ಪತ್ನಿ ಸ್ಪಂದನ ಅವರ ಕೈಗೆ ವಿಜಯ್ ರಾಘವೇಂದ್ರ ಕೊಟ್ಟ ಉಡುಗೊರೆ ಏನು..? ಅಂದು ಆಗಿದ್ದೇನು

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಇತ್ತೀಚಿಗೆ ವಿದೇಶಕ್ಕೆ ತೆರಳಿದ್ದರು. ಆಗ ಅವರಿಗೆ ಇದ್ದಕ್ಕಿದ್ದಂತೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿರುವ ವಿಷಯ ಈಗಾಗಲೇ ಎಲ್ಲರಿಗೂ ಗೊತ್ತಿರುವಂತ ವಿಚಾರ. ತದನಂತರ ಬೆಂಗಳೂರಿನ ಅವರ ತಂದೆಯ ಮನೆಗೆ ಸ್ಪಂದನ ಅವರ ಪಾರ್ಥಿವ ಶರೀರವನ್ನು ತರಲಾಗಿತ್ತು. ನಂತರ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಿದ್ದು ಮೂರು ದಿನದ ಹಿಂದೆ ಅವರ ಅಂತಿಮ ಕ್ರಿಯೆ ಕೂಡ ನಡೆಯಿತು. ಹೌದು ನಿನ್ನೆಯಷ್ಟೇ ಇಡೀ ಕುಟುಂಬಸ್ಥರು ಮತ್ತು ಸ್ಪಂದನ ಅವರ ಮಗ ಶೌರ್ಯ ಅವರ ಪತಿ ವಿಜಯ್ ರಾಘವೇಂದ್ರ ಎಲ್ಲರೂ ಸೇರಿ ಮೂರು ದಿನದ ಹಾಲು ತುಪ್ಪ ಕಾರ್ಯಕ್ರಮ ನಡೆಸಿದ್ದು ಸ್ಪಂದನ ಅವರ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ.
ನಂತರ ಶ್ರೀರಂಗಪಟ್ಟಣಕ್ಕೆ ಹೋಗಿ ಸ್ಪಂದನ ಅವರ ಅಸ್ತಿಯನ್ನ ನದಿಯಲ್ಲಿ ಬಿಡಲಾಯಿತು. ಹೌದು ಸ್ಪಂದನ ಅವರು ಸಾವನ್ನಪ್ಪಿದ ಬಳಿಕ ಎಲ್ಲಾ ವಿಧಿ ವಿಧಾನ ಕೈಗೊಂಡಿದ್ದು ಅಂತಿಮ ಕ್ರಿಯೆಗೂ ಮುನ್ನ ವಿಜಯ ರಾಘವೇಂದ್ರ ಅವರು ತುಂಬಾನೇ ಭಾವುಕರಾಗಿದ್ದರು. ಈಗಲೂ ಕಣ್ಣೀರು ಹಾಕುತ್ತಲೇ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ..ಅಂದು ಅಂತಿಮ ಕ್ರಿಯೆಗೂ ಮುನ್ನ ವಿಜಯ್ ರಾಘವೇಂದ್ರ ಅವರ ಪ್ರೀತಿಯ ಮಡದಿ ಸ್ಪಂದನಾ ಅವರಿಗೆ ಏನೆಲ್ಲಾ ಉಡುಗೊರೆ ಕೊಟ್ಟು ಕಳಿಸಿದರು ಗೊತ್ತಾ..? ನಿಜಕ್ಕೂ ನಿಮ್ಮ ಕಣ್ಣಂಚಲಿ ನೀರು ತರುತ್ತೀರಿ.
ಹೌದು ವಿಜಯ್ ರಾಘವೇಂದ್ರ ಅವರ ಪ್ರೀತಿಯ ಪತ್ನಿ ಸ್ಪಂದನ ಅವರಿಗೆ ಅಂತಿಮ ಕ್ರಿಯೆಗೂ ಮುನ್ನ ಅವರ ಹಣೆಗೆ ಕುಂಕುಮ ಇಟ್ಟು, ಸ್ಪಂದನ ಅವರ ಮುಡಿಗೆ ಹೂವನ್ನು ಧರಿಸಿ, ಕೈಗೆ ಹಸಿರು ಬಳೆ ಹಾಕಿ ಮದುವೆ ದಿನ ಹಾಕಿಕೊಂಡಿದ್ದ ಸೀರೆಯನ್ನೇ ಉಡುಗೊರೆಯನ್ನಾಗಿ ನೀಡಿದರು ವಿಜಯ್ ರಾಘವೇಂದ್ರ. ಆ ನೋವಿನ ಜೊತೆಗೂ ಕೂಡ ಎಲ್ಲಾ ಕಾರ್ಯಗಳನ್ನು ವಿಜಯ್ ರಾಘವೇಂದ್ರ ಅವರು ಮಾಡಿದ್ದಾರೆ. ಮತ್ತೊಮ್ಮೆ ತಾಳಿ ಕಟ್ಟಿ ಮುತ್ತೈದೆಯಾಗಿ ಹೋಗಿ ಬಾ ಎಂದು ಹೆಂಡತಿಯ ಆತ್ಮಕ್ಕೆ ಶಾಂತಿ ಕೋರಿದರು. ಇಲ್ಲಿದೆ ನೋಡಿ ಆ ವಿಡಿಯೋ. ನಿಜಕ್ಕೂ ನೀವು ಕೂಡ ಕಣ್ಣಂಚಲ್ಲಿ ನೀರು ತರುವಂತಿದೆ. ವಿಡಿಯೋ ನೋಡಿದ ಬಳಿಕ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಕಾಮೆಂಟ್ ಮಾಡಿ..
VIDEO CREDIT: Kannada Taja Suddi