ಅನುಶ್ರೀ ಬಗ್ಗೆ ಅಭಿಮಾನಿಗಳು ಬೇಸರ ಮತ್ತು ಕೋಪ ವ್ಯಕ್ತ ಪಡಿಸಿದ್ದು ಯಾಕೆ !! ಅಸಲಿ ಕಾರಣ ಇಲ್ಲಿದೆ ನೋಡಿ

ಅನುಶ್ರೀ  ಬಗ್ಗೆ  ಅಭಿಮಾನಿಗಳು  ಬೇಸರ ಮತ್ತು ಕೋಪ ವ್ಯಕ್ತ ಪಡಿಸಿದ್ದು ಯಾಕೆ !! ಅಸಲಿ ಕಾರಣ ಇಲ್ಲಿದೆ ನೋಡಿ

ಮಹಾನಟಿ  ಫಿನಾಲೆ ನಡೆಯುತ್ತಿದೆ. ಇದು ಸೀಸನ್​ -2 ಆಗಿದ್ದು, ಯಾರಿಗೆ ಮಹಾನಟಿಯ ಪಟ್ಟ ಒಲಿಯಲಿದೆ ಎನ್ನುವ ಬಗ್ಗೆ ಸಕತ್​ ಕಾತರದಿಂದ ಅಭಿಮಾನಿಗಳು ಕಾಯುತ್ತಿದ್ದಾರೆ.ಇದರ ನಡುವೆಯೇ ಪ್ರೊಮೋ ರಿಲೀಸ್ ಆಗಿದ್ದು, ಇದರಲ್ಲಿ ಆ್ಯಂಕರ್​ ಅನುಶ್ರೀ  ಅವರನ್ನು ನೋಡಿ ಅಭಿಮಾನಿಗಳು ಭಾರಿ ಬೇಸರ ಹೊರಹಾಕುತ್ತಿದ್ದಾರೆ. ನಿಮ್ಮಿಂದ ಇದನ್ನು ಎಕ್ಸ್​ಪೆಕ್ಟ್​ ಮಾಡಲಿಲ್ಲ ಎನ್ನುತ್ತಿದ್ದಾರೆ..

ಅಷ್ಟಕ್ಕೂ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸೆಲೆಬ್ರಿಟಿಗಳು ಹೀಗೆಯೇ ಇರಬೇಕು, ಬೇರೆಯವರಿಗೆ ಮಾದರಿ ಆಗಬೇಕು ಎನ್ನುವ ಕನಸು ಇರುತ್ತದೆ. ಅದರಲ್ಲಿಮುಖ್ಯವಾಗಿ ಅಭಿಮಾನಿಗಳ ಗಮನ ಹೋಗುವುದು ಮದುವೆಯಾದ ಮೇಲೆ ಸೆಲೆಬ್ರಿಟಿಗಳು ಮಂಗಳಸೂತ್ರ ಧರಿಸುತ್ತಾರೋ ಇಲ್ಲವೋ ಎನ್ನುವುದು, ಇಲ್ಲಿಯವರೆಗೆ ಅನುಶ್ರೀ ಅವರು ಮಂಗಳಸೂತ್ರವನ್ನು ಧರಿಸಿ ಅಂದವಾಗಿ ಕಾಣಿಸುತ್ತಿದ್ದರು. ಎಲ್ಲರೂ ಇದೇ ಕಾರಣಕ್ಕೆ ಅವರನ್ನು ಕಮೆಂಟ್​​ಗಳಲ್ಲಿ ಹೊಗಳಿದ್ದೂ ಇದೆ.
ಮಂಗಳಸೂತ್ರ ಕಾಣೆ?
ಆದರೆ ಇದೀಗ ಮಹಾನಟಿಯ ಗ್ರ್ಯಾಂಡ್​ ಫಿನಾಲೆ ಸಂದರ್ಭದಲ್ಲಿ ಭಾರಿ ನೆಕ್​ಲೆಸ್​ ಹಾಕಿಕೊಂಡಿರುವ ಅನುಶ್ರೀ ಅವರ ಕೊರಳಿನಲ್ಲಿ ಮಾಂಗಲ್ಯಸರ ಇಲ್ಲ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕೊನೆಯ ಪಕ್ಷ ನಿಮ್ಮಿಂದ ಇಂಥದ್ದೊಂದು ನಿರೀಕ್ಷೆ ಮಾಡಲಿಲ್ಲ ಎಂದು ಹೇಳುತ್ತಿದ್ದಾರೆ

ಕಿರುತೆರೆಯಿಂದ ಬೆಳ್ಳಿತೆರೆಗೆ ಎಲ್ಲ ರೀತಿಯ ಅರ್ಹತೆ, ಪ್ರತಿಭೆ ಇರುವ ಯುವತಿಯರಿಗೆ ಅವಕಾಶ ಕೊಡಿಸುವುದು ಮಹಾನಟಿ ರಿಯಾಲಿಟಿ ಶೋನ ಮುಖ್ಯ ಉದ್ದೇಶ. ಅಷ್ಟೇ ಅಲ್ಲದೇ ಬೇರೆ ಬೇರೆ ರೌಂಡ್ಸ್‌ಗಳ ಮೂಲಕ ಈ ನಟಿಯರಿಗೆ ಸಿಲ್ವರ್ ಸ್ಕ್ರೀನ್‌ನಲ್ಲಿ ಹೇಗೆ ಕಾಣಿಸಬೇಕು, ಹೇಗೆ ನಟಿಸಬೇಕು ಎನ್ನುವುದಲ್ಲದೆ ಬೆಳ್ಳಿತೆರೆಯ ಇನ್ನಷ್ಟು ವಿಷಯಗಳ ಬಗ್ಗೆ ಟ್ರೈನ್ ಮಾಡಲಾಗಿದ್ದು ಇದು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ಸಹಾಯ ಆಗಲಿದೆ.