ಅನುಪಮಾ ಗೌಡ ಮದುವೆ ಆಗದಿರುವದಕ್ಕೆ ಆ ಲವ್ ಫೇಲ್ಯೂರ್ ಕಾರಣ ? ಇಲ್ಲಿದೆ ನೋಡಿ ಅಸಲಿ ಸತ್ಯ

ಅನುಪಮಾ ಗೌಡ ಮದುವೆ ಆಗದಿರುವದಕ್ಕೆ ಆ ಲವ್ ಫೇಲ್ಯೂರ್ ಕಾರಣ ? ಇಲ್ಲಿದೆ ನೋಡಿ ಅಸಲಿ ಸತ್ಯ

ಕನ್ನಡದ ಅಕ್ಕ ಸೀರಿಯಲ್ ಮುಖಾಂತರ ಕನ್ನಡದ ಪ್ರತಿಯೊಂದು ಮನೆಗೂ ಪರಿಚಯವಾದಂತಹ ಹೆಣ್ಣು ಮಕ್ಕಳು ಅಂದ್ರೆ ಅದು ಅನುಪಮ ಗೌಡ ಅವರು ಅನುಪಮ ಗೌಡ ಅಂದ್ರೆ ಯಾರಿಗೂ ಕೂಡ ಅರ್ಥ ಆಗ್ಲಿಕ್ಕಿಲ್ಲ ಅಕ್ಕ ಅನು ಅಂತ ಹೇಳಿದ್ರೆ ಎಲ್ಲರಿಗೂ ಕೂಡ ಅರ್ಥ ಆಗ್ತಾರೆ ಯಾಕಂತ ಹೇಳಿದ್ರೆ ಅಕ್ಕ ಅನ್ನೋ ಒಂದು ಸೀರಿಯಲ್ ಆಗ ಅಷ್ಟು ದೊಡ್ಡ ಮಟ್ಟಕ್ಕೆ ಒಂದು ಹಿಟ್ಟನ್ನ ತಂದುಕೊಡ್ತು ಅವರಿಗೂ ಒಂದು ಜೀವನದಲ್ಲಿ ಸ್ಟೇಬಲ್ ಆಗಿ ನಿಂತುಕೊಳ್ಳುವಂತಹ ಒಂದು ಅವಕಾಶವನ್ನು ಕೂಡ ಆ ಸೀರಿಯಲ್ ತಂದುಕೊಡ್ತು ಅದಾದ ನಂತರ ಅನುಪಮ ಅವರು ಆ ಸೀರಿಯಲ್ ಮುಗಿದ ನಂತರ ಒಂದು ಎರಡು ಮೂರು ಕಡೆ ಅವರು ಆಂಕರಿಂಗ್ ಆಗಿ ಗುರುತಿಸಿಕೊಂಡ್ರು 


ಈ ಮಧ್ಯೆ ತಮ್ಮ ಲವ್‌ ಲೈಫ್, ಬ್ರೇಕಪ್‌ ಬಗ್ಗೆ ಮುಕ್ತವಾಗಿ ಮಾತನಾಡಿದ್ದು, “ಆ ವ್ಯಕ್ತಿ ಮೇಲೆ ತುಂಬಾ ಡಿಪೆಂಡ್ ಆಗಿದ್ದೆ, ಬಿಟ್ಟು ಹೋದಮೇಲೆ ಲೈಫೇ ಬೇಡ ಅಂತ ಡಿಸೈಡ್ ಆಗಿ ಮೆಂಟಲ್‌ ಅಗಿದ್ದೆ” ಎಂಬ ವಿಚಾರವನ್ನು ಹಂಚಿಕೊಂಡಿದ್ದಾರೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಅನುಪಮಾ ಗೌಡ, “ನನ್ನ ಕನಸ್ಸು ಒಡೆದು ಹೋಗುವುದಕ್ಕೆ ನನ್ನದು ತುಂಬಾ ಕಾರಣಗಳಿವೆ .'ಆ ವ್ಯಕ್ತಿ ಇಲ್ಲದೇ ನನ್ನ ಜೀವನವನ್ನು ನಾನು ಊಹಿಸಿಕೊಂಡಿರಲಿಲ್ಲ. ಆ ವ್ಯಕ್ತಿ ಕೂಡ ಅಷ್ಟೇ ಪ್ರೀತಿ ಮಾಡುತ್ತಿದ್ದರು. ನಮ್ಮಲ್ಲಿ ಅಂಡರ್‌ಸ್ಟ್ಯಾಂಡಿಂಗ್‌ ಕಳೆದುಕೊಂಡು, ತೀರಾ ನೆಗಟಿವ್‌ ಆಗುವುದಕ್ಕೆ ಶುರುವಾಯ್ತು. ಶೂಟಿಂಗ್‌ ಮತ್ತು ಮನೆ ಒತ್ತಡವನ್ನು ತಂದು ಅವರ ಮೇಲೆ ಹೇರುತ್ತಿದ್ದೆ. ಯಾವಾಗ ಮತ್ತು ಹೇಗೆ ಇದು ಕೊನೆಗೊಂಡಿತು ಅನ್ನುವುದೇ ನನಗೆ ಗೊತ್ತಿರಲಿಲ್ಲ. ಎಷ್ಟೋ ಬಾರಿ ಜಗಳವಾಡಿ, ಮತ್ತೆ ಒಂದಾಗಿದ್ದು ಇದೆ.

ತುಂಬಾ ಕೇರ್‌ ಮಾಡುತ್ತಿದ್ದ ವ್ಯಕ್ತಿ ಅವರು ಮುಂದುವರೆದು, “ನಮ್ಮ ಸಂಬಂಧ ಮುಗಿದ ಮೇಲೂ ನನಗೆ ಆ ವ್ಯಕ್ತಿಯನ್ನು ಹೇಟ್‌ ಮಾಡುವುದಕ್ಕೆ ಆಗಲಿಲ್ಲ. ಅವರ ಮೇಲೆ ತುಂಬಾ ಡಿಪೆಂಡ್‌ ಆಗಿದ್ದೆ. ಆರು ವರ್ಷಗಳ ಕಾಲ ಶೂಟಿಂಗ್‌, ಮನೆ ಬಿಟ್ರೆ ಆ ವ್ಯಕ್ತಿ ಅಷ್ಟೇ ನನ್ನ ಪ್ರಪಂಚ ಆಗಿದ್ದರು. ಸಡನ್‌ ಆಗಿ ಅದೆಲ್ಲ ಮುರಿದುಹೋಯ್ತು. ಹಿಂಸೆ ಆಗುವುದಕ್ಕೆ ಶುರುವಾಯ್ತು. ನನ್ನ ಲೈಫ್‌ನಲ್ಲಿ ಒಂದು ವ್ಯಕ್ತಿ ಮೇಲೆ ನಾನು ಅಷ್ಟು ಡಿಪೆಂಡ್‌ ಆಗಿದ್ದೆ. ನಾಲ್ಕು ವರ್ಷ ಅದರಿಂದ ಹೊರ ಬರುವುದಕ್ಕೆ ಕಷ್ಟ ಪಟ್ಟಿದ್ದೀನಿ” ಎಂದಿದ್ದಾರೆ ಅನುಪಮಾ ಗೌಡ.

ನನ್ನ ಲವ್ ಬ್ರೇಕಪ್ ಆಗಿದ್ದು ಬಹುತೇಕ ಎಲ್ಲರಿಗೂ ಗೊತ್ತು. ಅಷ್ಟು ವರುಷಗಳ ಕಾಲ ಪ್ರೀತಿಸಿ, ಇನ್ನು ಮದುವೆಯಾಗಿ ಲೈಫ್‌ನಲ್ಲಿ ಸೆಟ್ಲ್ ಆಗುತ್ತೇನೆ ಎನ್ನುವಾಗ ನನ್ನ ಲವ್ ಮುರಿದುಬಿತ್ತು. ಅದನ್ನು ಎದುರಿಸಲು ನನಗೆ ಯಾವುದೇ ಪೂರ್ವ ಸಿದ್ಧತೆ ಇರಲಿಲ್ಲ. ತಕ್ಷಣಕ್ಕೆ ನನಗೆ ತೋಚಿದ್ದು ಸಾವೇ ಇಲ್ಲದಕ್ಕೂ ಪರಿಹಾರ ಎಂದು ಮಾತ್ರ. ಅದಕ್ಕೇ ಆತ್ಮಹತ್ಯೆಗೆ ಪ್ರಯತ್ನಿಸಿ ಸೋತೆ. ಅದನ್ನು ಸೋಲು ಎನ್ನುವುದಕ್ಕಿಂತ ಗೆಲುವು ಎನ್ನಬೇಕು. ನಾನು ಸಾವನ್ನು ಗೆದ್ದೆ ಎಂದೇ ಹೇಳಲು ಇಷ್ಟಪಡುತ್ತೇನೆ.