
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಅಂತರ್ಜಾಲವು ಒಂದು ಮೋಜಿನ ಜಗತ್ತು. ಪ್ರತಿನಿತ್ಯ ಇಲ್ಲಿ ವಿಭಿನ್ನ ಬಗೆಯ ನೂರಾರು ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತವೆ. ಇಂತಹ ವಿಡಿಯೋಗಳು ಕೆಲವೊಮ್ಮೆ ನಗುವಂತೆ ಮಾಡುತ್ತವೆ, ಇನ್ನೂ ಕೆಲವೊಮ್ಮೆ ಆಶ್ಚರ್ಯವನ್ನು ಉಂಟು ಮಾಡುತ್ತವೆ. ಹಲವು ಬಾರಿ ಭಯವನ್ನೂ ಹುಟ್ಟಿಸುತ್ತವೆ. ಸದ್ಯ ಇಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಪತಿ ತನ್ನ ಪತ್ನಿಗೆ ಹಿಂಸೆ ಕೊಟ್ಟಿರುವ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ, ಆದರೆ ಇಲ್ಲೊಬ್ಬ ಪತ್ನಿ ಪತಿ ಕಚೇರಿಯಿಂದ ಮನೆಗೆ ಬರುವುದನ್ನೇ ಕಾಯುತ್ತಿದ್ದು, ಬಂದ ಕೂಡಲೇ ಹಿಗ್ಗಾಮುಗ್ಗ ಥಳಿಸಿದ್ದಾಳೆ. ಗಂಡ ಮನೆಗೆ ಬಂದು ಟೇಬಲ್ ಮೇಲೆ ಹೆಲ್ಮೆಟ್ ಇಟ್ಟ ತಕ್ಷಣ ಹೆಂಡತಿ ಓಡಿ ಬಂದು ಥಳಿಸಲು ಶುರು ಮಾಡುತ್ತಾಳೆ.
ಅನೇಕ ಬಳಕೆದಾರರು ಈ ವೀಡಿಯೊವನ್ನು ನೋಡಿ ಆಶ್ಚರ್ಯಚಕಿತರಾದರು ಮತ್ತು ಆತ ಅಂಥದ್ದೇನು ಮಾಡಿದ್ದ, ಆಕೆ ಯಾಕೆ ಅಷ್ಟು ಕೋಪಗೊಂಡಳು ಎಂದು ತಲೆ ಕೆಡಿಸಿಕೊಂಡಿದ್ದಾರೆ.
ಕೆಲವರು ಆಕೆಗೆ ಪತಿ ಮೇಲೆ ತುಂಬಾ ಕೋಪ ಇತ್ತು ಅದನ್ನು ಇವತ್ತು ತೀರಿಸಿ ಕೊಂಡಿದ್ದಾಳೆ ಎಂದು ಕಾಮೆಂಟ್ ಮಾಡಿದ್ದಾರೆ . ಆದರೆ ನಿಜವಾದ ಕಾರಣ ಏನೆಂದು ಗೊತ್ತಾಗಿಲ್ಲ
Wife beats husband immediately after he gets home pic.twitter.com/I32rzrKoQa
— Crazy Clips (@crazyclipsonly) May 6, 2023