ಯುವತಿಯರೇ ಇಂತಹ ಪ್ರೀತಿ ನಿಮಗೆ ಬೇಕಾ : ಪ್ರೆಸಿಡೆನ್ಸಿ ಕಾಲೇಜ್ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯಿಂದ ವಿದ್ಯಾರ್ಥಿನಿಗೆ ಚಾಕು ಇರಿತ

ಯುವತಿಯರೇ ಇಂತಹ ಪ್ರೀತಿ ನಿಮಗೆ ಬೇಕಾ : ಪ್ರೆಸಿಡೆನ್ಸಿ ಕಾಲೇಜ್ ಕ್ಯಾಂಪಸ್ನಲ್ಲಿ ವಿದ್ಯಾರ್ಥಿಯಿಂದ ವಿದ್ಯಾರ್ಥಿನಿಗೆ ಚಾಕು ಇರಿತ

ಈ ಸಮಾಜ ಎತ್ತ ಸಾಗುತ್ತಿದೆ  ಅದರಲ್ಲೂ ಯುವ ಜನಾಂಗಕ್ಕೆ ಏನಾಗಿದೆ  ಇವರ ಮನಸ್ಥಿತಿಗೆ ಯಾವ ರೋಗ ಬಂದಿದೆ ಅಂತ ಗೊತ್ತಾಗುತ್ತಿಲ್ಲ . ವಿದ್ಯಾರ್ಥಿಗಳು ಕಾಲೇಜು ಗೆ ಬರುವುದು ಪಾಠ ಕಲಿಯುವದಕ್ಕೆ ಅಲ್ಲವಾ . ಆದರೆ ಇದನ್ನು ಬಿಟ್ಟು ಪ್ರೀತಿ , ಪ್ರೇಮ ಅಂತ ಪ್ರಾಣವನ್ನೇ ಕಳೆದು ಕೊಳ್ಳುತ್ತಿದ್ದಾರೆ . ಈ ಕೆಳಗಿನ ಒಂದು ಘಟನೆ ನೋಡಿ ಇನ್ನಾದರೂ ಯುವ ಸಮೂಹ ಬುದ್ದಿ ಕಲಿಯಲಿ .ಏನಾಗಿದೆ ನೋಡಣ ಬನ್ನಿ .

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಮರ್ಡರ್ ನಡೆದಿದೆ. ವಿದ್ಯಾರ್ಥಿ ವಿದ್ಯಾರ್ಥಿನಿಗೆ ಚಾಕುವಿನಿಂದ ಇರಿದಿದ್ದಾರೆ.ಲವ್ ಫೇಲ್ಯೂರ್​ನಿಂದ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ವಿದ್ಯಾರ್ಥಿನಿ ಲಯಸ್ಮಿತಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಘಟನೆ ರಾಜಾನುಕುಂಟೆಯ ಪ್ರೆಸಿಡೆನ್ಸಿ ಕಾಲೇಜ್ ಕ್ಯಾಂಪಸ್​ನಲ್ಲಿ ನಡೆದಿದೆ. ಪವನ್​ ಕಲ್ಯಾಣ ವಿದ್ಯಾರ್ಥಿನಿಯನ್ನ ಚಾಕುವಿನಿಂದ ಇರಿದಿದ್ದು, ಬಳಿಕ ತಾನು ಕತ್ತು ಸೀಳಿಕೊಂಡು ಆತ್ಮಹತ್ಯೆ ಯತ್ನಿಸಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೊಲೆಯಾದ ವಿದ್ಯಾರ್ಥಿನಿಯಲ್ಲಿ ಲಯಸ್ಮಿತ (19 ) ಎಂದು ಗುರುತಿಸಲಾಗಿದೆ. ಕೋಲಾರ ಮೂಲದ ಮೃತ ವಿದ್ಯಾರ್ಥಿನಿ ಬಿಟೆಕ್ ಅಭ್ಯಾಸ ಮಾಡುತ್ತಿದ್ದಳು. ಕಾಲೇಜಿಗೆ ತೆರಳಿದ ಪವನ್ ಕಲ್ಯಾಣ್ ಕ್ಲಾಸ್ ರೂಂ ಅಲ್ಲಿ ಇದ್ದ ಲಯಸ್ಮಿತಾ ಗೆ ಹೊರಗೆ ಬರಲು ಹೇಳಿದ್ದಾನೆ. ಬಳಿಕ 10 ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬಳಿಕ  ಪವನ್ ಕಲ್ಯಾಣ್ ಕೂಡ ತನಗೆ ಚಾಕುವಿನಿಂದ ಇರಿದುಕೊಂಡಿದ್ದಾನೆ.  ಇನ್ನು ಇಬ್ಬರೂ ಕೂಡ ಒಂದೇ ಊರಿನವರು ಎಂದು ತಿಳಿದುಬಂದಿದೆ. ಆದರೆ, ಪವನ್ ಕಲ್ಯಾಣ್ ಬೇರೆ‌ ಕಾಲೇಜಿನಲ್ಲಿ ಬಿಸಿಎ ಓದುತ್ತಿದ್ದನು. ಪ್ರೀತಿ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.