ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ

ಯಾವ ನಾಲ್ಕು ಕೆಲಸಕ್ಕೆ ನಿಮ್ಮ ಮನೆಯಲಿ ಲಕ್ಷ್ಮಿ ದೇವಿ ನಿಲ್ಲೋಲ್ಲ ಗೊತ್ತೇ..? ಅಸ್ಲಿ ಕಾರಣ ಇಲ್ಲಿವೆ

ಜೀವನದಲ್ಲಿ ದುಡ್ಡು ಬಹಳ ಮುಖ್ಯ, ಪ್ರತಿಯೊಂದು ಕೆಲಸಕ್ಕೂ ಈ ದುಡ್ಡು ಅನ್ನೋದು ತುಂಬಾನೇ ಅತ್ಯಮೂಲ್ಯವಾಗಿದೆ. ಹೌದು, ದುಡ್ಡನ್ನು ನಾವು ಲಕ್ಷ್ಮಿ ದೇವಿಗೆ ಹೋಲಿಸುತ್ತೇವೆ, ಲಕ್ಷ್ಮಿ ದೇವಿಯು ಯಾವ ಮನೆಯಲ್ಲಿ ನೆಲೇಸುತ್ತಾಳೆ ಎಂತಹವರ ಮದ್ಯೆ ಇರಲು ಇಷ್ಟಪಡುತ್ತಾಳೆ ಎಂಬುದಾಗಿ ಈಗಾಗಲೇ ಸಾಕಷ್ಟು ವಿಚಾರಗಳ ಈ ಕುರಿತು ನೀವು ತಿಳಿದುಕೊಂಡಿದ್ದೀರಿ. ಆದರೆ ಈ ಲೇಖನದಲ್ಲಿ ನಾವು ಸ್ವಲ್ಪ ವಿಭಿನ್ನವಾಗಿ ಅರ್ಥೈಸಿಕೊಳ್ಳೋಣ. ಪ್ರತಿಯೊಬ್ಬ ಮನುಷ್ಯನಿಗೂ ಹಣ ಬೇಕು..ಒಳ್ಳೆಯ ಜೀವನ ಸಾಗಿಸಲು ಹಾಗೇನೇ  ಆರೋಗ್ಯವಂತ ಜೀವನ ಸಾಗಿಸಲು, ಹೊಟ್ಟೆಗೆ ಊಟ, ಮೈ ಮೇಲೆ ಬಟ್ಟೆ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕುಟುಂಬವನ್ನು ಸಾಗಿಸಲು ಹೀಗೆ ಪ್ರತಿ ಹಂತದಲ್ಲೂ ಸಹ ದುಡ್ಡು ತುಂಬಾನೇ ಅವಶ್ಯಕ..

ಆದರೆ ಪುರುಷ ಆದವನು ಅತಿಯಾಗಿ ಬುದ್ಧಿ ಉಪಯೋಗಿಸಿ ದುಡಿದರೂ ಅಥವಾ ಮಹಿಳೆ ಹೆಚ್ಚು ಕಷ್ಟದಿಂದ ದುಡ್ಡನ್ನು ಸಂಪಾದಿಸಿದರೂ ಮನೆಯಲ್ಲಿ ಕೆಲವೊಮ್ಮೆ ಹಣ ನಿಲ್ಲುವುದೇ ಇಲ್ಲ. ಅದಕ್ಕೆ ಕಾರಣ ಏನು ಎಂಬುದಾಗಿ ಚಾಣಕ್ಯ ತಿಳಿಸಿದ್ದು, ಒಟ್ಟು ನಾಲ್ಕು ಕಾರಣಗಳನ್ನು ಕೊಟ್ಟಿದ್ದಾರೆ..ಮೊದಲನೆಯದಾಗಿ ಮೂರ್ಖರ ಸನ್ಮಾನ, ಅಂದರೆ ನಿಮ್ಮ ಮನೆಗೆ ದೋಷ ಇದೆ, ನಿಮ್ಮ ಮನೆಯ ಮೇಲೆ ಕಟುಕರ ಕಣ್ಣು ಬಿದ್ದಿದೆ, ಆ ದೇವರ ಶಾಪ ತಟ್ಟಿದೆ ಹಾಗೆ ಹೀಗೆ ಎಂದು ಕೆಲವು ಮಾಟ ಮಂತ್ರ ಮಾಡುವವರು, ಏನು ಗೊತ್ತಿಲ್ಲದೆ ಇರುವ ಕೆಲವು ಜ್ಯೋತಿಷ್ಯರು ಏನು ಗೊತ್ತಿಲ್ಲದಿದ್ದರೂ ನಿಮ್ಮಿಂದ ಹಣವನ್ನು ಪಡೆದುಕೊಂಡು ಏನೇನು ಹೇಳಿ ಹೋಗುತ್ತಾರೆ. ಇಂತಹವರಿಂದ ಮೊದಲು ದೂರ ಇರಿ. ಮನೆಯಲಿ ಜಾಣರ ಸನ್ಮಾನ ಆಗಬೇಕು. ಅಂದ್ರೆ ಒಳ್ಳೆಯ ಸರಿಯಾದ ಮಾರ್ಗದಲ್ಲಿ ಜೀವನ ನಡೆಸಲು ಹೇಳುವ ವ್ಯಕ್ತಿ. ಆತನ ಮಾತು ಕೇಳಿದರೆ ಲಕ್ಷ್ಮಿ ನಿಮ್ಮಲ್ಲೆ ಇರುತ್ತಾರೆ ಇಲ್ಲವಾದರೆ ನೀವು ದುಡಿದ ಹಣ ನಿಮ್ಮ ಜೊತೆ ಇರುವುದಿಲ್ಲ ಎಂದು ಚಾಣಕ್ಯ ಹೇಳಿದ್ದಾರೆ..   

ಎರಡನೆಯದು ಗಂಡ ಹೆಂಡತಿ ನಡುವಿನ ಜಗಳ. ಹೌದು ದಂಪತಿಗಳಾದವರು ಜಗಳ ಮಾಡಿಕೊಳ್ಳದೆ ಸಂಸಾರ ತೂಗಿಸಿದರೆ ಲಕ್ಷ್ಮಿ ಅವರ ಜೊತೆಗೆ ಹೆಚ್ಚು ನೆಲೆಸುತ್ತಾಳೆ. ಇದೇ ಕಾರಣಕ್ಕಾಗಿ ಗಂಡ ಬಾರ್ ಸೇರುತ್ತಾನೆ ಹಣ ಹೋಗುತ್ತದೆ, ಹೆಂಡತಿ ಪೂಜಾರಿಗಳ ಬಳಿ ಅಲೆದಾಡಿ ಹಣವನ್ನು ಕಳೆದುಕೊಳ್ಳುತ್ತಾಳೆ ಎಂದು ಚಾಣಕ್ಯನ ವಾದ. ಮೂರನೆದು ಸೇವಿಂಗ್ಸ್, ಹೌದು ಹಣ ಉಳಿಸಿಕೊಳ್ಳುವ ವ್ಯಕ್ತಿ ಲ್, ಹಾಗೇನೇ ಹಣ ಉಳಿಸಿಕೊಳ್ಳದ ವ್ಯಕ್ತಿ ಹೇಗೆ ಲಕ್ಷ್ಮಿಯನ್ನು ಉಳಿಸಿಕೊಳ್ಳುವಲ್ಲಿ ವಿಫಲ ಆಗುತ್ತಾನೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಕೊನೆಯದಾಗಿ ನಿಮ್ಮ ಶತ್ರುವಿನಿಂದ ಹೇಗೆ ಹಣ ನಿಮ್ಮಿಂದ ಕೈ ತಪ್ಪಿ ಹೋಗುತ್ತದೆ ಎನ್ನಲಾಗಿ ಕೂಡ ನಾಲ್ಕನೇ ಕಾರಣವ ಚಾಣಕ್ಯ ಆ ಕುರಿತು ಸಹ ಹೇಳಿದ್ದು ಏನೆಂದು ನೀವು ತಿಳಿದುಕೊಳ್ಳಿ. ವಿಡಿಯೋ ಪೂರ್ತಿ ನೋಡಿ. ಈ ವಿಡಿಯೋ ಉಪಯುಕ್ತ ಅನಿಸಿದರೆ ಶೇರ್ ಮಾಡಿ ಧನ್ಯವಾದಗಳು... ( video credit : You Kannada ).