ಭಾವನಾ ಪ್ರೆಗ್ನೆಂಟ್ ಆಗಲು ಈ ಹುಡುಗನ ಕಾರಣ? ಅಸಲಿ ಸತ್ಯ ಬಿಚ್ಚಿಟ್ಟ ನಟಿ!!

ಭಾವನಾ ಪ್ರೆಗ್ನೆಂಟ್ ಆಗಲು ಈ ಹುಡುಗನ ಕಾರಣ? ಅಸಲಿ ಸತ್ಯ ಬಿಚ್ಚಿಟ್ಟ ನಟಿ!!

ಪ್ರತಿ ಕ್ಷಣ ಒಂದು ಒಳ್ಳೆಯ ಅನುಭವ. ತಾಯಿ ಆಗೋದು ಅಷ್ಟು ಸುಲಭದ ಮಾತಲ್ಲ. ಈಗ ನನಗೆ ಅನುಭವ ಆಗ್ತಿದೆ. ನಾವು ಬೆಳೆಯೋ ವಾತಾವರಣದಲ್ಲಿ ಮದುವೆ ಬೇಡ ಅನ್ನೋ ಅಂಥದ್ದೇನಿರಲ್ಲ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ.ನಾನು ಅಂಥದ್ದೇ ವಾತಾವರಣದಲ್ಲಿ ಬೆಳೆದೋಳು. ಆದರೆ ನಾನು ಆಯ್ಕೆ ಮಾಡಿಕೊಂಡ ಪ್ರೊಫೆಷನ್‌ ನಟನೆ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ. 

ಇದರಲ್ಲಿ ಏರಿಳಿತ ಜಾಸ್ತಿ. ಆದರೆ ನಟಿಯನ್ನು ಒಪ್ಪಿಕೊಳ್ಳುವುದು ತುಂಬಾ ಸುಲಭದ ಮಾತಲ್ಲ. ಮತ್ತೆ ಅವಳಿಗೆ ಅಂಥ ಸ್ವಾತಂತ್ರ್ಯವನ್ನು ಕೊಡುವುದು ಕೂಡ ತುಂಬಾ ವಿರಳ ಅಂತಾ ಹೇಳಬಹುದು.ಯಾರಾದರೂ ನನಗೆ ಇಷ್ಟಪಟ್ಟಿದ್ದರೆ ಅವರು ಮೊದಲು ಆಕ್ಟಿಂಗ್‌ ಬಿಡಬೇಕು ಎಂದು ಕಂಡಿಷನ್‌ ಹಾಕಿರ್ತಿದ್ರು ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ.ನಾನು ನಂಬಿಕೊಂಡ ಕಲೆ, ನನ್ನ ಕೆಲಸವನ್ನ ತಕ್ಷಣಕ್ಕೆ ಬಿಡಲು ಆಗುತ್ತಿರಲಿಲ್ಲ. ಅಷ್ಟು ಬ್ರಾಡ್‌ ಮೈಂಡ್‌ ಇರುವವರು ನಮಗಾಗಿ ಬರಬೇಕು. ಕಲಾವಿದರಾಗಿ ಬದುಕೋಕೆ ತುಂಬಾ ಸಪೋರ್ಟ್‌ ಬೇಕಾಗುತ್ತೆ. ಪ್ರತಿದಿನ ಒಂದು ಪರೀಕ್ಷೆ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ. 

ಯಾವಾಗ ಇದು ಬಾಳ ಸಂಗಾತಿ ಎಂಬ ವಿಚಾರಕ್ಕೆ ಬಂದ್ರೆ ನಟಿಯನ್ನ ಒಪ್ಪಿಕೊಳ್ಳೋಕೆ ತುಂಬಾ ಕಷ್ಟವಾದ ಕೆಲಸ. ಅದನ್ನ ಮೀರಿ ನನ್ನ ತನವನ್ನು ಉಳಿಸಿಕೊಂಡು, ನನ್ನ ವೃತ್ತಿ ಉಳಿಸಿಕೊಂಡು ನನ್ನ ಆತ್ಮ ಗೌರವಕ್ಕೆ ಧಕ್ಕೆ ಬರದಿರುವಂತಹ ಒಂದು ಸಂಬಂಧ ಹುಡುಕು ಬೇಕಂದ್ರೆ ನನಗೆ ಅದು ಸಿಗಲಿಲ್ಲ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ. ಆದರೆ ನನಗೆ ಆ ಬಗ್ಗೆ ಗಿಲ್ಟ್‌ ಇಲ್ಲ. ನನಗೆ ತಾಯಿ ಆಗೋಕೆ ಆಸೆ ಇತ್ತು. ಯಾರೂ ಸಲಹೆ ಕೊಟ್ಟಿಲ್ಲ ಇದು ನನ್ನ ನಿರ್ಧಾರ. ಬಾಳಲ್ಲಿ ಒಳ್ಳೆ ಸಂಗಾತಿ ಸಿಕ್ರೆ ಖಂಡಿತಾ ಮದುವೆ ಆಗ್ತೀನಿ ಎಂದು ನಟಿ ಭಾವನಾ ರಾಮಣ್ಣ ಹೇಳಿದ್ದಾರೆ. 

ನನ್ನ ಮೂವತ್ತರ ಹರೆಯದಲ್ಲಿ, ನಾನು ಪ್ರೀತಿಗೆ ಸಿದ್ಧಳಾಗಿದ್ದೆ, ಆದರೆ ಆಗಲೂ, ತಾಯ್ತನವು ನಾನು ಪರಿಗಣಿಸುವ ವಿಷಯವಾಗಿರಲಿಲ್ಲ. ನಾನು 40 ವರ್ಷಕ್ಕೆ ಕಾಲಿಟ್ಟಾಗ ತಾಯಿಯಾಗುವ ಬಯಕೆಯನ್ನು ನಿರ್ಲಕ್ಷಿಸಲು ಸಾಧ್ಯವಾಗಲಿಲ್ಲ. ನಾನು ಈಗ ಆ ಆಳವಾದ ಬಯಕೆಯನ್ನು ಪೂರೈಸಿಕೊಳ್ಳುತ್ತಿದ್ದೇನೆ. ನಾನೀಗ ಆರು ತಿಂಗಳ ಗರ್ಭಿಣಿ. ಅವಳಿ ಮಕ್ಕಳನ್ನು ನಿರೀಕ್ಷಿಸುತ್ತಿದ್ದೇನೆ ಎಂದು ಸಂದರ್ಶನದಲ್ಲಿ ಭಾವನಾ ರಾಮಣ್ಣ ಹೇಳಿದ್ದಾರೆ.