ಯಶ್ ಕೆನ್ನೆಗೆ ಬುಲೆಟ್ ಹಾರಿಸಿದ್ದು ಯಾರು ? ಕೇಳಿದರೆ ಶಾಕ್ ಆಗುತ್ತೀರಾ ; ವಿಡಿಯೋ ವೈರಲ್

ಕೆಜಿಎಫ್ ಚಿತ್ರ ಬಂದೇ ಬಂತು ಎಲ್ಲೆಲ್ಲೂ ಕೆಜಿಎಫ್ ಸುದ್ದಿಯೇ. ಒಂದಾ ಚಿತ್ರದ ಸುದ್ದಿ, ಇಲ್ಲವೇ ರಾಕಿ ಭಾಯ್ ಸುದ್ದಿ. ಇವರ ಸುದ್ದಿ ಇರದ ದಿನವೇ ಇಲ್ಲ. ಇನ್ನು ಕೆಜಿಎಫ್ ಚಿತ್ರಕ್ಕಾಗಿ ರಾಕಿಂಗ್ ಸ್ಟಾರ್ ಯಶ್ ಅದ್ಯಾವ ಗಳಿಗೆಯಲ್ಲಿ ಗಡ್ಡ ಬಿಟ್ಟರೋ ಗೊತ್ತಿಲ್ಲ. ಬಟ್, ಅಂದಿನಿಂದ ಇವರ ಅಭಿಮಾನಿಗಳ ಬಳಗ ಹೆಚ್ಚಾಗಿದ್ದಂತೂ ನಿಜವೇ. ಯಶ್ ಅವರಂತೆಯೇ ಅನೇಕರು ಗಡ್ಡ ಬಿಟ್ಟಿದ್ದಾರೆ. ಅಲ್ಲದೇ, ಯಶ್ ಅವರು ಯಾವ ಬ್ರಾಂಡ್ ನ ಆಯಿಲ್ ಯೂಸ್ ಮಾಡುತ್ತಾರೆ. ಅವರ ಗಡ್ಡ ಹಾಗೂ ತಲೆಕೂದಲನ್ನು ಹೇಗೆ ಮೇಂಟೈನ್ ಮಾಡುತ್ತಾರೆ ಎಂಬೆಲ್ಲಾ ವಿಚಾರದಲ್ಲೂ ಹಲವರಿಗೆ ಕುತೂಹಲವಿದ್ದೇ ಇರುತ್ತದೆ.
ಕೆಜಿಎಫ್ ಸಿನಿಮಾ ನೋಡಿದ ಅದೆಷ್ಟೋ ಜನ ತಾವೂ ಗಡ್ಡ ಬಿಡುವುದನ್ನು ಒಂದು ರೀತಿಯ ಟ್ರೆಂಡ್ ಮಾಡಿಕೊಂಡಿದ್ದಾರೆ. ಎಲ್ಲರೂ ರಾಕಿಭಾಯ್ ನಂತೆಯೇ ಗಡ್ಡ ಬಿಡುತ್ತಿದ್ದಾರೆ. ಉದ್ದನೆಯ ಗಡ್ಡ ಬಿಟ್ಟಿರುವ ನಮ್ಮ ರಾಕಿ ಭಾಯ್ ಈಗಾಗಲೇ ಒಂದು ಗಡ್ಡದ ಎಣ್ಣೆಯ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಇದು ಹೊಸ ಸುದ್ದಿಯೇನಲ್ಲ ಹಳೆಯ ವಿಚಾರವೇ. ಇದರ ಜಾಹೀರಾತು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಕೂಡ ಆಗಿತ್ತು. ಕೆಜಿಎಫ್ ಚಿತ್ರ ಬಳಿಕ ಮುಂದಿನ ಸಿನಿಮಾ ಬಗ್ಗೆ ಸುಳಿವು ಕೊಡದ ಯಶ್, ಗಡ್ಡದ ಜೊತೆಗೆ ಈಗ ತಲೆಕೂದಲನ್ನೂ ಉದ್ದವಾಗಿ ಬೆಳೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಯಶ್ ಅವರು, ಇದೀಗ ಮತ್ತೊಂದು ಅಡ್ವಟೈಸ್ ನಲ್ಲಿ ನಟಿಸಿದ್ದಾರೆ. ಫುಡ್ ಆಯಿಲ್, ಪೆಪ್ಸಿ, ಪಂಚೆ ಸೇರಿದಂತೆ ಹಲವು ಜಾಹೀರಾತುಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಯಶ್ ಕೆನ್ನೆಗೆ ಬುಲೆಟ್ ಬಂದು ತಾಗುತ್ತದೆ. ಏನಾಯ್ತೋ ಎಂದು ನೋಡುವ ಮುನ್ನವೇ, ಆ ಬುಲೆಟ್ ಚಾಕಲೇಟ್ ಆಗಿ ಬದಲಅಗಿ ಬಿಟ್ಟಿರುತ್ತದೆ. ಅದನ್ನು ಯಶ್ ಬಾಯಿಯಲ್ಲಿ ಹಾಕಿಕೊಂಡು ತಿನ್ನುತ್ತಾರೆ. ನಂತರ ಫೇಸ್ ವಾಶ್ ಬಳಸಿ ಮುಖ ತೊಳೆದುಕೊಳ್ಳುತ್ತಾರೆ. ಅಂದರೆ, ಬುಲೆಟ್ ಚಾಕಲೇಟ್ ಆಗಿ ಬದಲಾಗಲು ಆ ಫೇಸ್ ವಾಶ್ ಕಾರಣ ಎಂದು ತೋರಿಸಲಾಗಿದೆ.