ಸಾವು ಯಾವ ಕ್ಷಣದಲ್ಲಾದ್ರು ಬರಬಹುದು ಗಣೇಶ ಮಂಟಪದಲ್ಲಿ ಡಾನ್ಸ್‌ ಮಾಡುವಾಗ ಹೃದಯಾಘಾತ, ಯುವಕ ಸ್ಥಳದಲ್ಲೇ ಸಾವು : ವಿಡಿಯೋ ವೈರಲ್

ಸಾವು ಯಾವ ಕ್ಷಣದಲ್ಲಾದ್ರು ಬರಬಹುದು ಗಣೇಶ ಮಂಟಪದಲ್ಲಿ ಡಾನ್ಸ್‌ ಮಾಡುವಾಗ ಹೃದಯಾಘಾತ, ಯುವಕ ಸ್ಥಳದಲ್ಲೇ ಸಾವು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.

ಹೌದು ಗೆಳೆಯರೇ ಜೀವನ ಅನ್ನುವದು ಹಾಗೆಯೆ ಹುಟ್ಟಿದವರು ಸಾಯಲೇ ಬೇಕು ಆದರೆ ಚಿಕ್ಕ ವಯಸಿನಲ್ಲಿ ಯಾರಿಗೂ ಸಾವು ಬರುವುದು ಬೇಡ ಒಂದು ಸಣ್ಣ ಸೂಚನೆಯೇ ನೀಡದೆ ಹಠಾತ್ ಸಾವು ಸಂಭವಿಸುತ್ತದೆ . ಏನು ಕಾಯಲೆ ಇಲ್ಲದ್ದಿದರು ಸಹ ಈಗಿನ ಕಾಲದಲ್ಲಿ ಹಾರ್ಟ್ ಅಟ್ಯಾಕ್ ಆಗಿ ಸಾಯುವರ ಸಂಖ್ಯೆ ಹೆಚ್ಚಾಗುತ್ತಿದೆ . ಇಲ್ಲೊಂದು ಘಟನೆ ನೋಡಿ  ಧರ್ಮಾವರಂನ ಗಣೇಶ ಮಂಟಪದಲ್ಲಿ ಯುವಕನೊಬ್ಬ ಡ್ಯಾನ್ಸ್ ಮಾಡುತ್ತಿದ್ದಾಗ ಕುಸಿದು ಬಿದ್ದಿದ್ದಾನೆ.

ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್‌ ಆಗುತ್ತಿದೆ. 

ವಿಡಿಯೋದಲ್ಲಿ ಗಣೇಶೋತ್ಸವದ ಸಂಭ್ರಮದಲ್ಲಿ ಯುವಕರಿಬ್ಬರು ಕುಣಿದು ಕುಪ್ಪಳಿಸುವುದು ಕಂಡು ಬರುತ್ತಿದೆ. ಅವರು ಡ್ಯಾನ್ಸ್ ಮಾಡುವಾಗ ಇದ್ದಕ್ಕಿದ್ದ ಹಾಗೆ ಒಬ್ಬರು ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಬುಧವಾರ (ಸೆಪ್ಟೆಂಬರ್ 20) ರಾತ್ರಿ ಮಾರುತಿ ನಗರದ ವಿನಾಯಕ ಮಂಟಪದ (ಪಂದಳ) ಮುಂಭಾಗದಲ್ಲಿ ಈ ಘಟನೆ ನಡೆದಿದೆ.

ಯುವಕನನ್ನು 26 ವರ್ಷದ ಪ್ರಸಾದ್ ಎಂದು ಗುರುತಿಸಲಾಗಿದೆ. ಪ್ರಸಾದ್ ನೃತ್ಯ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದರು.ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.