ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ.

ವಿಜಯಪುರದ ಪ್ರಸಿದ್ಧ ಪ್ರವಚನಕಾರ ಆಧ್ಯಾತ್ಮಿಕ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ.

ಇಂದು ಸಂಜೆ ೬ ಘಂಟೆಗೆ ಗುರು ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದಾರೆ. . ಅವರು ಅತ್ಯಂತ ಸರಳ ಜೀವಿ .ಯಾವುದೇ ಸರ್ಕಾರದ ಅನುದಾನ ಅವರು ತೆಗೆದುಕೊಳ್ಳಲಿಲ್ಲ . ಭಕ್ತರಿಂದ ಪಡೆದ ಕಾಣಿಕೆಯಿಂದ ಅವರು ತಮ್ಮ ಆಶ್ರಮಕ್ಕೆ ಬಂದ ಭಕ್ತದಿಗಳಿಗೆ ಅನ್ನ
ದಾಸೋಹ ನಡೆಸುತ್ತಿದ್ದರು. 
ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ಪ್ರಶಸ್ತಿ ಸಿದ್ದೇಶ್ವರ ಸ್ವಾಮೀಜಿಯವರಿಗೆ ಒಲಿದುಬಂದಿತ್ತು. ಆದರೆ ಎಲ್ಲ ಗೌರವಾಧರಗಳೊಂದಿಗೆ ಈ ಪ್ರಶಸ್ತಿಯನ್ನು ಹಿಂದಿರುಗಿಸಿದರು. ನಾನೊಬ್ಬ ಸರಳ ವ್ಯಕ್ತಿ. ಸಾಮಾನ್ಯ ಜೀವನ ನಡೆಸುತ್ತ, ಆಧ್ಯಾತ್ಮಿಕ ಬೋಧನೆಯ ಮೂಲಕ ಜನರ ಜೀವನ ಉದಾತ್ತಗೊಳಿಸುವುದು ಉದ್ದೇಶ ನನ್ನದು. ಹಾಗಾಗಿ ಪ್ರಶಸ್ತಿಗಳ ಅವಶ್ಯತೆಯು ನನಗಿಲ್ಲ. ಅನ್ಯಥಾ ಭಾವಿಸದಿರಿ ಎಂದು ಹೇಳಿದ್ದರು. ಕರ್ನಾಟಕ ವಿಶ್ವವಿದ್ಯಾನಿಲಯ ಅವರಿಗೆ ಗೌರವ ಡಾಕ್ಟರೇಟ್ ಪ್ರಕಟಿಸಿತ್ತು. ಅದನ್ನೂ ಶ್ರೀಗಳು ಸ್ವೀಕರಿಸಿರಲಿಲ್ಲ. ಹೀಗೆ ತಮಗೆ ಸಂದ ಎಷ್ಟೋ ಪ್ರಶಸ್ತಿ ಮತ್ತು ಪುರಸ್ಕಾರಗಳನ್ನು ಅವರು ವಿನಮೃವಾಗಿಯೇ ನಿರಾಕರಿಸಿದ್ದರು.