ವರ್ತೂರು ನಂತರ ಮತ್ತೊಂದು ಕೇಸ್ ಭೀತಿಯಲ್ಲಿ ತನಿಷ! ಯಾವ ಕೇಸ್ ಹಾಗೂ ಕಾರಣ ಏನು ಗೊತ್ತಾ?

ನಮ್ಮ ಕನ್ನಡ ರಿಯಾಲಿಟಿ ಶೋ ಗಳ ಪೈಕಿ ದೊಡ್ಡ ಮಟ್ಟದ ಜನಪ್ರಿಯತೆ ಹಾಗೂ ಪ್ರೇಕ್ಷಕರ ಮನಸ್ಸನ್ನು ಗೆದ್ದ ರಿಯಾಲಿಟಿ ಶೋ ಎಂದರೆ ಅದು ಬಿಗ್ ಬಾಸ್ ಕನ್ನಡ. ಇದು ಹಿಂದಿ ಅಂತರಣಿಕೆಯಲ್ಲಿ ಕೊಡ ಮೊಡಿಬಂದಿದ್ದರು ಕೊಡ ಎಲ್ಲಾ ಭಾಷೆಯಲ್ಲಿ ಕೊಡ ತನ್ನದ ಆದ ಸ್ಥಾನ ಹಾಗೂ ಕ್ರೇಜ್ ನನ್ನ ಹುಟ್ಟುಹಾಕಿದೆ ಎಂದರೆ ತಪ್ಪಾಗಲಾರದು. ಈಗಾಗಲೇ ಎಲ್ಲ ಭಾಷೆಯಲ್ಲಿ ಈ ಶೋ ಮೂಡಿ ಬರುತ್ತಿದ್ದು ಎಲ್ಲದರಲ್ಲೂ ಎರಡಂಕಿಯ ಸೀಸನ್ ಗಳು ಯಶಸ್ವಿಯಾಗಿ ಮುಗಿದಿದೆ. ಈ ಬಾರಿ ನಮ್ಮ ಕನ್ನಡ ಬಿಗ್ ಬಾಸ್ ಸೀಸನ್ ಸರದಿ. ಈ ಬಾರಿ ದಶಕದ ಸೀಸನ್ ಆಗಿರುವ ಕಾರಣ ಪ್ರೇಕ್ಷಕರಿಗೆ ಎಲ್ಲವನ್ನೂ ದುಪ್ಪಟ್ಟು ನೀಡುವಂತೆ ತಿಳಿಸಿತ್ತು. ಆದರೆ ಇವರ ವಿಭಿನ್ನತೆಗೆ ಹೊಸ ಹೊಸ ನಿಯೂಜಿತ ಟಾಸ್ಕ್ ಮಾಡುತಿದ್ದರು ಕೊಡ ಸ್ಪರ್ಧಿಗಳ ವಿಷಯದಲ್ಲಿ ಈ ಬಾರಿ ಬಿಗ್ ಬಾಸ್ ತಂಡ ಎಡವಿದೆ.
ಇನ್ನೂ ಈ ಸೀಸನ್ ನಲ್ಲಿ ಎಂದು ಕೊಡ ನಡೆದಿರದ ಘಟನೆಗಳು ನಡೆಯುತ್ತಲೇ ಬರುತ್ತಿದೆ. ಈ ಕಾರಣದಿಂದಲೇ ಪ್ರೇಕ್ಷಕರು ಹಾಗೂ ಹಳೆಯ ಸೀಸನ್ ಸ್ಪರ್ಧಿಗಳು ಐದೆ ವಾರದಲ್ಲಿ ವರ್ಸ್ಟ್ ಸೀಸನ್ ಯೇವರ್ ಎನ್ನುವ ಹ್ಯಾಶ್ ಟ್ಯಾಗ್ ಶುರು ಮಾಡಿಕೊಂಡಿದ್ದಾರೆ. ಇನ್ನೂ ಈ ಸೀಸನ್ ಐದು ವಾರಗಳನ್ನು ತುಂಬಿಸಿದ್ದ ಮನೆಯಿಂದ ಮೂರು ಸ್ಪರ್ಧಿಗಳು ಮನೆಯಿಂದ ಹೊರ ನಡೆದಿದ್ದಾರೆ. ಈ ಐದು ವಾರಗಳಲ್ಲಿ ಬಿಗ್ ಬಾಸ್ ನಲ್ಲಿ ಒಳಗಡೆ ಹಾಗೂ ಹೊರಗಡೆ ಸಾಕಷ್ಟು ಅಹಿತಕರ ಘಟನೆ ಹೆಚ್ಚಾಗಿದೆ. ಮನೆಯ ಒಳಗೆ ಎಂದರೆ ಜಗಳ ಹಾಗೂ ಕದನ ಹೆಚ್ಚಾಗಿದ್ದರೆ ಮನೆಯಿಂದ ಹೊರಗೆ "ವರ್ತೂರು ಸಂತೋಷ್" ಅವರ ಹುಲಿ ಉಗುರನ್ನು ಧರಿಸುವುದರಿಂದ ಪ್ರಕರಣ ದಾಖಲು ಮಾಡಿ ಅದರಿಂದ ಹೊರ ಬಂದು ಮತ್ತೆ ಬಿಗ್ ಬಾಸ್ ಮನೆಗೆ ರಿ ಎಂಟ್ರಿ ಕೊಟ್ಟಿದ್ದಾರೆ.
ಆದರೆ ನೆನ್ನೆ 34 ಲಕ್ಷ ವೋಟ್ ಪಡೆದುಕೊಂಡು ಸೇವ್ ಆಗಿದ್ದರು ಕೊಡ ತನಗೆ ಎರಡು ವಾರದಿಂದ ಮನೆಯಿಂದ ಹೊರಗಡೆ ನಡೆದ ಘಟನೆಗಳಿಂದ ಹೋರ ಬರಲು ಸಾಧ್ಯವಾಗುತ್ತಿಲ್ಲ ಹಾಗಾಗಿ ನಾನು ಮನೆಗೆ ಹೋಗಬೇಕು ಎಂದು ಮನವಿ ಮಾಡಿಕೊಂಡರು. ಇನ್ನೂ "ಸುದೀಪ್" ಅವರು ಕೊಡ ಅವರ ಮನ ಒಲಿಸಲು ಪ್ರಯತ್ನ ಮಾಡಿ ಅವರ ಇಚ್ಛೆಯಂತೆ ಮಾಡಲು ಬಿಟ್ಟಾಗ ಸ್ಪರ್ಧಿಗಳು ಕೊಡ ಅವರ ಮನ ಒಲಿಸಲು ಪ್ರಯತ್ನ ಮಾಡುತ್ತಾರೆ. ಆ ವೇಳೆಯಲ್ಲಿ "ತನಿಷ" ಅವರು ವರ್ತೂರು ಅವರ ಮನ ಪರಿವರ್ತನೆ ಮಾಡುವ ಸಂದರ್ಭದಲ್ಲಿ "ವಡ್ಡ ಅಲ್ಲಾ ಆದರೆ ನೀನು ವಡ್ಡನ ರೀತಿಯಲ್ಲಿ ಆಕ್ಟಿಂಗ್ ಮಾಡುತ್ತಿದ್ದಿಯಾ" ಎಂದು ಹೇಳಿದರು ಇದೀಗ ಇವ್ರ ಈ ಹೇಳಿಕೆಗೆ "ಭೋವಿ ಸಮಾಜ"ದ ಜನಾಂಗ ಕೋಪಗೊಂಡು ಕೇಸ್ ದಾಖಲು ಮಾಡಿದ್ದಾರೆ. ಇದರಿಂದ ಮುಂದೆ ಬಿಗ್ ಬಾಸ್ ಮನೆಯಲ್ಲಿ ಹಾಗೂ ತನಿಷ ಅವರು ಹೇಗೆ ಎದುರಿಸುತ್ತಾರೆ ಎಂದು ನಾವೆಲ್ಲರೂ ಕಾದು ನೋಡಬೇಕಿದೆ.