ಶ್ರೀದೇವಿ ಮಗಳು ಜಿಮ್‌ ನಲ್ಲಿ ಬೆವರಿಳಿಸುವ ವೀಡಿಯೋ ಸಕತ್‌ ವೈರಲ್..!! ಸುಮ್ಮೆ ಅಲ್ಲ ಈ ನಟಿಯರು

ಶ್ರೀದೇವಿ ಮಗಳು ಜಿಮ್‌ ನಲ್ಲಿ ಬೆವರಿಳಿಸುವ ವೀಡಿಯೋ ಸಕತ್‌ ವೈರಲ್..!! ಸುಮ್ಮೆ ಅಲ್ಲ ಈ ನಟಿಯರು

ಶ್ರೀದೇವಿ ಅವರ ಪುತ್ರಿಯೂ ಅತಿಲೋಕ ಸುಂದರಿ ಎಂದರೆ ತಪ್ಪಾಗಲಾರದು. ಜಾನ್ವಿ ಕಪೂರ್ ಸಕತ್‌ ಹಾಟ್‌ ಆಗಿ ಆಗಾಗ ಸೋಶಿಯಲ್‌ ಮೀಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಕಳೆದ ಕೆಲ ಸಮಯದಿಂದ ಜಾನ್ವಿ ಕಪೂರ್‌ ಅವರು ತಮ್ಮ ಅಭಿನಯದ ಮಿಲಿ ಚಿತ್ರದ ಪ್ರಚಾರದ ಕಾರ್ಯದಲ್ಲಿ ಬ್ಯುಸಿಯಾಗಿಬಿಟ್ಟಿದ್ದರು. ಸಿನಿಮಾದ ಪ್ರಚಾರಕ್ಕಾಗಿ ದೆಹಲಿಯ ಮಾಲ್‌ ಒಂದರಲ್ಲಿ ಜಾನ್ವಿ ಕಪೂರ್‌ ಅವರು ಪಾಪ್‌ ಕಾರ್ನ್‌ ಕೂಡ ಮಾರಿದ್ದರು. ಸಿನಿಮಾ ರಂಗದಲ್ಲಿ ಜಾನ್ವಿ ಕಪೂರ್‌ ಅವರಿಗೆ ಅವರ ತಾಯಿಯಷ್ಟು ಗೆಲುವು ಸಿಕ್ಕಿಲ್ಲ. ಹಾಗಿದ್ದರೂ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಕಳೆದ ವಾರ ಅಂದರೆ ಇದೇ ನವೆಂಬರ್ 4 ರಂದು ಮಿಲಿ ಚಿತ್ರ ಬಿಡುಗಡೆ ಆಗಿದೆ. ಈ ಚಿತ್ರ ಹೆಲನ್ ಸಿನಿಮಾದ ರಿಮೇಕ್ ಎನ್ನಲಾಇದೆ. ಮಿಲಿ ಚಿತ್ರವನ್ನು ಜಾನ್ವಿ ತಂದೆ ಬೋನಿ ಕಪೂರ್ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಕೌಶಲ್ಯ ಹಾಗೂ ಮನೋಜ್ ಪಾಹ್ವಾ ಸೇರಿದಂತೆ ಹಲವರು ನಟಿಸಿದ್ದಾರೆ. ಸಿನಿಮಾಗಳ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದ ಜಾನ್ವಿ ಕಪೂರ್ ಅವರು, ಇದೀಗ ಫ್ರೀ ಮಾಡಿಕೊಂಡಿದ್ದಾರೆ. ಸಿನಿಮಾ ಬಿಡುಗಡೆಯಾದ ಮೇಲೆ ನಿರಾಳರಾಗಿರುವ ಜಾನ್ವಿ ಕಪೂರ್ ಅವರು ಜಿಮ್ ನಲ್ಲಿ ಸಮಯ ಕಳೆಯುತ್ತಿದ್ದಾರೆ.    

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿರುವ ಜಾನ್ವಿ ಕಪೂರ್ ಅವರ ವೀಡಿಯೋ ಇದೀಗ ವೈರಲ್ ಆಗಿದೆ. ಜಾನ್ವಿ ಅವರು ವರ್ಕೌಟ್ ಮಾಡುವಾಗ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ರೀನ್ ಡ್ರೆಸ್ ನಲ್ಲಿ ವೈಟ್ ಲಿಫ್ಟ್ ಮಾಡುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೋ ಸಕತ್ ಹಾಟ್ ಆಗಿದ್ದು, ಅಮ್ಮನಂತೆ ಮಗಳು ಕೂಡ ಅತಿಲೋಕ ಸುಂದರಿ ಎಂದು ಕಮೆಂಟ್ ಕೂಡ ಮಾಡುತ್ತಿದ್ದಾರೆ.