ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರ ಡೇಟಿಂಗ್‌ ನಿಂದಾಗಿ ರಶ್ಮಿಕಾಗೆ ಆಪತ್ತು ;ಭವಿಷ್ಯ ನುಡಿದ ವೇಣುಸ್ವಾಮಿ

ಈಗಾಗಲೇ ಕನ್ನಡ, ತೆಲುಗು, ತಮಿಳಿನಲ್ಲಿ ದೊಡ್ಡ ಯಶಸ್ಸು ಕಂಡಿರುವ ನಟಿ ರಶ್ಮಿಕಾ ಮಂದಣ್ಣ ಈಗ ಬಾಲಿವುಡ್ ಗೂ ಹಾರಿದ್ದಾರೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮುಂಬೈನಲ್ಲಿ ನೆಲೆಸಿದ್ದಾಗ ಇಬ್ಬರು ಒಟ್ಟೊಟ್ಟಿಗೆ ಸುತ್ತಾಡಿದ್ದೇ ಸುತ್ತಾಡಿದ್ದು. ಇಬ್ಬರೂ ಈಗ ಬಾಲಿವುಡ್ ನಲ್ಲಿರುವುದರಿಂದ ಜನ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರೂ ಮದುವೆಯಾಗುತ್ತಾರೆ ಎಂಬ ಗುಸು ಗುಸು ಮಾತುಗಳು ಕೇಳಿ ಬಂದಿದ್ದವು. ಈ ವಿಚಾರ ಸೋಶೀಯಲ್ ಮೀಡಿಯಾದಲ್ಲೂ ಚರ್ಚೆಯಾಗಿತ್ತು.

ಈಘ ಇವರಿಬ್ಬರು ಪುನಃ ಒಟ್ಟಿಗೆ ಟ್ರಿಪ್‌ ಹೋಗುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದಾರೆ. ಮದುವೆಯಾಗುತ್ತಾರೆ. ರಶ್ಮಿಕಾ ಹಾಗೂ ವಿಜಯ್‌ ಇಬ್ಬರೂ ಅಫೇರ್‌ ಇಟ್ಟುಕೊಂಡಿದ್ದಾರೆ ಎಂಬೆಲ್ಲಾ ಚರ್ಚೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಇದೀಗ ತೆಲುಗಿನ ಖ್ಯಾತ ಸೆಲಬ್ರಿಟಿ ಜ್ಯೋತಿಷಿ ಬಗ್ಗೆ ನಿಮಗೆಲ್ಲರಿಗೂ ಗೊತ್ತೇ ಇದೆ. ತೆಲುಗಿನ ಚಿತ್ರರಂಗದ ನಟ, ನಟಿಯರು ಹಾಗೂ ಅಲ್ಲಿನ ಗಣ್ಯರಿಗೆ ಭವಿಷ್ಯ ಹೇಳಿದ್ದು, ವೇಣು ಸ್ವಾಮಿ. ವೇಣು ಸ್ವಾಮಿ ಅವರು ನುಡಿದ ಭವಿಷ್ಯ ಇಂದಿನವರೆಗೂ ಸುಳ್ಳಾಗಿಲ್ಲ. ಹಾಗಾಗಿ ವೇಣು ಸ್ವಾಮಿ ಅವರ ಬಳಿ ಸೆಲಬ್ರಿಟಿಗಳು ಪೂಜೆ ಕೂಡ ಮಾಡಿಸುತ್ತಾರೆ. ಇದೀಗ ಇವರು ರಶ್ಮಿಕಾ ಮಂದಣ್ಣ ಅವರ ಭವಿಷ್ಯ ನುಡಿದಿದ್ದಾರೆ.  

ಈ ಹಿಂದೆ ರಶ್ಮಿಕಾ ಮಂದಣ್ಣ ಅವರ ಲಕ್‌ ಬಗ್ಗೆ ಮಾತನಾಡಿದ್ದ ವೇಣುಸ್ವಾಮಿ ಅವರು ಈ ಬಾರಿ ವಿಜಯ್‌ ದೇವರಕೊಂಡ ಅವರ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಈ ಡೇಟಿಂಗ್‌ ನಿಂದಾಗಿ ರಶ್ಮಿಕಾಗೆ ಆಪತ್ತು ಕಾದಿದೆ ಎಂದು ಹೇಳಿದ್ದಾರೆ. ಸದ್ಯ ಪುಷ್ಪಾ-2 ಚಿತ್ರದಲ್ಲಿ ನಟಿಸುತ್ತಿರುವ ರಶ್ಮಿಕಾ ಅವರ ಬ್ಯಾಡ್‌ ಲಕ್‌ ಇನ್ಮುಂದೆ ಶುರುವಾಗಲಿದೆ ಎಂದು ಹೇಳಿದ್ದಾರೆ. ಇನ್ನು ರಾಜಕೀಯಕ್ಕೆ ಧುಮಕಲಿರುವ ರಶ್ಮಿಕಾ ಮಂದಣ್ಣ, ಕರ್ನಾಟಕದಲ್ಲಿ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ ಎಂದು ಹೇಳಿದ್ದಾರೆ. ( video credit : daily culture )