90ರ ದಶಕದಲ್ಲಿ ಖ್ಯಾತ ಹಾಸ್ಯ ನಟ ಆಗಿ ಅವರದೇ ಆದ ಮಾತಿನ ಕಚಗುಳಿ ಇಡುತ್ತಾ ಸಿನಿರಂಗದಲ್ಲಿ ಅಪಾರವಾಗಿ ಬೆಳೆದಿದ್ದಾರೆ..ಹೌದು ಅಂತಹವರ ಪಟ್ಟಿಯಲ್ಲಿ ಬರುವ ನಟ ಕನ್ನಡ ಸಿನಿಮಾರಂಗದ ಖ್ಯಾತ ಕಾಮಿಡಿ ಕಲಾವಿದ ಹಾಸ್ಯ ನಟ ಟೆನ್ನಿಸ್ ಕೃಷ್ಣ ಅವರು ಸಹ ಒಬ್ಬರು. ಇವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಖ್ಯಾತ ಹಾಸ್ಯ ನಟರ ಪಟ್ಟಿಯಲ್ಲಿ ಇವರು ಸಹ ಸದಾ ಮುಂದಿರುತ್ತಾರೆ. ಮಾರಮ್ಮನ ಡಿಸ್ಕೊ ಇನ್ನೂ ಬೆಲ್ಲೂ ಹೊಡಿಲಿಲ್ಲವೇ ಎಂಬ ಇವರ ಗಡಿಬಿಡಿ ಕೃಷ್ಣ ಸಿನಿಮಾದ ಡೈಲಾಗ್ ಇಂದಿಗೂ ಸಹ ಫೇಮಸ್. ಇವರ ಮತ್ತು ದೊಡ್ಡಣ್ಣ ಅವರ ಕಾಂಬಿನೇಷನ್ ದೃಶ್ಯದ ಕೆಲವು ವಿಡಿಯೋ ತುಣುಕುಗಳು ಈಗಲೂ ಟಿವಿಯಲ್ಲಿ ಪ್ರಸಾರ ಆಗುತ್ತಿದೆ ಎಂದರೆ, ಬೇರೆ ಕೆಲಸ ಇದ್ದರೂ ಕೂಡ ಕೆಲ ಹೊತ್ತು ಇವರಿಬ್ಬರ ಕಾಮಿಡಿ ಜಲಕ್ ನೋಡಿಕೊಂಡೆ ಎಲ್ಲರೂ ಹೋಗುವುದು ಅಷ್ಟರಮಟ್ಟಿಗೆ ಟೆನ್ನಿಸ್ ಕೃಷ್ಣ ನಟನೆಯಲ್ಲಿ ಕಾಮಿಡಿ ಮಾಡುವುದರಲ್ಲಿ ಎತ್ತಿದ ಕೈ.
90ರದಶಕದಿಂದ ಕನ್ನಡದ ಬಹುತೇಕ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿರುವ ಟೆನ್ನಿಸ್ ಕೃಷ್ಣ ಅವರು ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಟೆನ್ನಿಸ್ ಕೃಷ್ಣ ಅವರಿಗೆ ಟೆನ್ನಿಸ್ ಕೃಷ್ಣ ಎನ್ನುವ ಹೆಸರು ಬರಲು ಮೂಲ ಕಾರಣ ಕೂಡ ಇದ್ದು ಇವರು ಸಿನಿಮಾರಂಗದಲ್ಲಿ ಗುರುತಿಸಿಕೊಳ್ಳುವ ಹಂತದಲ್ಲಿ ಆಗಲೇ ಕೃಷ್ಣ ಎನ್ನುವವ ನಟರು ಗುರುತಿಸಿಕೊಂಡಿದ್ದರು. ಹಾಗಾಗಿ ಇವರು ಕೂಡ ಟೆನ್ನಿಸ್ ಕೋಚ್ ಆಗಿದ್ದೂ ಸಿನಿ ಕ್ಷೇತ್ರಕ್ಕೆ ಬರುವ ಮುನ್ನ, ಹಾಗಾಗಿಯೇ ಇವರಿಗೆ ಟೆನ್ನಿಸ್ ಎಂಬ ಹೆಸರನ್ನ ಕೃಷ್ಣ ಹಿಂದೆ ಸೇರಿಸಿ ಕರೆಯಲಾಗುತ್ತದೆ. ಹಾಗೆ ಟೆನ್ನಿಸ್ ಕೃಷ್ಣ ಎಂದೇ ಖ್ಯಾತಿ ಹೊಂದುತ್ತಾರೆ. ಟೆನ್ನಿಸ್ ಕೃಷ್ಣ ಅವರು ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ.
ಇಂದಿಗೂ ಕೂಡ ಖ್ಯಾತ ಕಲಾವಿದರುಗಳ ಪಟ್ಟಿಯಲ್ಲಿದ್ದಾರೆ ನಟ ಟೆನ್ನಿಸ್ ಕೃಷ್ಣ. ಇವರು ಬಿಗ್ ಬಾಸ್ ಮನೆಗೆ ಬರುತ್ತಾರೆ ಎಂದು ಸಾಕಷ್ಟು ಬಾರಿ ಸುದ್ದಿಯಾಗಿದೆ. ಈ ಕುರಿತು ಸಾಕಷ್ಟು ಬಾರಿ ಸಂದರ್ಶನದಲ್ಲಿಯೇ ಟೆನ್ನಿಸ್ ಕೃಷ್ಣ ಹೇಳಿಕೊಂಡಿದ್ದು ಬಿಗ್ಬಾಸ್ ನವರು ಕೋಟಿ ಕೋಟಿ ಹಣ ಕೊಟ್ಟರೂ ಕೂಡ ನಾನು ಹೋಗೋದಿಲ್ಲ, ಬಿಗ್ಬಾಸ್ ಮನೆಗೆ ಕಾಲಿಡುವುದಿಲ್ಲ ಎಂದು ಹೇಳುತ್ತಲೇ ಬರುತ್ತಿದ್ದೇನೆ, ಆದರೂ ಇಂದಿಗೂ ನನ್ನ ಹೆಸರು ಹೇಳಿಕೊಂಡು ಬಿಗ್ ಬಾಸ್ ಮನೆಗೆ ಬರುತ್ತಾರೆ ಹಾಗೆ ಹೀಗೆ ಎಂದು ಹೇಳುತ್ತಾರೆ..ಅವರಿಗೆ ಏನು ಹೇಳಬೇಕು ಅಂತಹ ಮನೆಗೆ ನಾನು ಕಾಲಿಡುವುದೇ ಇಲ್ಲ. ಅವರು ಎಷ್ಟೇ ದುಡ್ಡು ಕೊಟ್ಟರೂ ನಾನು ಅಲ್ಲಿಗೆ ಹೋಗುವುದಿಲ್ಲ ಎಂದು ಕಡಾ ಖಂಡಿತ ಕಡ್ಡಿ ಮುರಿದ ಹಾಗೆ ಟೆನ್ನಿಸ್ ಕೃಷ್ಣ ಅವರು ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ..ಹೌದು ಇವರ ಮಾತುಗಳನ್ನು ಕೇಳಿ ನಟ್ಟಿಗರು ಭೇಷ್ ಎಂದರೆ, ಇನ್ನೂ ಕೆಲವರು ಇವರ ಬಿಗ್ಬಾಸ್ ಮನೆಗೆ ಹೋಗಲು ಈ ರೀತಿ ಉಪಾಯ ಮಾಡಿದ್ದಾರೆ ಅಷ್ಟೇ ಬಿಡಿ ಎಂದು ಅವರ ಕಾಲ ಎಳೆಯುತ್ತಿದ್ದಾರೆ. ನೀವು ಕೂಡ ಟೆನಿಸ್ ಕೃಷ್ಣ ಅವರ ದೊಡ್ಡ ಅಭಿಮಾನಿಯಾಗಿದ್ದರೆ, ಅವರ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಿ, ಮತ್ತು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು...