ಅತ್ತಿಗೆ ಅಗಲಿಕೆ ನೋವಿನಲ್ಲಿರುವ ಶ್ರಿಮುರಳಿಯವರಿಗೆ ಏನಾಯ್ತು..? ಅಸಲಿಗೆ ಆಸ್ಪತ್ರೆಗೆ ಹೋಗಿದ್ದೇಕೆ

ಹೌದು ಕೊರೋನಾ ಬಂದ ಬಳಿಕ ಹಾಗೂ ಕರೋನ ಮುಂಚಿತವಾಗಿ ಸಾಕಷ್ಟು ಸಾವು ನೋವುಗಳು ಈಗಾಗಲೇ ನಡೆದು ಹೋಗಿವೆ. ಅದರಲ್ಲಿ ನಮ್ಮ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕೂಡ ಬಹುಬೇಗನೆ ಎಲ್ಲರನ್ನೂ ಬಿಟ್ಟು ದೈಹಿಕವಾಗಿ ದೂರವಾಗಿದ್ದು ನಿಜಕ್ಕೂ ತುಂಬಾನೇ ದುಃಖದ ಸಂಗತಿ. ರಾಜಕುಮಾರ್ ಕುಟುಂಬಕ್ಕೆ ಒಂದಾದ ಮೇಲೆ ಒಂದರಂತೆ ಕಷ್ಟಗಳು, ಕಂಟಕಗಳು ಎದುರಾದವು. ಅಂದು ಪುನೀತ್ ರಾಜಕುಮಾರ್ ಅವರು ವಿಧಿವಶರಾದರು. ನಂತರ ರಾಜ್ ಕುಟುಂಬದ ಮನೆ ಮಗ ಧ್ರುವಂತ್ ಅವರು ಕೂಡ ಆಕ್ಸಿಡೆಂಟ್ ನಲ್ಲಿ ಕಾಲು ಕಳೆದುಕೊಂಡರು.
ನಂತರ ಇದೀಗ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಸಹ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ..ಇದೆಲ್ಲದರ ನೋವಿನ ನಡುವೆ ನಿನ್ನೆ ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಕುಟುಂಬಸ್ಥರು ಮಾಡಿ ಮುಗಿಸಿದ್ದು, ಎಲ್ರೂ ನೋವಿನಲ್ಲಿಯೇ ಮನೆಗೆ ತೆರಳಿದ್ದಾರೆ..ಹೌದು. ಹೀಗೆ ಒಂದರ ಮೇಲೊಂದರಂತೆ ರಾಜ್ ಕುಟುಂಬಕ್ಕೆ ಕಂಟಕಗಳು ಎದುರಾಗುತ್ತಿವೆ. ವಿಜಯ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರನ್ನು ಕಳೆದುಕೊಂಡ ವೇಳೆ ಅವರಿಗೆ ಬೆನ್ನೆಲುಬಾಗಿ, ಪ್ರತಿ ಹಂತದಲ್ಲೂ ಎಲ್ಲಾ ಕಾರ್ಯ ಮುಗಿಯುವವರೆಗೂ ನಟ ಶ್ರೀ ಮುರಳಿ ಅವರೇ ನಿಂತಿದ್ದರು.
ಹೌದು ಶ್ರೀ ಮುರುಳಿಯವರು ಎಲ್ಲಾ ಕಾರ್ಯದಲ್ಲೂ ಜೊತೆಗೆ ನಿಂತುಕೊಂಡು ಅಣ್ಣನಿಗೆ ಸಾಂತ್ವನ ಹೇಳಿದ್ದನ್ನು ನೀವು ಕೂಡ ನೋಡಿದ್ದೀರಿ.. ಆದರೆ ನಿನ್ನೆ ಅತ್ತಿಗೆಯ ಪುಣ್ಯತಿಥಿಯಂದೆ ಶ್ರೀಮುರಳಿ ಕೈಯಲ್ಲಿ ಸ್ಟ್ಯಾಂಡು ಹಿಡಿದು ಕುಂಟುತ್ತ ಬಂದರು. ಹೌದು ಇದರ ಕುರಿತಾದ ಇನ್ನಷ್ಟು ಮಾಹಿತಿ ಈಗ ಲಭ್ಯವಾಗಿದ್ದು, ಶ್ರೀ ಮುರುಳಿ ಅವರು ಬಹುದಿನಗಳಿಂದ ಬೆನ್ನು ಮತ್ತು ಮಂಡಿ ನೋವು ಸಮಸ್ಯೆಯನ್ನು ಎದುರಿಸುತ್ತಿದ್ದಾರಂತೆ. ಈ ಕುರಿತು ಕಾಲು ಸರ್ಜರಿ ಮಾಡಿಸಿಕೊಂಡಿರುವ ನಟ ಶ್ರೀಮುರಳಿಯವರು ಮತ್ತೆ ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದಕ್ಕೆ ಕಾರಣ ಈ ಹಿಂದೆ ಸೂರ್ಯ ನಿರ್ದೇಶನದ ಶ್ರೀಮುರಳಿ ಅಭಿನಯದ ಭಘೀರ ಸಿನಿಮಾ ಶೂಟಿಂಗ್ ವೇಳೆ ಎಡಗಾಲಿಗೆ ಪೆಟ್ಟಾಗಿತ್ತು. ನಂತರದ ದಿನದಲ್ಲಿ ಮದಗಜ ಶೂಟಿಂಗ್ ವೇಳೆ ಅದೇ ಕಾಲಿಗೆ ಮತ್ತೆ ಪೆಟ್ಟಾಗಿತ್ತು. ಆ ಕಾಲಿನ ನೋವು ಇದೀಗ ಮತ್ತೆ ಕಾಣಿಸಿದೆ ಹಾಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಬದಲಿಗೆ ಕೆಲ ಯೂಟ್ಯೂಬ್ ಮಾದ್ಯಮ ಚಾನೆಲ್ ಹಾಗೂ ದೊಡ್ಡ ಮಾದ್ಯಮ ಚಾನೆಲ್ ಅವರು ಹೇಳುವ ಹಾಗೆ ಅವರಿಗೆ ಏನು ಆಗಿಲ್ಲ. ಚೆಕಪ್ ಗಾಗಿ ಕೇವಲ ಹೋಗಿದ್ದಾರಂತೆ. ಈ ವಿಡಿಯೋ ನೋಡಿ ಆದಷ್ಟು ಬೇಗನೆ ಈ ನೋವಿನ ಸಂಗತಿಗಳು ಇಲ್ಲಿಗೆ ಸ್ಥಗಿತ ಆಗಲಿ, ಆದಷ್ಟು ಬೇಗ ಶ್ರೀ ಮುರುಳಿಯವರು ಗುಣಮುಖರಾಗಲಿ ಎಂದು ನೀವು ಕೂಡ ಆ ದೇವರಲ್ಲಿ ಬೇಡಿಕೊಳ್ಳಿ, ಮತ್ತು ವಿಡಿಯೋ ನೋಡಿ ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ ಧನ್ಯವಾದಗಳು ....