ವಿಜಯ್ ಪತ್ನಿ ಸ್ಪಂದನಾ ಅವರ ಅಂತಿಮ ಕ್ರಿಯೆಗೆ ಡಿ ಬಾಸ್ ಯಾಕೆ ಬರಲಿಲ್ಲ ಗೊತ್ತೇ..? ಬಯಲಾಯ್ತು ಸತ್ಯ

ವಿಜಯ್ ಪತ್ನಿ ಸ್ಪಂದನಾ ಅವರ ಅಂತಿಮ ಕ್ರಿಯೆಗೆ ಡಿ ಬಾಸ್ ಯಾಕೆ ಬರಲಿಲ್ಲ ಗೊತ್ತೇ..? ಬಯಲಾಯ್ತು ಸತ್ಯ

ಚಂದನವನದ ನಟ ರಾಘವೇಂದ್ರ ವಿಜಯ್ ಅವರು ಇದೀಗ ಅವರ ಹೆಂಡತಿ ಸ್ಪಂದನ ಅವರ ನೆನಪಿನಲ್ಲಿ ಕಣ್ಣೀರು ಹಾಕುತ್ತಾ ಇದ್ದಾರೆ. ಹೌದು ಇತ್ತೀಚಿಗಷ್ಟೇ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಅತ್ತ ಬ್ಯಾಂಕಾಕ್ ಗೆ ಪ್ರವಾಸಕ್ಕೆ ಹೋಗಿದ್ದರು. ಆ ವೇಳೆ ಅವರಿಗೆ ಹೃದಯಘಾತ ಸಂಭವಿಸಿದ್ದು ಅಂದು ರಾತ್ರಿ ಮಲಗಿದ ಸ್ಪಂದನ ಅವರು ಮತ್ತೆ ಮೇಲೆ ಎಳಲೇ ಇಲ್ಲ ಎಂದು ತಿಳಿದುಬಂದಿತ್ತು. ತದನಂತರ ಬೆಂಗಳೂರಿನ ಅವರ ತಂದೆ ಮನೆಯಲ್ಲಿಯೇ ಎಲ್ಲಾ ಅಂತಿಮ ದರ್ಶನಕ್ಕೆ ಏರ್ಪಾಡು ಮಾಡಲಾಗಿದ್ದು, ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಅವರನ್ನ ಹರಿಚಂದ್ರ ಘಾಟ್ ಚಿತಗಾರದಲ್ಲಿ ಅಂತಿಮ ಕ್ರಿಯೆ ಮಾಡಲಾಯಿತು.

ಹೌದು ವಿಜಯ್ ರಾಘವೇಂದ್ರ ಅವರು ಇದೀಗ ಮೌನಕ್ಕೆ ಜಾರಿದ್ದಾರೆ ಎನ್ನಬಹುದು.ಅವರ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡು ಏನು ತೋಚದೆ ಕಣ್ಣೀರನ್ನು ಹಾಕುತ್ತಾ ಅವರ ನೆನಪಿನಲ್ಲಿ ಜೀವನ ಸಾಗಿಸುವಂತಹ ಪರಿಸ್ಥಿತಿ ಅವರಿಗೆ ಬಂದೊದಗಿದೆ. ಸ್ಪಂದನ ಅವರು ಸಾವನ್ನಪ್ಪಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಗಣ್ಯರು, ಹೆಚ್ಚು ಜನರು ಹಾಗೂ ವಿಜಯ್ ಅವರ ಅಭಿಮಾನಿಗಳು ಅತ್ತ ಸ್ಪಂದನ ಅವರನ್ನ ಕೊನೆಯ ಬಾರಿ ನೋಡಲು ಆಗಮಿಸಿದರು. ಹಾಗೂ ವಿಜಯ್ ಅವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದರು. ಕೇವಲ ವಿಜಯ್ ಅವರಿಗೆ ಮಾತ್ರವಲ್ಲದೆ ಅವರ ಇಡೀ ಕುಟುಂಬಕ್ಕೆ ಕಣ್ಣೀರು ಒರೆಸುವ ಕೆಲಸ ಮಾಡಿದರು. ಜೊತೆಗೆ ಸ್ಪಂದನ ಅವರ ಅಂತಿಮ ದರ್ಶನಕ್ಕೆ ಸಾಕಷ್ಟು ಕನ್ನಡ ಚಿತ್ರರಂಗದ ಗಣ್ಯರು, ನಟ ನಟಿಯರು, ಹಿರಿಯ ಕಲಾವಿದರು ಬಂದು ಹೋದರು. ಆದರೆ ನಟ ದರ್ಶನ್ ಅವರು ಯಾಕೆ ಬರಲಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಪ್ರಶ್ನೆ ಮಾಡುತ್ತಿದ್ದರು. ಆ ಪ್ರಶ್ನೆಗೆ ಉತ್ತರದಂತೆ ಇದೀಗ ಒಂದು ವಿಡಿಯೋ ದೊರಕಿದೆ.   

ಹೌದು ನಟ ದರ್ಶನ್ ಅವರು ಅಂದು ಒಂದು ಖಾಸಗಿ ಕಾರ್ಯಕ್ರಮಕ್ಕೆ ಬರುವುದಾಗಿ ಮೊದಲೇ ಹೇಳಿದ್ದರಂತೆ. ಹಾಗಾಗಿ ಅಲ್ಲಿಗೆ ಹೋಗಿದ್ದರು ಎನ್ನಲಾಗಿದೆ. ಅದೊಂದು ಕುದುರೆ ಕಾರ್ಯಕ್ರಮ ಆಗಿತ್ತು, ಅ ಹಾರ್ಸ್ ರೈಡಿಂಗ್ ಸ್ಕೂಲ್ ಉದ್ಘಾಟನೆಯ ಕಾರ್ಯಕ್ರಮಕ್ಕೆ ಡಿ ಬಾಸ್ ಅವರು ಹೋಗಿದ್ದರು. ಹಾಗಾಗಿ ಸ್ಪಂದನಾರ ಅಂತಿಮ ಕ್ರಿಯೆಗೆ ಬರಲು ಸಾಧ್ಯವಾಗಿಲ್ಲ. ಆದ್ರೂ ಕೂಡ ಸ್ಪಂದನ ಅವರ ಅಂತಿಮ ಕ್ರಿಯೆಗೂ ಮುನ್ನವೇ ಅತ್ತ ವಿಜಯ್ ರಾಘವೇಂದ್ರ ಹಾಗೂ ಮುರುಳಿಯವರಿಗೆ ಕಾಲ್ ಮಾಡಿ ಸಾಂತ್ವಾನ ಹೇಳಿದ್ದಾರಂತೆ ದರ್ಶನ್. ಹೌದು ಇಲ್ಲಿದೆ ನೋಡಿ ಆ ವಿಡಿಯೋ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿಯನ್ನು ಶೇರ್ ಮಾಡಿ, ಮತ್ತು ದರ್ಶನ್ ಅವರನ್ನು ಯಾರು ತಪ್ಪು ತಿಳಿಯಬೇಡಿ, ನಟ ದರ್ಶನ್ ಅವರು ಖಂಡಿತ ಅಂದು ಬರುವಂತವರು, ಆದರೆ ಅಂದು ಆ ಕಾರ್ಯಕ್ರಮಕ್ಕೆ ಹೋಗಿದ್ದ ಕಾರಣಕ್ಕಾಗಿ ಬರಲಾಗಲಿಲ್ಲ ಎಂದು ತಿಳಿದು ಬಂದಿದೆ...