2024ರ ಮೊದಲ ಮಾಘ ಪೂರ್ಣಿಮೆಯಲ್ಲಿ ನೀವು ಈ ರೀತಿ ಪೂಜೆ ಸಲ್ಲಿಸಿದರೆ ನಿಮ್ಮ ಸಮಸ್ಯೆ ಎಲ್ಲವು ಬಗೆ ಹರಿಯಲಿದೆ! ಹೇಗೆ ಗೊತ್ತಾ?

ಮಾಘ ಪೂರ್ಣಿಮೆ ಎಂದರೆ ಹಿಂದೂ ಪಂಚಾಂಗದ ಮಾಘ ಮಾಸದ ಪೂರ್ಣಿಮೆಯ ದಿನ. ಈ ದಿನದಲ್ಲಿ ಅನೇಕ ಧಾರ್ಮಿಕ ಕ್ರಿಯೆಗಳು ನಡೆಯುತ್ತವೆ ಮತ್ತು ಮಾಘ ಸ್ನಾನ, ದಾನ ಮಾಡುವುದು ನಿಮಗೆ ಹೆಚ್ಚಿನ ಶುಭ ಫಲ ನೀಡಲಿದೆ ಎಂದು ಹಿಂದೂ ಸಂಪ್ರದಾಯದಲ್ಲಿ ನಂಬಲಾಗುವುದು. ಅನೇಕ ಧಾರ್ಮಿಕ ಪವಿತ್ರ ಸ್ಥಳಗಳಲ್ಲಿ ಸ್ನಾನ ಮಾಡುವುದು ಹೆಚ್ಚಾಗಿದೆ ಈ ದಿನದಂದು ಆಚರಣೆ ಮಾಡಿಕೊಂಡು ಬಂದಿದೆ.ಇನ್ನೂ ದೇವಸ್ತಾನದ ಬಳಿ ಇರುವ ಸಮುದ್ರ, ನದಿ, ತೀರದ ಸ್ಥಳಗಳಲ್ಲಿ ಜನರು ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ಹಾಗೂ ಕಾಯಿಲೆಗಳು ದೂರ ಆಗಲಿದೆ ಎಂಬ ನಂಬಿಕೆ ಇದೆ. ಈ ನಂಬಿಕೆಯೂ ಹಿಂದೂ ಧರ್ಮದಲ್ಲಿ ಪೂರ್ಣಿಮೆ ದಿನಗಳಲ್ಲಿ ಒಂದು ಅತ್ಯಂತ ಪ್ರಮುಖವಾದ ದಿನ ಎಂದು ಹೇಳಲಾಗುವುದು.
ಇನ್ನೂ 2024ರ ಮೊದಲ ಮಾಘ ಪೂರ್ಣಿಮೆಯ ದಿನದಂದು ನೀವು ಭಗವಾನ್ ವಿಷ್ಣು ಹಾಗೂ ಲಕ್ಷ್ಮೀ ದೇವಿಯನ್ನು ಪೂಜಿಸ ಬೇಕು. ಇನ್ನೂ ಈ ದೇವರನ್ನು ನೀವು ಆ ದಿನದಂದು ಪೂಜೆ ಮಾಡಿದರೆ ನಿಮ್ಮೆಲ್ಲ ಇಷ್ಟಾರ್ಥಗಳು ಈಡೇರುತ್ತದೆ ಎಂದು ಹೇಳಲಾಗುತ್ತದೆ. ಈ ಬಾರಿ ಫೆಬ್ರವರಿ 24ರಂದು ಮಾಘ ಪೂರ್ಣಿಮೆಯಿದೆ . ಇದು ಮಾಘ ಮಾಸದ ಪೂರ್ಣಿಮೆಯ ದಿನವಾಗಿರುತ್ತದೆ, ಅದರಲ್ಲಿ ಬೆಳಗ್ಗೆ ನಿಮಗೆ ಸೂರ್ಯೋದಯಕ್ಕೆ ಹತ್ತು ನಿಮಿಷಗಳ ಅವಧಿಯಲ್ಲಿ ಸ್ನಾನ ಮಾಡಬೇಕು ಮತ್ತು ದಾನ ಕೊಡಬೇಕು. ಈ ಪೂರ್ಣಿಮೆಯ ದಿನ ಸಂಸ್ಕೃತ ಶ್ಲೋಕಗಳನ್ನು ಹಾಡುವುದು, ಪುಣ್ಯಕಾರ್ಯಗಳನ್ನು ಮಾಡುವುದು ಮತ್ತು ಧರ್ಮದ ಆಚರಣೆಗಳನ್ನು ನಡೆಸುವುದು ಪರಂಪರೆಯಾಗಿದೆ. ಈ ದಿನವು ಆರೋಗ್ಯದ ಹೆಚ್ಚಿನ ಶುಭವನ್ನು ತಂದುಕೊಡುತ್ತದೆ ಎಂದು ಭಾವಿಸಲಾಗಿದೆ.
ಮಾಘ ಪೂರ್ಣಿಮೆಯ ದಿನದಂದು ಭಗವಾನ್ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುವುದಕ್ಕೆ ಅನೇಕ ಪವಿತ್ರ ಕಾರ್ಯಗಳನ್ನು ಮಾಡಬಹುದು. ಮಾಘ ಪೂರ್ಣಿಮೆಯ ದಿನದಲ್ಲಿ ಸೂರ್ಯೋದಯದಲ್ಲಿ ನದಿ, ಸಮುದ್ರ, ಸರೋವರ ಇತ್ಯಾದಿ ಪವಿತ್ರ ಸ್ಥಳಗಳಲ್ಲಿ ಸ್ನಾನ ಮಾಡುವುದು ಅತ್ಯಂತ ಪುಣ್ಯಕಾರ್ಯ. ಕನಿಷ್ಠ ನವಗ್ರಹ ಪೂಜೆಯನ್ನು ಮಾಡಿ ಅದರಲ್ಲಿ ಹಣ ಮತ್ತು ಬೆಳೆಯ ಮಾಡಿದ ಆಹಾರಗಳನ್ನು ದಾನ ಮಾಡುವುದು ಪುಣ್ಯಕಾರ್ಯ. ಹಾಗೆಯೇ ವಿಷ್ಣು ಸಹಸ್ರನಾಮ ಸ್ತೋತ್ರವನ್ನು ಪಠಿಸಿ, ವಿಷ್ಣು ದೇವರಿಗೆ ಪೂಜೆ ಅರ್ಪಿಸುವುದು ಪುಣ್ಯಕಾರ್ಯ.
ಈ ಕಾರ್ಯಗಳನ್ನು ನಡೆಸುವುದರಿಂದ ಭಗವಾನ್ ವಿಷ್ಣು ಹಾಗೂ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಬಹುದು. ಇನ್ನೂ ದೇವಸ್ಥಾನಗಳಿಗೆ ಹೋಗದೆ ಇದ್ದಲ್ಲಿ ನೀವು ನಿಮ್ಮ ಮನೆಯಲ್ಲಿ ವಿಷ್ಣು ಹಾಗೂ ಲಕ್ಷ್ಮಿ ದೇವರಿಗೆ ತುಳಸಿ ಹಾರವನ್ನು ಅರ್ಪಿಸಿ ಮನೆಯಲ್ಲಿ ಒಂದು ನೈವೇದ್ಯ ಮಾಡಿ ಉಪವಾಸ ಇರಬಹುದು.