ಮಡದಿ ನೋವಿನಲ್ಲಿ ನೆಮ್ಮದಿ ಹುಡುಕಿ ಹೊರಟ ರಾಘು..! ಕಣ್ಣೀರು ಹಾಕಿದ ಕುಟುಂಬದವರು

ಕನ್ನಡ ಚಲನಚಿತ್ರರಂಗದ ಖ್ಯಾತ ನಟರಲ್ಲಿ ಬರುವ ನಟ ರಾಘು ಅವರು ಇತ್ತೀಚಿಗೆ ಅವರ ಹೆಂಡತಿ ಸ್ಪಂದನ ಅವರನ್ನು ಕಳೆದುಕೊಂಡರು..ವಿಧಿ ಆಟಕ್ಕೆ ಎಲ್ಲರೂ ಕೂಡ ತಲೆಬಾಗಲೇಬೇಕು, ಯಾರ ಜೀವನ, ಯಾವಾಗ, ಯಾವ ರೀತಿ, ಯಾವ ಸಮಯದಲ್ಲಿ ಎಷ್ಟು ನೋವನ್ನು ಕೊಟ್ಟು ಹೋಗುತ್ತದೆ ಎಂದು ಗೊತ್ತಾಗುವುದಿಲ್ಲ. ನಗು ನಗುತ್ತಾ ಸುಂದರ ಸಂಸಾರ ಕಟ್ಟಿಕೊಂಡು ಸಿನಿಮಾ ಜಗತ್ತಿನಲ್ಲಿ ಹೆಚ್ಚು ಗುರುತಿಸಿಕೊಳ್ಳದಿದ್ದರೂ ಕೂಡ ಸದಾ ನಗು ಮುಖದ ಜೊತೆಗೆ ನಟ ರಾಘು ಅವರು ಅವರ ಕುಟುಂಬದ ಪರಿವಾರದೊಂದಿಗೆ ಖುಷಿಯಾಗಿ ಇದ್ದರು.ಆದರೆ ಸ್ಪಂದನ ಅವರ ಅಗಲಿಕೆ ಧಿಡೀರ್ ಅವರನ್ನು ನೋವಿಗೆ ಒಳಗಾಗುವಂತೆ ಮಾಡಿದೆ.
ಸ್ಪಂದನ ಅವರನ್ನು ಕಳೆದುಕೊಂಡ ನಟ ರಾಘು ಇದೀಗ ಮಗನ ಭವಿಷ್ಯದ ಬಗ್ಗೆ ಹೆಚ್ಚು ವಿಚಾರ ಮಾಡುತ್ತಿದ್ದಾರೆ. ಜೊತೆಗೆ ಸ್ಪಂದನ ಅವರು ಇಷ್ಟು ಬೇಗ ನನ್ನನ್ನು ಬಿಟ್ಟು ಹೋದರಲ್ಲ ಎಂದು ಅವರ ನೆನಪಾದಾಗಲೆಲ್ಲ ಪ್ರತಿ ಬಾರಿ ಕಣ್ಣೀರು ಸುರಿಸುತ್ತಿದ್ದಾರೆ ನಟ ರಾಘು. ಇತ್ತೀಚಿಗೆ ಕಾರಿನಲ್ಲಿ ನೆಮ್ಮದಿ ಹುಡುಕಿಕೊಂಡು ಹೊರಟಿದ್ದಾರೆ. ಅದರ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಕಂಡು ಬಂದಿತ್ತು. ಅಸಲಿಗೆ ರಾಘು ಅವರು ಮಗನನ್ನು ಕರೆದುಕೊಂಡು ಕಾರಿನಲ್ಲಿ ಹೋಗಿದ್ದೆಲ್ಲಿಗೆ..? ನೆಮ್ಮದಿ ಹುಡುಕಿಕೊಂಡು ಹೋಗಿದ್ದಲ್ಲಿಗೆ ಗೊತ್ತಾ..? ಶಿರಡಿ ಸಾಯಿಬಾಬಾ ಆಸ್ಥಾನಕ್ಕೆ, ಸನ್ನಿಧಾನಕ್ಕೆ ನಟ ರಾಘು ಅವರು ಹೋಗಿದ್ದರಂತೆ. ಅಲ್ಲಿ ವಿಶೇಷ ಪೂಜೆ ಮಾಡಿಸಿ ಬಾಬಾ ಸನ್ನಿದಿಯಲ್ಲಿ ತಮ್ಮಿಷ್ಟದ ಕೋರಿಕೆಗಳನ್ನು ಕೇಳಿಕೊಂಡು ಬಂದಿದ್ದಾರೆ ಎಂದು ತಿಳಿದುಬಂದಿದೆ.
ಮಗನ ಭವಿಷ್ಯ ಕುರಿತು ಮತ್ತು ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸಿದ ನಟ ರಾಘು ಅವರು ಶಿರಡಿ ಸಾಯಿಬಾಬಾರ ಮುಂದೆ ಕಾಣಿಸಿಕೊಂಡರು. ಆ ಫೋಟೋ ಕೂಡ ಹೆಚ್ಚು ವೈರಲಾಗಿತ್ತು.ನನಗೆ ಇದೇ ನೆಮ್ಮದಿಯ ಸ್ಥಾನ ಎಂದು ಅಲ್ಲಿಗೆ ಹೋಗಿ ಬಂದ ಬಳಿಕ ಫೋಟೋಸ್ ಗಳನ್ನ ಅವರ ಸೋಶಿಯಲ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.. ಇಲ್ಲಿದೆ ನೋಡಿ ಆ ವಿಡಿಯೋ, ಒಮ್ಮೆ ನೋಡಿ ಮತ್ತು ಹೆಚ್ಚು ಶೇರ್ ಮಾಡಿ, ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ನೀವೂ ಸಹ ಪ್ರಾರ್ಥಿಸಿ. ಜೊತೆಗೆ ನಟ ವಿಜಯ ಅವರ ಬಾಳಿನಲ್ಲಿ ನೋವುಗಳು ಇನ್ಮುಂದೆ ಬರದೇ ಇರುವ ಹಾಗೆ ಆ ದೇವರಲ್ಲಿ ಬೇಡಿಕೊಳ್ಳಿ ಸಹ, ಧನ್ಯವಾದಗಳು....