ನಿಮ್ಮ ಕಷ್ಟಗಳೆಲ್ಲಾ ಪರಿಹಾರವಾಗಬೇಕಾ..? ಹಾಗಿದ್ದರೆ ಉಡುಸಲಮ್ಮ ದೇವಿಯ ದರ್ಶನ ಮಾಡಿ ಬನ್ನಿ..

ಸಮಸ್ಯೆ ಯಾರಿಗೆ ಇಲ್ಲ ಹೇಳಿ. ಪ್ರತಿಯೊಬ್ಬರಿಗೂ ಸಮಸ್ಯೆ ಇದ್ದೇ ಇರುತ್ತದೆ. ಒಬ್ಬರಿಗೆ ಕೆಲಸವಿಲ್ಲ ಎಂತಾದರೆ, ಮತ್ತೊಬ್ಬರಿಗೆ ಮದುವೆಯಾಗಿಲ್ಲ. ಮಗದೊಬ್ಬರಿಗೆ ಮಕ್ಕಳಿಲ್ಲ. ಹೀಗೆ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಇರುತ್ತದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಅನ್ನೋದು ಇದ್ದೇ ಇರುತ್ತದೆ. ಆದರೆ ಮನುಷ್ಯನಿಗೆ ತಾಳ್ಮೆ ಬೇಕು, ನಂಬಿಕೆ ಇರಬೇಕು. ಮನುಷ್ಯರು ಮನುಷ್ಯರನ್ನು ನಂಬುವುದು ತೀರಾ ಕಡಿಮೆ. ಆದರೆ ಪ್ರತಿಯೊಬ್ಬರು ದೇವರನ್ನು ನಂಬುತ್ತಾರೆ. ಕೆಲವರು ತರ್ಕಾ ಮಾಡಿದರೆ, ಮತ್ತೆ ಕೆಲವರು ಯಅವುದೇ ಅನುಮಾನವಿಲ್ಲದೇ ದೇವರನ್ನು ನಂಬುತ್ತಾರೆ. 

ದೇವರನ್ನು ನಂಬಿ ನಿತ್ಯ ದೇವಸ್ಥಾನಕ್ಕೆ ಹೋಗುವುದು. ಏನೇ ಸಮಸ್ಯೆಯಾದರೂ ದೇವರನ್ನು ಬೇಡಿಕೊಳ್ಳುತ್ತಾರೆ. ಹರಕೆ ಹೊರುತ್ತಾರೆ. ಸಮಸ್ಯೆ ಬಗೆ ಹರಿದ ಮೇಲೆ ಹರಕೆಯನ್ನು ತೀರಿಸುತ್ತಾರೆ. ಸಮಸ್ಯೆಗಳಿಗಷ್ಟೇ ಅಲ್ಲದೇ, ಯಾವುದಾದರೂ ಆಸೆಗಳಿದ್ದರೂ ದೇವರಲ್ಲಿ ಬೇಡಿಕೊಳ್ಳುವುದು ಸಹಜವೇ. ಒಂದೊಂದು ದೇವರಿಗೂ ತನ್ನ ಸ್ಥಳದ ಮಹಿಮೆ ಇರುತ್ತದೆ. ಅಂತೆಯೇ ಇಲ್ಲೊಂದು ದೇವಿ ಇದ್ದಾಳೆ. ಈಕೆಯ ಮಹಿಮೆಯನ್ನು ಹಲವರು ತಿಳಿದಿದ್ದಾರೆ. ನೀವು ಕೂಡ ಒಮ್ಮೆ ಈ ದೇವಿಯ ದರ್ಶನ ಪಡೆಯಿರಿ.    

ತುಮಕೂರು ಜಿಲ್ಲೆಯಲ್ಲಿ ಈ ಉಡುಸಲಮ್ಮ ದೇವಿ ಇದ್ದಾಳೆ. ಶಿರಾ ರಸ್ತೆಯ ಮೂಲಕ ಚಿತ್ರದುರ್ಗಾ ಹೈವೆಯಲ್ಲಿ ಸಾಗಿದರೆ ದ್ವಾರಾಳು ಎಂಬ ಗ್ರಾಮ ಸಿಗುತ್ತದೆ. ಅಲ್ಲೇ ಉಡುಸಲಮ್ಮ ದೇವಿ ನೆಲೆಸಿರುವುದು.

ಇನ್ನು ಈ ದೇವಿ ಬಳಿ ಬಂದು ಯಾರು ಏನೇ ಹರಕೆ ಹೊತ್ತರೂ ನೆರವೇರುತ್ತದೆ. ನಿಮ್ಮ ಯಾವುದಾದರೂ ಕೆಲಸ ಬಾಕಿ ಇದ್ದರೂ, ಆ ಕೆಲಸ ವಾಗುತ್ತಾ ಇಲ್ಲವಾ ಎಂಬ ಪ್ರಶ್ನೆಯನ್ನು ಕೇಳಿ ಉಡುಸಲಮ್ಮ ದೇವಿಯ ಬಳಿ ಕೇಳಿಕೊಂಡು ಅಲ್ಲಿರುವ ಕಲ್ಲಿನ ಮೇಲೆ ಕುಳಿತರೆ, ಕೆಲಸವಾಗುತ್ತದೆ ಎಂದಾದರೆ, ಆ ಕಲ್ಲು ತಿರುಗುತ್ತದೆಯಂತೆ. ಇದು ಹಲವರಿಗೆ ನಡೆದಿದೆ ಎಂದು ಹೇಳಲಾಗಿದ್ದು, ನೀವು ಒಮ್ಮೆ ಹೋಗಿ ನಿಮ್ಮ ಮನದಲ್ಲಿನ ಗೊಂದಲವನ್ನು ಪರಿಹರಿಸಿಕೊಳ್ಳಿ.