ಮಡೆನೂರು ಮನು ಬೆನ್ನಲ್ಲೇ ಮತ್ತೊಬ್ಬ ಕಾಮಿಡಿ ಕಿಲಾಡಿ ನಟನ ಮೇಲೆ ಮಹಿಳೆ ಗಂಭೀರ ಆರೋಪ ! ಶಾಕಿಂಗ್ ಆಡಿಯೋ ವೈರಲ್ ?

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಡೆನೂರು ಮನು ಪೊಲೀಸ್ ವಶದಲ್ಲಿ ಇರೋವಾಗಲೇ ಮತ್ತೊಬ್ಬ ಹಾಸ್ಯ ನಟನ ಮೇಲೆ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ.ಆದ್ರೆ, ಇದರ ಮಧ್ಯೆ ಮಡೆನೂರು ಮನು ಬೆನ್ನಲ್ಲೇ ಸಂತ್ರಸ್ತೆ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಸಂತ್ರಸ್ತೆ ಮಾತಾಡಿರೋ ಆಡಿಯೋವೊಂದು ವೈರಲ್ ಆಗುತ್ತಿದೆ. ಆ ಆಡಿಯೋದಲ್ಲಿ ಹಾಸ್ಯ ಕಲಾವಿದ ಅಪ್ಪಣ್ಣ ವಿರುದ್ಧ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಡಿಯರ್ ಸತ್ಯ, ರಾಮಾರ್ಜುನ, ಪೈಲ್ವಾನ್ ಸಿನಿಮಾಗಳಲ್ಲಿ ನಟಿಸಿರೋ ಅಪ್ಪಣ್ಣ ರಾಮದುರ್ಗ ಮೇಲೆ ನಟಿ ಕಿರುತೆರೆ ನಟಿ ಗಂಭೀರವಾಗಿ ಆರೋಪ ಮಾಡಿದ್ದಾರೆ.
ಕಾಮಿಡಿ ಕಿಲಾಡಿಗಳಲ್ಲಿ ಅಪ್ಪಣ್ಣ ರಾಮದುರ್ಗ ಅಂತ ಇದ್ದಾನೆ. ಅಪ್ಪಣ್ಣ ಕಾಮಿಡಿ ಕಿಲಾಡಿಗಳು ಸೀಸನ್ 2ನಿಂದನೂ ನನಗೆ ಹಿಂಸೆ ಕೊಡ್ತಾನೇ ಇದ್ದ. ಶೋಗಳಿಗೆ ಕರೆದುಕೊಂಡು ಹೋಗಿ ನನಗೆ ಹಿಂಸೆ ಕೊಡ್ತಾನೆ ಇದ್ದ. ಅಪ್ಪಣ್ಣ ನನಗೆ ಕೆಟ್ಟ ದೃಷ್ಟಿಯಲ್ಲಿ ನೋಡ್ತಿದ್ದ. ದಿನೇ ದಿನೇ ನನಗೆ ಮಾನಸಿಕವಾಗಿ ಹಿಂಸೆ ತುಂಬಾ ಟಾರ್ಚರ್ ಕೊಡ್ತಾ ಇದ್ದ. ನನ್ನ ಬಾಯ್ ಫ್ರೆಂಡ್ ಜೊತೆ ಬ್ರೇಕ್ ಅಪ್ ಆಗಲು ಅಪಣ್ಣನೇ ಕಾರಣ. ನಾನು ಆತ್ಮಹ* ಮಾಡ್ಕೊಂಡ್ರೆ ಅದಕ್ಕೆ ಅಪ್ಪಣ್ಣನೇ ಕಾರಣ. ನನ್ನ ಜೀವನ ನರಕ ಮಾಡಿರೋ ಅಪ್ಪಣ್ಣನ ಸುಮ್ನೆ ಬಿಡ್ಬೇಡಿ ಅಂತ ಹೇಳಿದ್ದಾರೆ.
ಇದೀಗ ಸಂತ್ರಸ್ತೆ ಮಾಡಿರೋ ಆರೋಪ ಎಲ್ಲ ಸುಳ್ಳು ಅಂತ ಖುದ್ದು ನಟ ಪೈಲ್ವಾನ್ ಸಿನಿಮಾ ನಟ ಅಪ್ಪಣ್ಣ ರಾಮದುರ್ಗ ಅವರು ನ್ಯೂಸ್ ಫಸ್ಟ್ ದೂರವಾಣಿಯಲ್ಲಿ ಮಾತಾಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಪ್ಪಣ್ಣ ರಾಮದುರ್ಗ, ಸಂತ್ರಸ್ತೆಯ ಆರೋಪ ಸುಳ್ಳು. ಅವರಿಬ್ಬರ ಜಗಳದಲ್ಲಿ ನಮ್ಮ ಹೆಸರು ತರಲಾಗ್ತಿದೆ. ಇದು ಒಂದೂವರೆ ವರ್ಷದ ಹಳೆಯ ಆಡಿಯೋ. ನನ್ನ ಜೊತೆ ಶೋ ಮಾಡಬಾರದು ಅಂತಾ ಮನು ಮಾಡಿಸಿರೋ ವಿಡಿಯೋ ಇದು. ಈ ಬಗ್ಗೆ ಸಂತ್ರಸ್ತೆ ನನ್ನ ಬಳಿ ಹೇಳಿಕೊಂಡಿದ್ರು. ಅವರಿಬ್ಬರ ಮಧ್ಯೆ ತುಂಬಾ ಪೊಸೆಸಿವ್ನೆಸ್ ಇತ್ತು. ನಮ್ಮನ್ನು ದೂರ ಇಡಲು ಮನು ಮಾಡಿಸಿರೋ ಆಡಿಯೋ ಇದು. ನಾನು ಯಾವುದೇ ಕಿರುಕಳ ನೀಡಿಲ್ಲ. ಸಂತ್ರಸ್ತೆಯ ಬಳಿಯ ಇದರ ಬಗ್ಗೆ ಮಾಹಿತಿ ಸಿಗುತ್ತೆ ಅಂತ ಹೇಳಿದ್ದಾರೆ.