ಜೊತೆ ಜೊತೆಯಲಿ ಧಾರಾವಾಹಿಯ ನಟಿ ಮೇಘಾ ಶೆಟ್ಟಿ ನಟಿಗೆ ಲಕ್ಷಗಟ್ಟಲೆ ಅಭಿಮಾನಿಗಳಿದ್ದಾರೆ. ಆದರೆ, ಮೇಘಾ ಶೆಟ್ಟಿ ಕೂಡ ಒಬ್ಬರ ಅಭಿಮಾನಿ. ಅದು ಬೇರೆ ಯಾರೂ ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್. ಮೇಘಾ ಶೆಟ್ಟಿ ದರ್ಶನ್ ಅವರ ಕಟ್ಟಾ ಅಭಿಮಾನಿ ಎಂಬುದು ಹಲವರಿಗೆ ಗೊತ್ತಿದೆ. ಆಗಾಗ ದರ್ಶನ್ ಅವರ ಜೊತೆಗಿನ ಫೋಟೋಗಳನ್ನು ಮೇಘಾ ಶೆಟ್ಟಿ ಅವರು ಪೋಸ್ಟ್ ಮಾಡುತ್ತಿರುತ್ತಾರೆ. ದರ್ಶನ್ ಅವರ ಸಿನಿಮಾಗಳು ರಿಲೀಸ್ ಗೆ ಸಜ್ಜಾದರೂ ಅದರ ಪೋಸ್ಟರ್ ಗನ್ನು ಮೇಘಾ ಶೆಟ್ಟಿ ತಮ್ಮ ಸೋಶಿಯ್ ಮೀಡಿಯಾದಲ್ಲಿ ಆಗಾಗ ಶೇರ್ ಮಾಡಿಕೊಳ್ಳುತ್ತಿರುತ್ತಾರೆ.
ಹೀಗಿರುವಾಗ ಕಳೆದ ವಾರ ದರ್ಶನ್ ಅವರ ಹುಟ್ಟುಹಬ್ಬವಿತ್ತು. ಹುಟ್ಟುಹಬ್ಬಕ್ಕೆ ದರ್ಶನ್ ಅವರ ಮನೆಗೆ ಸಾವಿರಾರು ಮಂದಿ ಅಭಿಮಾನಿಗಳು ಬಂದು ವಿಶ್ ಮಾಡಿದ್ದರು. ದರ್ಶನ್ ಅವರಿಗೆ ಅಭಿಮಾನಿಗಳು ಸಾಕಷ್ಟು ಉಡುಗೊರೆಗಳನ್ನು ಕೂಡ ನೀಡಿದ್ದರು. ಅದೇ ರೀತಿಯಲ್ಲಿ ಮೇಘಾ ಶೆಟ್ಟಿ ಹಾಗೂ ಪವಿತ್ರಾ ಗೌಡ ಸೇರಿ, ದರ್ಶನ್ ಅವರ ಹುಟ್ಟುಹಬ್ಬಕ್ಕೆ ಪ್ಲಾನ್ ಮಾಡಿಕೊಂಡಿದ್ದರು. ದರ್ಶನ್ ಅವರನ್ನು ಕರೆಸಿ ಕೇಕ್ ಕಟ್ ಮಾಡಿಸಿ ಸೆಲಬ್ರೇಟ್ ಮಾಡಿದ್ದರು. ಇದನ್ನೆಲ್ಲಾ ವೀಡಿಯೋ ಕೂಡ ಮಾಡಲಾಗಿತ್ತು. ದರ್ಶನ್ ಅವರೊಂದಿಗೆ ಮಾಡಿದ್ದ ಈ ವೀಡಿಯೋವನ್ನು ಮೇಘಾ ಶೆಟ್ಟಿ ಅವರು ಶೇರ್ ಮಾಡಿಕೊಂಡಿದ್ದರು.
ದರ್ಶನ್ ಪತ್ನಿ ವಿಜಯ್ ಲಕ್ಷ್ಮಿ ಅವರು ಅಭಿಮಾನಿಗಳ ಜೊತೆಗೆ ಒಳ್ಳೆಯ ಟಚ್ ನಲ್ಲಿದ್ದಾರೆ. ಆದರೆ, ಮೇಘಾ ಶೆಟ್ಟಿ ಅವರು ಮಾಡಿದ ಒಂದೇ ಒಂದು ತಪ್ಪನ್ನು ಸಹಿಸದ ವಿಜಯ್ ಲಕ್ಷ್ಮಿ ಅವರು, ನೀವು ಮಾಡಿದ ಈ ತಪ್ಪಿನಿಂದ ನನಗೂ ನನ್ನ ಮಗನಿಗೂ ನೋವಾಗಿದೆ. ಒಂದು ಹೆಣ್ಣಾಗಿ ಸೋಶಿಯಲ್ ಮೀಡಿಯಾದಲ್ಲಿ ಏನನ್ನಾದರೂ ಪೋಸ್ಟ್ ಮಾಡಬೇಕು ಎಂದು ಕೊಂಡಿದ್ದರೆ, ಎರೆಡೆರಡು ಬಾರಿ ಯೋಚಿಸಬೇಕು ಎಂದೆಲ್ಲಾ ಮೇಘಾ ಶೆಟ್ಟಿ ಅವರನ್ನು ಟ್ಯಾಗ್ ಮಾಡಿ ಬರೆದಿದ್ದರು. ಆಗ ಅಭಿಮಾನಿಗಳು ಕೂಡ ವಿಜಯ್ ಲಕ್ಷ್ಮಿ ಅವರನ್ನು ಸಪೋರ್ಟ್ ಮಾಡಿದ್ದರು. ಆಗ ವಿಜಯ್ ಲಕ್ಷ್ಮಿ ಅವರ ವಾರ್ನಿಂಗ್ ನೋಡಿದ ಕೂಡಲೇ ಏನೂ ಮಾತನಾಡದೆ ಮೇಘಾ ಶೆಟ್ಟಿ ಅವರು ವೀಡಿಯೋವನ್ನು ಡಿಲೀಟ್ ಮಾಡಿ, ಸುಮ್ಮನಾಗಿ ಬಿಟ್ಟಿದ್ದಾರೆ. ( video credit ; lion tv kannada )