ಅನುಶ್ರೀ ಭಾವಿ ಸಂಗಾತಿ ರೋಷನ್ ಅವರ ಹಿನ್ನಲೆ ಏನು ಮತ್ತು ಅವರ ಅಸ್ತಿ ಎಷ್ಟು ಗೊತ್ತಾ ?

ಅನುಶ್ರೀ ಭಾವಿ ಸಂಗಾತಿ ರೋಷನ್ ಅವರ ಹಿನ್ನಲೆ ಏನು ಮತ್ತು ಅವರ ಅಸ್ತಿ ಎಷ್ಟು ಗೊತ್ತಾ ?

  ಎಸ್ ನಿನ್ನೆ ಅಷ್ಟೇ ಅನುಶ್ರೀ ಮದುವೆ ಆಗ್ತಿರೋ ಸುದ್ದಿ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು ಅವರ ಮದುವೆಗಾಗಿ ಕಾದು ಕುಳಿತಿದ್ದ ಅಭಿಮಾನಿಗಳು ಳ ಕೂಡ ಸಂಭ್ರಮಿಸಿದ್ರು ಆದರೀಗ ಅವರು ಮದುವೆ ಆಗ್ತಿರೋ ಹುಡುಗನ ಜೊತೆ ಇರೋ ಫೋಟೋ ಕೂಡ ಸಖತ್ ವೈರಲ್ ಆಗ್ತಿದೆ ಆಗಸ್ಟ್ 28ರಂದು ಇದೇ ಹುಡುಗನ ಜೊತೆ ಅನುಶ್ರೀ ಮದುವೆ ಆಗಲಿದ್ದಾರೆ ಅಂತ

ಹೇಳಲಾಗ್ತಿದೆ ಇಲ್ಲಿವರೆಗೂ ಮದುವೆ ಬೇಡ ಅಂತ ಕೂತಿದ್ದ ಅನುಶ್ರೀಗೆ ತನ್ನ ಡ್ರೀಮ್ ಬಾಯ್ ಸಿಕ್ಕಿದ್ರ ಅಂತ ಫ್ಯಾನ್ಸ್ ಕಮೆಂಟ್ ಹಾಕ್ತಿದ್ದಾರೆ ಅನುಶ್ರೀ ಬಯಸಿದಂತೆಯೇ ಹುಡುಗ ಸಿಕ್ಕಿದ್ನ ಅಂತ ಪ್ರಶ್ನೆ ಮಾಡ್ತಿದ್ದಾರೆ ಅಷ್ಟಕ್ಕೂ ಅನುಶ್ರೀಗೆ ಆ ಹುಡುಗ ಪರಿಚಯ ಆಗಿದ್ದು ಹೇಗೆ ಅಂತ ನೋಡಿದ್ರೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಗಂಧದ ಗುಡಿ ಡಾಕ್ಯುಮೆಂಟರಿಯ ಇವೆಂಟ್ನಲ್ಲಿ ಅನುಶ್ರೀ ನಿರೂಪಣೆ ಮಾಡಿದ್ರು ಅದೇ ಕಾರ್ಯಕ್ರಮಕ್ಕೆ ಕೊಡಗು ಮೂಲದ ರೋಷನ್ ಕೂಡ ಬಂದಿದ್ರಂತೆ ಆಗಲೇ ಅವರಿಬ್ಬರು ಪರಿಚಯವಾಗಿ ಪ್ರೇಮವಾಗಿತ್ತು ಅಂತ ಹೇಳಲಾಗ್ತಿದೆ 

ಅನುಶ್ರೀ ಮದುವೆ ಆಗುತ್ತಿರುವ ಉದ್ಯಮಿ ರೋಷನ್ 300 ಕೋಟಿ ಒಡೆಯ ಹಾಗೂ ಭಾರೀ ಶ್ರೀಮಂತ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ರೋಶನ್‌ ರಿಯಲ್ ಎಸ್ಟೇಟ್ ಉದ್ಯಮಿ ಎಂದು ಹೇಳಲಾಗುತ್ತಿದೆ. ಅನುಶ್ರೀ ಅವರ ತಮ್ಮ ಹೊಸ ಹೋಟೆಲ್ ಆರಂಭಿಸಿದ್ದಾಗ ಆ ಪೂಜೆಯಲ್ಲಿ ಅನುಶ್ರೀ ಹಾಗೂ ರೋಷನ್ ಭಾಗಿಯಾಗಿದ್ದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿವೆ. 

ಕಳೆದ ಎರಡು ವರ್ಷಗಳಿಂದ ಈ ಜೋಡಿ ಪ್ರೀತಿಯಲ್ಲಿದ್ರು ಅನ್ನೋ ಸುದ್ದಿ ಸಖತ್ ದೂಳೆಬ್ಬಿಸಿದೆ ನೆನ್ನೆಯಷ್ಟೇ ಅರೇಂಜ್ಡ್ ಮ್ಯಾರೇಜ್ ಅಂತ ಸುದ್ದಿಯಾಗಿತ್ತು ಆದರೆ ಈಗ ಲವ್ ಮ್ಯಾರೇಜ್ ಅನ್ನೋ ಮಾಹಿತಿ ಹೊರ ಬಿದ್ದಿದೆ ಅನುಶ್ರೀ ಅವರ ಹೋಟೆಲ್ ಓಪನಿಂಗ್ ಕಾರ್ಯಕ್ರಮದಲ್ಲಿ ರೋಷನ್ ಭಾಗವಹಿಸಿ ಅನುಶ್ರೀ ಪಕ್ಕದಲ್ಲಿ ನಿಂತು ಪೂಜೆ ಮಾಡ್ತಿರೋ ವಿಡಿಯೋ ಸಕತ್ತು ವೈರಲ್ ಆಗ್ತಿದೆ ಜೊತೆಗೆ ಅನುಶ್ರೀ ಅವರ ಮನೆ ಗೃಹ ಪ್ರವೇಶಕ್ಕೂ ರೋಷನ್ ಭೇಟಿ ಕೊಟ್ಟಿದ್ರು ಅಂತ ಹೇಳಲಾಗ್ತಿದೆ ಅನುಶ್ರೀ ಹಾಗೂ ರೋಷನ್ ಇಬ್ಬರ ಕುಟುಂಬದವರು ಅವರ

ಪ್ರೀತಿಯನ್ನ ಒಪ್ಪಿ ಮದುವೆ ಮಾಡಲು ಸಜ್ಜಾಗಿದ್ದಾರಂತೆ ಆಗಸ್ಟ್ 28 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಇವರ ಮದುವೆ ನಡೆಯಲಿದ್ದು ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರಿಗೂ ಆಮಂತ್ರಣ ನೀಡಲಿದ್ದಾರಂತೆ ಇನ್ನು ತಮ್ಮ ಮದುವೆ ಸುದ್ದಿ ಬಗ್ಗೆ ಅನುಶ್ರೀ ಅಧಿಕೃತವಾಗಿ ಹೇಳದೆ ಇದ್ರು ಅವರ ಆಪ್ತವಲಯದಿಂದ ಈ ಸುದ್ದಿ ಹೊರಬಿದ್ದಿದೆ ಅಂತ ಹೇಳಲಾಗ್ತಿದೆ ಅನುಶ್ರೀ ಅಭಿಮಾನಿಗಳಂತೂ ಅವರ ಮದುವೆಯನ್ನ ಕಣ್ುತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ