ಡಿಕೆ ರವಿ ಸಾವಿಗೆ ಪ್ರೀತಿಯೇ ಕಾರಣಾನಾ..? ಏನಿದು ಹಳೆ ಸುದ್ದಿ, ಹೊಸ ವಿಚಾರ..? ;ವಿಡಿಯೋ ವೈರಲ್

ಡಿಕೆ ರವಿ ಸಾವಿಗೆ ಪ್ರೀತಿಯೇ ಕಾರಣಾನಾ..? ಏನಿದು ಹಳೆ ಸುದ್ದಿ, ಹೊಸ ವಿಚಾರ..?  ;ವಿಡಿಯೋ ವೈರಲ್

ರೋಹಿಣಿ ಸಿಂಧೂರಿ ಜೊತೆಗೆ ದಿ. ಡಿಕೆ ರವಿ ಅವರ ಹೆಸರು ಮೊದಲಿನಿಂದಲೂ ತಳುಕಿ ಹಾಕಿಕೊಂಡಿದೆ. ರೋಹಿಣಿ ಸಿಂಧೂರಿ ಹಾಗೂ ಡಿಕೆ ರವಿ ಇಬ್ಬರೂ ಪ್ರೀತಿಸುತ್ತಿದ್ದರು. ಡಿಕೆ ರವಿ ಸಾವಿಗೆ ರೋಹಿಣಿನೇ ಕಾರಣ ಎಂದು ಅವರ ಪತ್ನಿ ಕುಸುಮ ಹಾಗೂ ಹಲವರು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಈ ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. 2014 ರ ಸೆಪ್ಟೆಂಬರ್ 15ರಿಂದ 2015 ರ ಮಾರ್ಚ್ 15 ರ ತನಕ ಡಿಕೆ ರವಿ ಹಾಗೂ ರೋಹಿಣಿ ಸಿಂಧೂರಿ ಸಂಪರ್ಕದಲ್ಲಿದ್ದರು. ರೋಹಿಣಿ ಸಿಂಧೂರಿ ಡಿಕೆ ರವಿ ಗೆ ಒಂದು ವರ್ಷ ಅವಧಿಯಲ್ಲಿ 239 ಸಲ ಕರೆ ಮಾಡಿದ್ದಾರೆ. ಇನ್ನು ಡಿಕೆ ರವಿ 108 ಕರೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿದೆ. 

ಈ ಬಗ್ಗೆ ರೂಪಾ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಆರೋಪಗಳ ಮೇಲೆ ಆರೋಪಗಳನ್ನು ಮಾಡುತ್ತಿದ್ದಾರೆ. ರೋಹಿಣಿ ಸಿಂಧೂರಿ ಅದೆಷ್ಟೋ ಜನರ ಮನೆಯನ್ನು ಹಾಳು ಮಾಡಿದ್ದಾಳೆ. ಅಕ್ರಮವಾಗಿ ಜಾಲಹಳ್ಳಿಯಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಾರೆ ಎಂಬುದನ್ನೂ ಸೇರಿಸಿ ಹಲವು ಆರೋಪಗಳನ್ನು ರೂಪಾ ಅವರು ಮಾಡಿದ್ದಾರೆ. ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ರಂಪ ಮಾಡಿರುವುದರಿಂದ ಸರ್ಕಾರಕ್ಕೆ ಇವರಿಬ್ಬರ ಕಿತ್ತಾಟ ತಲೆ ನೋವಾಗಿ ಪರಿಣಮಿಸಿದೆ.  

ಈ ಹಿಂದೆಯೂ ರೋಹಿಣಿ ಸಿಂಧೂರಿ ಹಾಗೂ ಸಾರಾ ಮಹೇಶ್ ಅವರ ನಡುವೆ ಗಲಾಟೆ ಆದಾಗಲೂ ಡಿಕೆ ರವಿ ವಿಚಾರ ಮುನ್ನೆಲೆಗೆ ಬಂದಿತ್ತು. ಇದೀಗ ಕೂಡ ಅದೇ ಆಗಿದೆ. ಸರ್ಕಾರವೂ ರೂಪಾ ಹಾಗೂ ರೋಹಿಣಿ ಸಿಂಧೂರಿ ಅವರನ್ನು ಸರ್ಕಾರ ವರ್ಗಾವಣೆ ಮಾಡಿದೆ. ಹಾಗಿದ್ದರೂ ಇವರಿಬ್ಬರ ಕಿತ್ತಾಟ ಕಡಿಮೆ ಆಗಿಲ್ಲ. ರೋಹಿಣಿ ಸಿಂಧೂರಿ ಅವರು ರೂಪಾ ವಿರುದ್ಧ ದೂರನ್ನು ನೀಡಿದ್ದಾರೆ. ರೂಪಾ ಇನ್ನೂ ಮಾಧ್ಯಮಗಳ ಮುಂದೆ ಬಂದು ರೋಹಿಣಿ ವಿರುದ್ಧ ಆರೋಪಗಳನ್ನು ಮಾಡುತ್ತಲೇ ಇದ್ದಾರೆ.( video credit ; achievers in kannada )