ನೀವು ಹೆಲ್ಮೆಟ್‌ ಧರಿಸದಿದ್ದರೆ ಎಚ್ಚರ !! ಇನ್ಮೇಲೆ ದಿನಕ್ಕೆ 10,000 ದಂಡ ಕಟ್ಟುವವರು ನೀವಾಗಬಾರದೆಂದರೆ ಈ ಸ್ಟೋರಿ ನೋಡಿ..

ನೀವು ಹೆಲ್ಮೆಟ್‌ ಧರಿಸದಿದ್ದರೆ ಎಚ್ಚರ !! ಇನ್ಮೇಲೆ  ದಿನಕ್ಕೆ 10,000 ದಂಡ ಕಟ್ಟುವವರು ನೀವಾಗಬಾರದೆಂದರೆ ಈ ಸ್ಟೋರಿ ನೋಡಿ..

ಟ್ರಾಫಿಕ್ ರೂಲ್ಸ್ ದಿನ ದಿನಕ್ಕೂ ಸ್ಟ್ರಿಕ್ಟ್ ಆಗ್ತಾನೇ ಇದೆ. ಆದರೂ ವಾಹನ ಸವಾರರು ಕೊಂಚ ನೆಗ್ಲೆಕ್ಟ್ ಮಾಡುತ್ತಲೇ ಇರುತ್ತಾರೆ. ರೂಲ್ಸ್ ಫಾಲೋ ಮಾಡದ ವಾಹನ ಸವಾರರ ಜೇಬಿಗೆ ಸಾವಿರಾರು ರೂಪಾಯಿ ಕತ್ತರಿ ಬೀಳೋದಂತೂ ಗ್ಯಾರೆಂಟಿ. ಟ್ರಾಫಿಕ್ ಪೊಲೀಸರು ಎಲ್ಲೆಂದರಲ್ಲಿ ನಿಂತಿರುತ್ತಾರೆ. ವಾಹನದ ಡಾಕ್ಯೂಮೆಂಟ್ಸ್, ಲೈಸೆನ್ಸ್ ತೋರಿಸದಿದ್ದರೆ ಆವತ್ತು ಅವರ ಜೇಬು ಖಾಲಿಯಾದಂತೆಯೇ ಲೆಕ್ಕ. ಹೆಲ್ಮೆಟ್ ಹಾಕಿಲ್ಲ ಅಂದ್ರೆ ಫೈನ್ ಕಟ್ಟೋವರೆಗೂ ಗಾಡಿ ಕೀ ಕೊಡಲ್ಲ. ಲೈಸೆನ್ಸ್ ಮಾಡಿಸೋಕೆ ಆರ್ ಟಿ ಓ ಕಚೇರಿಗೆ ಅಲೆಯಬೇಕು ಎಂಬ ಯಾವ ತಲೆನೋವೂ ಇನ್ಮುಂದೆ ಇರೋದಿಲ್ಲ.

ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನಮ್ಮ ಜನರು ಮಾತ್ರ ಇದನ್ನು ಕಿವಿಗೆ ಹಾಕಿಕೊಳ್ಳುವ ಗೋಜಿಗೇ ಹೋಗೋದಿಲ್ಲ. ಕೇಂದ್ರ  ಮೋಟಾರು ವಾಹನ ಕಾಯ್ದೆ ಪ್ರಕಾರ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸುವುದು ಕಡ್ಡಾಯ. ಆದರೆ ಹೆಲ್ಮೆಟ್ ಧರಿಸದೇ ಓಡಾಡುತ್ತಿದ್ದರಿಂದ ಪೊಲೀಸರು ದಂಡವನ್ನಷ್ಟೇ ಕಟ್ಟಿಸಿಕೊಳ್ಳುತ್ತಿದ್ದರು. ಆದರೆ ಇದೀಗ ದಂಡವನ್ನು ಪೊಲೀಸರ ಕಣ್ಣಿಗೆ ಬಿದ್ದರಷ್ಟೇ ಕಟ್ಟಬೇಕು ಎಂದೇನಿಲ್ಲ. ಪೊಲೀಸರು ಇಲ್ಲದಿದ್ದರೂ ದಂಡವನ್ನು ಕಟ್ಟಲೇಬೇಕು. ಅದಕ್ಕಾಗಿಯೇ ಹೊಸ ಕ್ಯಾಮರಾಗಳು ಬಂದಿವೆ.  

ನಗರದಲ್ಲಿ ಈಗ ಇಂಟಿಗ್ರೇಟೆಡ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಬೆಂಗಳೂರಿನ ಎಲ್ಲಾ ಸಿಗ್ನಲ್ ಗಳಲ್ಲೂ ಇರಲಿವೆ. ನೀವು ಯಾಮಾರಿಯಾದರೂ ಹೆಲ್ಮೆಟ್ ಧರಿಸದಿದ್ದರೆ, ಐಟಿಎಂಎಸ್ ಕಣ್ಣಿನ ಮೂಲಕ ಸೆರೆಯಾಗುವುದು ಪಕ್ಕಾ. ಆಗ ದಂಡ ಕಟ್ಟಲೇಬೇಕು. ಅದರಲ್ಲೂ ಈ ಮುಂಚೆ ಹೆಲ್ಮೆಟ್ ಧರಿಸದೇ ಒಂದು ಕಡೆ ಬಿಲ್ ಕಟ್ಟಿದ್ದರೆ ಸಾಕಾಗುತ್ತಿತ್ತು. ಅದೇ ರಶೀದಿಯನ್ನು ತೋರಿಸಿದರೆ, ಇಡೀ ದಿನ ಹೆಲ್ಮೆಟ್ ಧರಿಸದೆ ಓಡಾಡಬಹುದಿತ್ತು. 

ಆದರೆ ಐಟಿಎಂಎಸ್ ಕ್ಯಾಮಾರಗಳು ಎಲ್ಲಾ ಕಡೆ ಇರುವುದರಿಂದ, ಪ್ರತೀ ಸಿಗ್ನಲ್ ಅನ್ನು ಹೆಲ್ಮೆಟ್ ಇಲ್ಲದೇ ದಾಟಿದರೆ, ದಂಡದ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ. ಒಂದು ಸಿಗ್ನಲ್ ದಾಟಿದರೆ 500 ರೂ. ನಾಲ್ಕು ಸಿಗ್ನಲ್ ದಾಟಿದರೆ 2000 ರೂ. ದಂಡ ಕಟ್ಟಬೇಕು. ಹೀಗೆ 10,000 ದಂಡವನ್ನೂ ಒಂದೇ ದಿನ ಕಟ್ಟುವ ಪೇಚಿಗೆ ಸಿಲುಕು ಸಾಧ್ಯತೆ ಹಚ್ಚಿದೆ. ಈಗಾಗಲೇ ಕಳೆದ ಒಂದೂವರೆ ತಿಂಗಳಲ್ಲಿ 9 ಲಕ್ಷಕ್ಕೂ ಅಧಿಕ ಕೇಸ್ ಗಳು ದಾಖಲಾಗಿದೆ. ಐಟಿಎಂಎಸ್ ಕ್ಯಾಮರಾಗಳನ್ನು ಫಿಕ್ಸ್ ಮಾಡಿದ ಒಂದೇ ತಿಂಗಳಿಗೆ ಇಷ್ಟೋಂದು ಕೇಸ್ ಗಳು ದಾಖಲಾಗಿದ್ದು, ಇನ್ಮುಂದೆಯಾದರೂ ಎಚ್ಚರದಿಂದ ಟ್ರಾಫಿಕ್ ರೂಲ್ಸ್ ಗಳನ್ನು ಫಾಲೋ ಮಾಡಿ.