ಪತಿ ಇಲ್ಲದಾಗ ಬೇರೊಬ್ಬನನ್ನು ಮನೆಗೆ ಕರೆಸಿಕೊಂಡ ಪತ್ನಿ ಲವ್ವಿ-ಡವ್ವಿ ; ನಂತ್ರ ಪತಿ ಮಾಡಿದ್ದೇನು ? ವಿಡಿಯೋ ವೈರಲ್

ಪತಿ ಇಲ್ಲದಾಗ ಬೇರೊಬ್ಬನನ್ನು ಮನೆಗೆ ಕರೆಸಿಕೊಂಡ ಪತ್ನಿ ಲವ್ವಿ-ಡವ್ವಿ ; ನಂತ್ರ ಪತಿ ಮಾಡಿದ್ದೇನು ? ವಿಡಿಯೋ ವೈರಲ್

ಇಲ್ಲೊಂದು ಸಿಸಿಟಿವಿ ವೀಡಿಯೋ ವೈರಲ್ ಆಗಿದೆ. ಇದರಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಪ್ರೀತಿಯಿಂದ ಆಫೀಸಿಗೆ ಕಳಿಸಿಕೊಡುತ್ತಾಳೆ. ಆದರೆ ಗಂಡ ಹೊರಟ ಕೂಡಲೇ ಈಕೆ ಏನು ಮಾಡುತ್ತಾಳೆ ಎಂಬುದನ್ನು ನೀವು ತಿಳಿದರೆ ಶಾಕ್ ಆಗುವುದು ಗ್ಯಾರೆಂಟಿ. ಈ ವೀಡಿಯೋವನ್ನ ನೋಡಿದ ಮೇಲೆ ಪ್ರತಿಯೊಬ್ಬರೂ ತಮ್ಮ ಪತ್ನಿಯರ ಮೇಲೆ ಅನುಮಾನ ಪಡದೇ ಇರುವುದಿಲ್ಲ. ಆದರೆ, ಈ ಸಂದರ್ಭದಲ್ಲಿ ನಿಮಗೊಂದು ವಿಚಾರವನ್ನು ನಾವು ಸ್ಪಷ್ಟಪಡಿಸಲೇಬೇಕು. 

ಅದೇನೆಂದರೆ, ಯಾರೋ ಒಬ್ಬರು ಅನಾಚಾರ ಮಾಡಿದರು ಎಂದರೆ ಅದು ಎಲ್ಲರೂ ಹಾಗೆ ಎಂದು ಹೇಳುವುದು ತಪ್ಪು. ಈ ವೀಡಿಯೋವನ್ನು ನೋಡಿದ ಮೇಲೆ ನೀವು ನಿಮ್ಮ ಹೆಂಡತಿಯರ ಮೇಲೆ ಅನುಮಾನ ಪಡಬೇಡಿ. ಇನ್ನು ಈ ವೀಡಿಯೋದಲ್ಲಿ ಮಹಿಳೆಯೊಬ್ಬಳು ತನ್ನ ಪತಿಯನ್ನು ಮನೆಯಿಂದ ಖುಷಿಯಾಗಿ ಕಳಿಸಿಕೊಡುತ್ತಾಳೆ. ಬಳಿಕ ಗಂಡ ಹೋದ ಮೇಲೆ, ಮತ್ತೆ ಮನೆಯಿಂದ ಆಚೆ ಬಂದು ನೋಡುತ್ತಾಳೆ. ಗಂಡ ಹೋಗಿರುವುದನ್ನು ಗಮನಿಸಿ ನಂತರ ತನ್ನ ಮೊಬೈಲ್ ನಿಂದ ಯಾರಿಗೋ ಕಾಲ್ ಮಾಡಿ ಮಾತನಾಡುತ್ತಾಳೆ. ಅವಳು ಫೊನ್ ಇಟ್ಟು ಒಳಗೆ ಹೋಗುತ್ತಾಳೆ.    

ತಕ್ಷಣವೇ ಮನೆಗೆ ಯಾರೋ ಯುವಕ ಬರುತ್ತಾನೆ. ಆಕೆ ಬಾಗಿಲನ್ನು ತೆರೆದು ಒಳಗೆ ಕರೆದುಕೊಳ್ಳುತ್ತಾಳೆ. ಆದರೆ, ಸ್ವಲ್ಪ ಹೊತ್ತಿಗೆ ಆಕೆ ಗಂಡ ಮರೆತದ್ದೇನನ್ನೋ ತೆಗೆದುಕೊಂಡು ಹೋಗುವ ಸಲುವಾಗಿ ವಾಪಸ್ ಬರುತ್ತಾನೆ. ಎಷ್ಟು ಬಾರಿ ಬಾಗಿಲು ತಟ್ಟಿದರೂ ಆಕೆ ತೆಗೆಯುವುದಿಲ್ಲ. ಕಿಟಕಿ ಮೂಲಕ ನೋಡಿದರೂ ತಿಳಿಯುವುದಿಲ್ಲ. ಕೊನೆಗೆ ಸ್ವಲ್ಪ ಸಮಯದ ಬಳಿಕ ಆಕೆ ಬಾಗಿಲನ್ನು ತೆಗೆಯುತ್ತಾಳೆ. ಅವನು ಒಳಗೆ ಹೋಗುತ್ತಿದ್ದಂತೆ ಮತ್ತೊಂದು ಬಾಗಿಲಿನಿಂದ ಓಡಿ ಹೋಗುತ್ತಾನೆ. ಇದನ್ನು ನೋಡಿದ ಆಕೆಯ ಗಂಡ ಪತ್ನಿಯೊಂದಿಗೆ ಜಗಳ ಮಾಡುತ್ತಾನೆ. ಪತ್ನಿಯ ಬಗ್ಗೆ ತಿಳಿದು, ಬೇಸರ ಮಾಡಿಕೊಂಡು ಅಲ್ಲೇ ಬಾಗಿಲಲ್ಲಿ ಅಳುತ್ತಾ ಕೂರುತ್ತಾನೆ. ಇದೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದಕ್ಕೆ ಅನಿಸುತ್ತೆ ಹೇಳುವುದು ಯಾವ ಹುತ್ತದಲ್ಲಿ ಯಾವ ಯಾವ ಹಾವಿರುತ್ತೋ ಗೊತ್ತಿಲ್ಲ ಎಂದು. ( video credit :3RD EYE )