ಏನ್ ಕಾಲ ಬಂತಪ್ಪ ; ಪ್ರಿಯಕರನಿಗಾಗಿ ಬಾವಿ ಪತಿಯನ್ನು ಕೊಲ್ಲಲು ಯತ್ನಿಸಿದ ಅಪ್ರಾಪ್ತ ಬಾಲಕಿ: ಹುಡುಗಿ ಮಾಡಿದ್ದ ಪ್ಲಾನ್ ಕೇಳಿದರೆ ದಂಗಾಗ್ತೀರಾ

ಏನ್ ಕಾಲ ಬಂತಪ್ಪ ; ಪ್ರಿಯಕರನಿಗಾಗಿ ಬಾವಿ ಪತಿಯನ್ನು ಕೊಲ್ಲಲು ಯತ್ನಿಸಿದ ಅಪ್ರಾಪ್ತ ಬಾಲಕಿ: ಹುಡುಗಿ ಮಾಡಿದ್ದ ಪ್ಲಾನ್ ಕೇಳಿದರೆ ದಂಗಾಗ್ತೀರಾ


ಈಗ ಪ್ರತಿಯೊಬ್ಬರೂ ಪ್ರೀತಿ ಪ್ರೇಮ ಎಂದು ಬದುಕನ್ನು ಹಾಳು ಮಾಡಿಕೊಳ್ಳುತ್ತಾರೆ. ಓದುವ ವಯಸ್ಸಿನಲ್ಲಿ ಓದಿ ನಂತರ ಸ್ವಂತ ಕಾಲಿನ ಮೇಲೆ ನಿಲ್ಲಲಿ ಎಂದು ಪೋಷಕರು ಕಷ್ಟಪಟ್ಟು ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾರೆ. ಆದರೆ, ಮಕ್ಕಳು ಪ್ರೀತಿ ಪ್ರೇಮ ಎಂದು ಹಾಳಾಗುತ್ತಿದ್ದಾರೆ. ಪ್ರತೀ ದಿನವೂ ಒಂದಲ್ಲ ಒಂದು ಕೂಡ ಪ್ರೀತಿ ವಿಚಾರವಾಗಿ ಪ್ರಾಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೆ ಇದೆ. ಮದುವೆಯಾದವರು, ಇನ್ನು ಅಪ್ರಾಪ್ತ ಮಕ್ಕಳು ಕೂಡ ಪ್ರೀತಿಗಾಗಿ ಪೋಷಕರನ್ನು, ಪತಿಯನ್ನು ಕೊಲೆ ಕೂಡ ಮಾಡುತ್ತಿದ್ದಾರೆ. 

ಇದೀಗ ರಾಜ್ಯದಲ್ಲೂ ಅಂತಹದ್ದೇ ಒಂದು ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ರಾಣೇಬೆನ್ನೂರು ಪಟ್ಟಣದ ಹೊರವಲಯದ ಓಂ ಪಬ್ಲಿಕ್ ಸ್ಕೂಲ್  ನಲ್ಲಿ ಓದುತ್ತಿದ್ದ ಅಪ್ರಾಪ್ತ ಬಾಲಕಿ ಕೊಲೆಯನ್ನು ಮಾಡಿದ್ದಾರೆ. ಬಾಲಕಿಗೆ ಕಳೆದ ತಿಂಗಳು ನಿಶ್ಚಿತಾರ್ಥ ಮಾಡಲಾಗಿತ್ತು. ಹರಪನಹಳ್ಳಿ ತಾಲೂಕಿನಲ್ಲಿ ಸೇಲ್ಸ್ ಮನ್ ಆಗಿ ಹುಡುಗ ಕೆಲಸ ಮಾಡಿಕೊಂಡಿದ್ದ. ಅಪ್ರಾಪ್ತ ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ. ಆದರೆ, ಬಾಲಕಿ ಯುವಕನನ್ನು ಮಾತನಾಡಬೇಖು ಎಂದು ಪಾರ್ಕ್ ಒಂದಕ್ಕೆ ಕರೆಸಿಕೊಂಡಿದ್ದಾಳೆ.  

ಮದುವೆಯಾಗುವ ಹುಡುಗಿ ಕರೆಯುತ್ತಿದ್ದಾಳೆ ಎಂದು ಹುಡುಗನು ಕೂಡ ಪ್ರೀತಿಯಿಂದ ಬಂದಿದ್ದ. ಬಾಲಕಿ ರೀಲ್ಸ್ ಮಾಡಬೇಕು ಎಂದು ಹೇಳಿ, ಆತನ ಕೈಯನ್ನು ಕಟ್ಟಿದ್ದಾಳೆ. ಯುವಕನು ಕೂಡ ಪ್ರೀತಿಯಿಂದ ಮಾಡುತ್ತಿದ್ದಾಳೆ ಎಂದು ನಂಬಿ ಹೇಳಿದ್ದಕ್ಕೆಲ್ಲಾ ಒಪ್ಪಿಕೊಂಡಿದ್ದಾನೆ. ಕೊನೆಗೆ ಬಾಲಕಿ ಕುತ್ತಿಗೆಗೆ ಚಾಕು ಹಾಕಿದ್ದಾಳೆ. ಆಕೆ ತಾನು ಪ್ರೀತಿಸಿದ ಹುಡುಗನಿಗಾಗಿ ಈ ಕೃತ್ಯವನ್ನು ಎಸಗಿರುವುದು ತಿಳಿದು ಬಂದಿದೆ. 

ತಕ್ಷಣವೇ ಯುವಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಯುವಕನ ಪೋಷಕರು ಬಾಲಕಿ ವಿರುದ್ಧ ಎಫ್ ಐಆರ್ ದಾಖಲಿಸಿದ್ದಾರೆ. ಬಾಲಕಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅಪ್ರಾಪ್ತ ವಯಸ್ಸಿನ ಬಾಲಕಿ ಪ್ರೀತಿ ಮಅಡಿದ್ದಲ್ಲದೇ, ನಿಶ್ಚಿತಾರ್ಥ ಮಾಡಿಕೊಂಡ ಯುವಕನನ್ನು ಕೊಲೆ ಮಾಡುವಷ್ಟು ಕೆಟ್ಟ ಆಲೊಚನೆಗಳನ್ನು ತುಂಬಿಕೊಂಡಿದ್ದಳು ಎಂಬುದನ್ನು ತಿಳಿದು ಜನ ಶಾಕ್ ಆಗಿದ್ದಾರೆ.