ಮದ್ಯಪಾನದಿಂದ ತಮ್ಮ ಬದುಕಿನ ಕಷ್ಟದ ದಿನಗಳಿಗೆ ಸಿಲುಕಿದ್ದು ಎಂದು ಬಹಿರಂಗವಾಗಿ ತಿಳಿಸಿದ ಖ್ಯಾತ ನಟಿ! ಆ ನಟಿ ಯಾರು ಗೊತ್ತಾ?

ಮದ್ಯಪಾನದಿಂದ ತಮ್ಮ ಬದುಕಿನ ಕಷ್ಟದ ದಿನಗಳಿಗೆ ಸಿಲುಕಿದ್ದು ಎಂದು ಬಹಿರಂಗವಾಗಿ ತಿಳಿಸಿದ ಖ್ಯಾತ ನಟಿ! ಆ ನಟಿ ಯಾರು ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ನಲ್ಲಿ ಸಾಕಷ್ಟು ಹಿರಿಯ ಕಲಾವಿದ ನಟಿಯರು ಈಗಲೂ ಟ್ರೆಂಡ್ ನಲ್ಲಿ ಇದ್ದಾರೆ. ಅಂತವರ ಪೈಕಿ ಒಬ್ಬರ ಹೆಸ್ರು ಎಂದರೆ ಅದು ಊರ್ವಶಿ. ಈಕೆ ತೊಂಬತ್ತರ ದಶಕದಲ್ಲಿ ಪಂಚ ಭಾಷೆಯಲ್ಲಿ ಕೊಡ ಮಿಂಚಿದ್ದು ಅಲ್ಲದೆ ಈಗಲೂ ಚಿತ್ರರಂಗದಲ್ಲಿ ಪೋಷಕರ ಪಾತ್ರ ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನೂ ಊರ್ವಶಿ ಅವರು ದಕ್ಷಿಣ ಭಾರತದ ಜನಪ್ರಿಯ ಅಭಿನೇತ್ರಿ ಎಂದು ಗುರುತಿಸಿಕೊಂಡಿದ್ದಾರೆ ಎಂದು ಹೇಳಬಹುದು. ಈ ನಟಿ ತಮಿಳು, ಮಲಯಾಳಂ, ಕನ್ನಡ ಮತ್ತು ತೆಲುಗು ಭಾಷೆಯ ಅನೇಕ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಹಾಗೆಯೇ ಕಮಲ್ ಹಾಸನ್, ರಜನಿ ಕಾಂತ್, ವಿಷ್ಣುವರ್ಧನ್, ಅಂಬರೀಶ್, ಮೋಹನ್ ಲಾಲ್, ಮಮ್ಮೂಟಿ, ರವಿಚಂದ್ರನ್, ಡಾ. ರಾಜ್ ರೊಂದಿಗೆ ತೆರೆ ಹಂಚಿಕೊಂಡು ಹಿಟ್ ಚಿತ್ರಗಳನ್ನು ಕೊಡ ನೀಡಿದ್ದಾರೆ. 

ಪಂಚ ಭಾಷೆಯ ನತಿಯಾಗಿರುವ ಈ ನಟಿ ಜನವರಿ 25 1967 ರಂದು ಕೇರಳದ ತಿರುವಂತಪುರಂನಲ್ಲಿ  ಜನಿಸಿದರು. ತಮ್ಮ ಹತ್ತನೇ ವಯಸ್ಸಿಗೆ ಮಲಯಾಳಂ ಸಿನಿಮಾಗಳಲ್ಲಿ ಬಾಲ ನಟಿ ಆಗಿ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರು. 1980ರಲ್ಲಿ ಪರಿಪೂರ್ಣ ನಾಯಕ ನಟಿಯಾಗಿ ಪದಾರ್ಪಣೆ ಮಾಡಿದರು. ಇನ್ನೂ  1984 ರಲ್ಲಿ ತೆರೆಕಂಡ ‘ಶ್ರಾವಣ ಬಂತು’ ಚಿತ್ರದಿಂದ ಕನ್ನಡ ಚಿತ್ರರಂಗದ ಪಾದಾರ್ಪಣೆ ಮಾಡಿದರು. ಹಾಗೆ 1980ರಲ್ಲಿ ಚಿತ್ರರಂಗಕ್ಕೆ ಬಾಲನಟಿಯಾಗಿ ಕಾಲಿಟ್ಟ ನಟಿ ಎನ್ನುವ ಹೆಸ್ರು ಪಡೆದರು. ಇನ್ನೂ 1984 ರಲ್ಲಿ ತೆರೆಕಂಡ ‘ಶ್ರಾವಣ ಬಂತು’ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ‘ನಾನು ನನ್ನ ಹೆಂಡತಿ’ ಚಿತ್ರಗಳಲ್ಲಿ ನಟಿಸಿ ದೊಡ್ಡ ಮಟ್ಟದ ಹೆಸರು ಮಾಡಿದರು. ಈಗ ಸದ್ಯದಲ್ಲಿ ನಮ್ಮ  ಕನ್ನಡದಲ್ಲಿ ನಾಯಕಿಯಾಗಿ ಮತ್ತು ಪೋಷಕ ನಟಿಯ ಪಾತ್ರದಲ್ಲಿ ಸುಮಾರು ಮೂವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಈಗಲೂ ಟ್ರೆಂಡ್ ನಲ್ಲಿ ಇದ್ದಾರೆ. ಈಗ ಸದ್ಯದಲ್ಲಿ  ಮಲಯಾಳಂ, ತೆಲುಗು ಕನ್ನಡ ಸೇರಿದಂತೆ ಸುಮಾರು ಮುನ್ನೂರಕ್ಕೂ ಅಧಿಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.   

ತಮ್ಮ ಸಿನಿ ಕೆರಿಯರ್ ನಲ್ಲಿ ಇಷ್ಟೆಲ್ಲ ಹೆಸ್ರು ಮಾಡಿರುವ ಈ ನಟಿಯ ವಯಕ್ತಿಕ ಜೀವನ ಅಷ್ಟಾಗಿ ಚೆನ್ನಾಗಿಲ್ಲ ಎಂದೇ ಹೇಳಬಹುದು. ಇನ್ನೂ ತಮ್ಮ ಜೀವನವನ್ನು ತಾವು ಮದ್ಯಪಾನದಿಂದ ಹಾಳು ಮಾಡಿಕೊಂಡೆ ಎಂದು ಬಹಿರಂಗವಾಗಿ ಅವರೇ ಇಂಟರ್ವ್ಯೂ ನಲ್ಲಿ ತಿಳಿಸಿದ್ದಾರೆ. ಇದೆ ಕಾರಣದಿಂದ ತನ್ನ ಮೊದಲನೇ ಗಂಡ ಮನೋಜ್ ಅವರಿಂದ ಹಾಗೂ ತನ್ನ ಮಗಳಿಂದ  ದೂರವಾದೆ. ಆ ನಂತರ ಒಂಟಿ ತನದಿಂದ  ಡಿಪ್ರೆಶನ್ ಹೋರ ಬರಲು ನಾನು ಶಿವ ಪ್ರಸಾದ್ ಅವರನ್ನು ನನ್ನ 40ರ ವಯಸ್ಸಿನಲ್ಲಿ ಮದುವೆಯಾದೆ ಎಂದು ತಮ್ಮ ಕಷ್ಟದ ದಿನಗಳನ್ನು ಮಾದ್ಯಮದಲ್ಲಿ ಬಹಿರಂಗವಾಗಿ ಹೇಳಿಕೊಂಡು ಕಣ್ಣೀರಿಟ್ಟರು. ( video credit ; Third Eye )