40 ರ ಅಂದದ ಮಹಿಳೆಯರನ್ನ ಟಾರ್ಗೆಟ್ ಮಾಡುವ ಈತ ಮಾಡುವ ಕೆಲಸ ಎಂತದ್ದು ಗೊತ್ತಾ..? ಹುಷಾರ್ ಇರಿ
ಇತ್ತೀಚಿನ ಡಿಜಿಟಲ್ ಯುಗದಲ್ಲಿ ನಾವು ಮದುವೆಯಾಗಲು ಸೂಕ್ತ ಹುಡುಗ ಮತ್ತು ಹುಡುಗಿಯ ಆಯ್ಕೆ ಮಾಡಿಕೊಳ್ಳಲು ಕೆಲವೊಂದಿಷ್ಟು ಅಪ್ಲಿಕೇಶನ್ ಗಳು ಇವೆ. ಈಗ ನಾವು ಹೇಳುತ್ತಿರುವ ವಿಚಾರ ಏನು ಅಂದರೆ ಮ್ಯಾಟ್ರಿಮೋನಿಯ ಮೂಲಕವೇ ಒಬ್ಬ ಮೋಸದ ವ್ಯಕ್ತಿ ಸಾಕಷ್ಟು ಹೆಣ್ಣುಮಕ್ಕಳ ಜೀವನ ಹಾಳು ಮಾಡಿದ್ದಾನೆ. ಮ್ಯಾಟ್ರಿಮೋನಿಯಲ್ಲಿ ದುಡ್ಡು ಇರುವ ಹಾಗೂ ಚೆಂದ ಕಾಣುವ ಸಿಕ್ಕಸಿಕ್ಕ ಮಹಿಳೆಯರನ್ನು ಪಟಾಯಿಸುತ್ತಾ ಮದುವೆ ಆಗುತ್ತೇನೆ ಎಂದು ನಂಬಿಸಿ, ಮದುವೆ ಆದವರ ಕಡೆಯಿಂದ ದುಡ್ಡು ಪಡೆದು ನಂತರ ಕೈ ಬಿಟ್ಟು ಅವರಿಗೆ ಮೋಸ ಮಾಡಿ ಓಡಿ ಹೋಗುವ ವ್ಯಕ್ತಿಯ ಕುರಿತು ಈ ಲೇಖನ ಆಗಿದೆ. ಈತನ ಮುಖ ಚೆನ್ನಾಗಿ ನೋಡಿಕೊಳ್ಳಿ. ಹೌದು ಈತನ ಹೆಸರು ಸುನಿಶ್ ಪಿಳ್ಳೆ. ಈತ ಮೂಲತಃ ಕೇರಳದ ವ್ಯಕ್ತಿ. ಈತನ ಕಾರ್ಯ ವೃತ್ತಿ ಬಂದು ಬಿಟ್ಟು ಬೆಂಗಳೂರು, ಮೈಸೂರಿನಲ್ಲಿ ಎನ್ನಲಾಗಿದೆ.
ಹೌದು ಈತ ಮ್ಯಾಟ್ರಿಮೋನಿಯಲ್ಲಿ ಸದಾ ಸಕ್ರಿಯ ಆಗಿರುವ ಯುವಕ. 35 ರಿಂದ 40 ಆಸುಪಾಸಿನ ಮಹಿಳೆಯರ ಮತ್ತು ಡೀವರ್ಸ್ ಪಡೆದಿರುವ ಹೆಣ್ಣು ಮಕ್ಕಳನ್ನು, ಮಹಿಳೆಯರನ್ನ ಈತ ಆ ಅಪ್ಲಿಕೇಶನ್ ನಲ್ಲಿ ಟಾರ್ಗೆಟ್ ಮಾಡುತ್ತಾನೆ. ನಂತರ ಅವರನ್ನು ಮದುವೆ ಆಗುತ್ತೇನೆ, ನಾನು ದೊಡ್ಡ ಉದ್ಯಮಿ ಎಂದು ಹೇಳಿಕೊಂಡು ಚೆನ್ನಾಗಿ ವಂಚನೆ ಮಾಡುತ್ತಾನೆ ಎಂದು ತಿಳಿದುಬಂದಿದೆ. ಸುಂದರವಾದ ಯುವತಿಯರನ್ನೆ ಟಾರ್ಗೆಟ್ ಮಾಡುವ ಈತ ಉದ್ಯಮಿ ಹಾಗೆ ಕೋಟ್ಯಾಧಿಪತಿ ನನ್ನ ಬಳಿ ಹೆಚ್ಚು ದುಡ್ಡು ಇದೆ, ಹಾಗೆ ಹೀಗೆ ಎಂದು ಅವರನ್ನು ಲಪಟಾಯಿಸಿ ಅವರಿಗೆ ಇಲ್ಲ ಸಲದ್ದನ್ನು ಹೇಳಿ ನಂತರ ಮದುವೆಯಾಗುತ್ತಾನೆ. ಆಮೇಲೆ ನನ್ನ ಬಿಸಿನೆಸ್ ತುಂಬಾ ಲಾಸ್ ಆಗಿದೆ, ಎಲ್ಲಾ ಕೈ ನಿಂತು ಹೋಗಿದೆ ನನ್ನದು ಎಂದು ಅವರಿಂದ ಆಭರಣ ಮತ್ತು ಅರ್ಧ ಕೋಟಿ ಮುಕ್ಕಾಲು ಕೋಟಿ ಹಣ ಪಡೆದು ಹೀಗೆ ಮದುವೆಯಾದ ಹೆಣ್ಣು ಮಕ್ಕಳಿಂದ ಪಡೆದುಕೊಂಡ ನಂತರವೇ ಅಲ್ಲಿಂದ ಹೇಳದೆ ಕೇಳದೆ ಪರಾರಿಯಾಗುತ್ತಾನೆ. ಈತನದ್ದು ಇದೇ ಕೆಲಸ ಆಗಿದೆ ಎಂದು ಹೇಳಬಹುದು.
ಸ್ವಲ್ಪ ದಿವಸ ತಲೆ ಮಾಡಿಸಿಕೊಂಡು ನಂತರ ಮತ್ತೆ ಇದೆ ಮ್ಯಾಟ್ರಿಮೋನಿಯಲ್ಲಿ ಸಕ್ರಿಯ ಆಗಿ ಅಂದದ 38ರ 40ರ ಆಸು ಪಾಸಿನ ಆಂಟಿಯರನ್ನ ವಿಚ್ಛೇದಿತ ಮಹಿಳೆಯರನ್ನು ಈತ ಮದುವೆಯಾಗುವುದು..ವಂಚನೆ ಮಾಡುವುದು ಜೊತೆಗೆ ಅವರಿಂದ ಪಡೆದ ಬಂಗಾರದ ಆಭರಣಗಳನ್ನು ಕೈಗೆ ಹಾಕಿಕೊಂಡು ಕೊರಳಲ್ಲಿ ಹಾಕಿಕೊಂಡು ಬಾರಿ ಶೋಕಿ ಕೊಡುವುದೇ ಈತನ ಕೆಲಸ ಆಗಿದೆಯಂತೆ. ಮೈಸೂರು ಹೆಬ್ಬಗೋಡಿ ಮತ್ತು ಬೆಂಗಳೂರಿನ ಇನ್ನೂ ಕೆಲವು ಕಡೆ ಈತನ ವಿರುದ್ಧ ದೂರು ದಾಖಲಾಗಿದೆ ಎನ್ನಲಾಗಿದೆ. ಹೌದು ಹೆಬ್ಬಗೋಡಿ ಪೊಲೀಸರು ಈತನ ಹುಡುಕಾಟದಲ್ಲಿದ್ದು ಒಟ್ಟು 15 ಜನ ಹೆಣ್ಣು ಮಕ್ಕಳಿಗೆ ಈ ವಂಚಕ ಮೋಸ ಮಾಡಿರುವುದಾಗಿ ತಿಳಿದು ಬಂದಿದೆ..ಇನ್ನು ಮೇಲಾದರೂ ಅಂತಹ ಅಪ್ಲಿಕೇಶನ್ ಗಳಲ್ಲಿ ತುಂಬಾ ಹುಷಾರಾಗಿ ಇರಿ. ದುಡ್ಡು ಪಡೆದು ಮದುವೆ ಆಗುತ್ತೇನೆ ಎಂದು ನಂಬಿಸಿ. ಬಳಿಕ ಮದುವೆಯಾದ ಮೇಲೆ ಎಲ್ಲಾ ಪಡೆದು ಪರಾರಿಯಾಗಿರುವ ಇಂತಹವರ ವಿರುದ್ಧ ಸರ್ಕಾರ ಮತ್ತು ಪೊಲೀಸ್ ಠಾಣೆ ಬೇಗ ಕಠಿಣ ಕ್ರಮ ಕೈಗೊಳ್ಳಲಿ ಎಂದು ನೀವು ಕೂಡ ಕಮೆಂಟ್ ಮಾಡಿ, ಮತ್ತು ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. ಇಂತಹ ವಂಚಕನ ಕುರಿತಾಗಿ ನೀವು ತುಂಬಾ ಎಚ್ಚರದಿಂದ ಇರಿ, ಧನ್ಯವಾದಗಳು...