರು ಮಾಡೇ ಬಿಟ್ಟೆರು. ಜೋಗಿ ಜೋಗಿ.. ಎಂಬ ಹಾಡನ್ನು ಶಿವಣ್ಣ ಅವರು ಹಾಡುತ್ತಾರೆ. ಆಗ ವೇದಿಕೆ ಮೇಲಿದ್ದ ಶಾರುಕ್ ಖಾನ್ ಅವರು ಚಪ್ಪಾಳೆ ತಟ್ಟುತ್ತಾ ಹಾಗೆ ಸ್ಟೆಪ್ ಕೂಡ ಹಾಕುತ್ತಾರೆ. ಈ ವೀಡಿಯೋ ಈಗ ಯೂಟ್ಯೂಬ್ ಚಾನೆಲ್ ನಲ್ಲೂ ವೈರಲ್ ಆಗಿದೆ.( video credit : kannada entertainment)