ಪೈಲ್ವಾನ್ ಹಾಡಿಗೆ ಬೆಲ್ಲಿ ಡ್ಯಾನ್ಸ್ ಮಾಡಿದ ನೃತ್ಯಗಾರ್ತಿ ; ವಿಡಿಯೋ ವೈರಲ್

ನಟ ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಚಿತ್ರದ ಹಾಡು ಈಗಾಗಲೇ ಹಿಟ್ ಆಗಿದೆ. ಈ ಹಾಡನ್ನು ಮಕ್ಕಳು ಕೂಡ ಗುನುಗುತ್ತಾರೆ. ಡ್ಯಾನ್ಸ್ ಎಂದರೆ ಅದೊಂದು ಕಲೆ. ಎಲ್ಲರಿಗೂ ತಾವೂ ಡ್ಯಾನ್ಸ್ ಮಾಡಬೇಕು. ಸೊಂಟ ಬಳುಕಿಸಬೇಕು ಎಂಬ ಆಸೆ ಇರುತ್ತದೆ. ಆದರೆ ಈ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಆದರೆ, ಚಿಕ್ಕ ವಯಸ್ಸಿನಿಂದಲೂ ನೃತ್ಯ ಅಭ್ಯಾಸ ಮಾಡಿ ನೃತ್ಯವನ್ನೇ ವೃತ್ತಿ ಜೀವನವನ್ನಾಗಿಸಿಕೊಳ್ಳುವವರು ಈಗ ಸಾಕಷ್ಟು ಜನರಿದ್ದಾರೆ. ಈಗ ಪೈಲ್ವಾನ್ ಚಿತ್ರಕ್ಕೂ, ಡ್ಯಾನ್ಸ್ ಗೂ ಏನು ಸಂಬಂಧ ಎಂದು ಹೇಳುತ್ತಿದ್ದೀರಾ. 

ಈ ಚಿತ್ರದ ಹಾಡಿಗೆ ಮನೋಘ್ನವಾಗಿ ನೃತ್ಯ ಪ್ರದರ್ಶಿಸಿರುವ ತುಳಸಿ ಕುಶಾಲಪ್ಪ ಅವರ ಡ್ಯಾನ್ಸ್ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪೈಲ್ವಾನ್ ಹಾಡಿಗೆ ತುಳಸಿ ಕುಶಾಲಪ್ಪ ಅವರು ಸೊಂಟ ಬಳುಕಿಸಿದ್ದಾರೆ. ಪೈಲ್ವಾನ್ ಚಿತ್ರದ ಹಾಡನ್ನು ಫ್ಯೂಷನ್ ಮಾಡಿರುವ ತುಳಸಿ ಕುಶಾಲಪ್ಪ, ಬೆಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಒಂದು ನಿಮಿಷಗಳ ಕಾಲ ಡ್ಯಾನ್ಸ್ ಮಾಡಿರುವ ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬರೋಬ್ಬರಿ 9.6 ಮಿಲಿಯನ್ ಬಾರಿ ಈ ಹಾಡನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಇನ್ನು ತುಳಸಿ ಕುಶಾಲಪ್ಪ ಅವರು ಡ್ಯಾನ್ಸ್ ಕೊರಿಯೋಗ್ರಫರ್ ಆಗಿದ್ದು, ಬೆಲ್ಲಿ ಡ್ಯಾನ್ಸ್  ಅನ್ನು ಕರಗತ ಮಾಡಿಕೊಂಡಿದ್ದಾರೆ.  

ಮೈಸೂರಿನಲ್ಲಿ ನೆಲೆಸಿರುವ ತುಳಸಿ ಕುಶಾಲಪ್ಪ ಅವರು ಆಗಾಗ ಡ್ಯಾನ್ಸ್ ವರ್ಕ್ ಶಾಪ್ ಗಳನ್ನು ಕೂಡ ನಡೆಸುತ್ತಿರುತ್ತಾರೆ. ತುಳಸಿ ಅವರು ಡ್ಯಾನ್ಸ್ ಶಾಲೆಯನ್ನು ಕೂಡ ಹೊಂದಿದ್ದಾರೆ. ಇನ್ನು ತುಳಸಿ ಕುಶಾಲಪ್ಪ ಅವರು ಹೀಗೆ ಫ್ಯೂಷನ್ ಮಾಡಿ ಸಾಕಷ್ಟು ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಇದರ ವೀಡಿಯೋಗಳನ್ನು ತುಳಸಿ ಕುಶಾಪ್ಪ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ತಮ್ಮ ಫ್ಯೂಷನ್ ಡ್ಯಾನ್ಸ್ ಗಳ ವೀಡಿಯೋಗಳನ್ನು ಅಪ್ ಲೋಡ್ ಮಾಡುತ್ತಿರುತ್ತಾರೆ.