ಡಿಕೆಡಿ ವೇದಿಕೆಯಲ್ಲಿ ಈ ವಾರವೇ ಕಾಣಿಸಿಕೊಳ್ಳಲಿದ್ದಾರ ರಾಘು..? ಇಲ್ಲಿದೆ ಅಸಲಿ ವಿಚಾರ

ಡಿಕೆಡಿ ವೇದಿಕೆಯಲ್ಲಿ ಈ ವಾರವೇ ಕಾಣಿಸಿಕೊಳ್ಳಲಿದ್ದಾರ ರಾಘು..? ಇಲ್ಲಿದೆ ಅಸಲಿ ವಿಚಾರ

ಕನ್ನಡ ಚಿತ್ರರಂಗದ ಖ್ಯಾತ ನಟರುಗಳ ಪಟ್ಟಿಯಲ್ಲಿ ವಿಜಯ್ ರಾಘವೇಂದ್ರ ಅವರು ಕೂಡ ಬರುತ್ತಾರೆ. ಹೌದು ಅವರಲಿ ಇವರು ಒಬ್ಬರು. ನಟ ವಿಜಯ್ ರಾಘವೇಂದ್ರ ಅವರು ಅವರ ಜೀವನದಲ್ಲಿ ಈ ರೀತಿ ಒಂದು ದಿನ ಇಷ್ಟು ಬೇಗ ಆಗುತ್ತದೆ ಎಂದು ಎಂದಿಗೂ ಕೂಡ ಅಂದುಕೊಂಡಿರಲಿಲ್ಲ. ಅಷ್ಟರಮಟ್ಟಿಗೆ ತುಂಬಾ ಪ್ರೀತಿ ಮಾಡಿ, ಇಷ್ಟಪಟ್ಟು ಮನೆಯವರ ಒಪ್ಪಿಗೆ ಪಡೆದು ಮದುವೆ ಮಾಡಿಕೊಂಡಿದ್ದ ಅವರ ಪ್ರೀತಿಯ ಮಡದಿ ಸ್ಪಂದನ ಅವರು ಇದೀಗ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಈ ವಿಚಾರ ಅವರನ್ನು ತುಂಬಾನೇ ಘಾಸಿ ಮಾಡಿದೆ.

ಅತಿ ಸಣ್ಣ ವಯಸ್ಸಿಗೆ ಸ್ಪಂದನ ಅವರ ಅಗಲಿಕೆ ವಿಜಯ ರಾಘವೇಂದ್ರ ಹಾಗೂ ಅವರ ಮಗ ಶೌರ್ಯ, ಹಾಗೂ  ಇಡೀ ಕುಟುಂಬಕ್ಕೆ ಹೆಚ್ಚು ಕಾಡುತ್ತಿದೆ. ರಾಘವೇಂದ್ರ ಅವರು ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಯಶಸ್ವಿ ಕಾಣಲಿಲ್ಲ ಅಂದರೂ ಕೂಡ ಇತ್ತೀಚಿಗೆ ಅವರದೇ ಆದ ಅಭಿನಯದ ಮೂಲಕ ಮತ್ತು ಕಿರುತೆರೆಯಲ್ಲಿ ತುಂಬಾ ಸಕ್ರಿಯ ಆಗಿದಂತಹ ನಟ. ಸ್ಪಂದನ ಅವರ ಅಗಲಿಕೆ ಇದೀಗ ಅವರಿಗೆ ಹೆಚ್ಚು ನೋವು ತಂದಿದ್ದು, ಆ ಎಲ್ಲಾ ನೋವುಗಳ ನಡುವೆ ಸ್ಪಂದನ ಕಂಡಿದ್ದ ಕನಸನ್ನ ನನಸು ಮಾಡಬೇಕಾಗಿದೆ. ಸ್ಪಂದನ ಅವರ ಮಗ ಶೌರ್ಯನನ್ನು ಇಂಡಸ್ಟ್ರಿಗೆ ತರಬೇಕು, ದೊಡ್ಡ ನಿರ್ಮಾಪಕಿ ಆಗಬೇಕು ಎನ್ನುವ ಕನಸನ್ನು ಹೊತ್ತಿದ್ದು, ಡೈರಿಯಲ್ಲಿ ಎಲ್ಲಾ ವಿಚಾರ ತಿಳಿದು ಬಂದಿತ್ತು. ಹೌದು, ಮನುಷ್ಯ ಅಂದ್ಮೇಲೆ ಹುಟ್ಟು ಹೇಗೆ ಉಚಿತ ಇರುತ್ತದೆಯೋ, ಸಾವು ಕೂಡ ಖಚಿತ ಇದ್ದೇ ಇರುತ್ತದೆ.. ಎಲ್ಲಾ ವಿಧಿ ಬರಹ. 

ಅದರಂತೆ ಎಲ್ಲಾ ವಾಸ್ತವವನ್ನು ಅರಿದುಕೊಂಡು ತಮ್ಮ ಪ್ರೀತಿಯ ಮಡದಿ ಕಂಡಿದ್ದ ಎಲ್ಲಾ ಆಸೆಗಳನ್ನು ರಾಘು ಈಡೇರಿಸಲೇಬೇಕು. ಅವರ ಮಗನನ್ನು ಈ ಸಿನಿಮಾ ಇಂಡಸ್ಟ್ರಿಗೆ ಪರಿಚಯ ಮಾಡಲೇಬೇಕು. ಹೌದು ಇದೀಗ ಹೆಂಡತಿಯ ಅಗಲಿಕೆ ನೋವಿನಲ್ಲಿರುವ ರಾಘು ಅವರು ಮತ್ತೆ ಡಿಕೆಡಿಗೆ ಬರುತ್ತಾರೆ, ಈ ವಾರವೇ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.ನೀವು ಕೂಡ ಮತ್ತೆ ಡಿಕೆಡಿಯಲ್ಲಿ ರಾಘು ಅವರನ್ನ ನೋಡಲು ಬಯಸಿದರೆ ಕಮೆಂಟ್ ಮಾಡಿ, ಸಿನಿಮಾ ಶೂಟಿಂಗ್ ಮತ್ತು ರಿಯಾಲಿಟಿ ಶೋ ಎರಡರಲ್ಲಿಯೂ ಮತ್ತೆ ಇಷ್ಟರಲ್ಲೇ ರಾಘು ಅವರು ಬಿಜಿಯಾಗಲಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿವೆ.

ವಾಸ್ತವ ಅರಿತು ಸ್ಪಂದನ ಅವರ ನೆನಪಿನಲ್ಲಿ ಮಗನ ಮುಖ ನೋಡಿಕೊಂಡು ಜೀವನ ಮಾಡಲೇಬೇಕು ರಾಘು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೆ ಮಾಹಿತಿ ಶೇರ್ ಮಾಡಿ ಧನ್ಯವಾದಗಳು..