ರೋಷನ್ ಜೊತೆಗೆ ಲವ್ ಸೀಕ್ರೆಟ್ ಬಿಚ್ಚಿಟ್ಟ ಆಂಕರ್ ಅನುಶ್ರೀ!!

ಇದು ನಮ್ಮ ಜೀವನದ ಅತ್ಯಂತ ವಿಶೇಷ ಕ್ಷಣ. ಮೊದಲನೆಯದಾಗಿ ಮಾಧ್ಯಮ ಮಿತ್ರರಿಗೆ ನಮ್ಮ ಪ್ರೈವಸಿಗೆ ಗೌರವ ನೀಡಿ ಸಹಕರಿಸಿದ್ದಕ್ಕಾಗಿ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ಪ್ರೀತಿ, ಬೆಂಬಲ ಮತ್ತು ಸಹಕಾರಕ್ಕೆ “ಥ್ಯಾಂಕ್ ಯು ಸೋ ಸೋ ಮಚ್.” ಮದುವೆ ಬಹಳ ಸುಂದರವಾಗಿ, ಸರಳವಾಗಿ, ನಮ್ಮ ಆಸೆಯಂತೆ ಕಡಿಮೆ ಜನರ ಸಾನ್ನಿಧ್ಯದಲ್ಲಿ ನಡೆಯಿತು. ಇದು ಒಂದು ಸಿಂಪಲ್ ವೆಡ್ಡಿಂಗ್. ನನ್ನ ಪತಿ ರೋಷನ್ ರಾಮಮೂರ್ತಿ ಕುಶಾಲನಗರದವರು, ಬೆಂಗಳೂರಿನಲ್ಲಿ ಕೆಲಸ ಮಾಡ್ತಿದ್ದಾರೆ. ಅವರು ತುಂಬಾ ಸರಳ ವ್ಯಕ್ತಿ, ಈಗ ನನ್ನ ಜೀವನದ ಭಾಗವಾಗಿದ್ದಾರೆ.
ನಮ್ಮ ಲವ್ ಸ್ಟೋರಿ ಬಹಳ ಸಿಂಪಲ್. ನಾವು ಫ್ರೆಂಡ್ಸ್ ಆಗಿ ಕಾಫಿ ಕುಡಿದ್ವಿ, ಹೀಗೆ ಪರಿಚಯ ಪ್ರೀತಿಗೆ ತಿರುಗಿತು. ಯಾರೂ ನಂಬದಷ್ಟು ಸರಳವಾದ ಪ್ರೀತಿ. ನಾವು ಯಾರಿಗೂ ಹೇಳಿಲ್ಲ, ಏಕೆಂದರೆ ಇದು ನಮ್ಮಿಬ್ಬರ ನಡುವೆ ನಡೆದ ಒಂದು ನಿಜವಾದ ಸಂಬಂಧ. ನಾನು ಅವರಿಗೆ ಇಷ್ಟಪಟ್ಟೆ, ಅವರು ನನಗೆ ಇಷ್ಟಪಟ್ಟರು. ಈಗ ನಾವು ಗಂಡ ಹೆಂಡತಿ. ನಮ್ಮ ಸಂಬಂಧದಲ್ಲಿ ಸೆಲೆಬ್ರಿಟಿ ಎಂಬುದೇ ಇಲ್ಲ. ಅವರು ನನ್ನ ಅಡುಗೆ ಇಷ್ಟಪಡುವರು, ನಾನು ಅವರ ಸರಳತೆ, ಸಹಾಯ ಮನೋಭಾವನೆ ಇಷ್ಟಪಡುವೆ.
ಅವರು ಪುನೀತ್ ಸರ್ ಅವರ ದೊಡ್ಡ ಅಭಿಮಾನಿ. ನಾವಿಬ್ಬರೂ ಪುನೀತ್ ಪರ್ವದ ಮೂಲಕ ಪರಿಚಿತರಾದ್ವಿ. ಅನುಶ್ರೀ ಮೇಡಂ ಮೂಲಕ ಮೊದಲ ಪರಿಚಯ, ನಂತರ ಶ್ರೀದೇವಿ ಬೈರಪ್ಪ ನನ್ನ ಚೈಲ್ಡ್‌ಹುಡ್ ಫ್ರೆಂಡ್. ಅವರ ಮೂಲಕ ನಾನು ಅನು ಅವರನ್ನು ಭೇಟಿಯಾದೆ. ಅವರು ತುಂಬಾ ಡೌನ್ ಟು ಎರ್ಥ್, ಕೈಂಡ್, ಮತ್ತು ನಿಜವಾದ ವ್ಯಕ್ತಿ. ನಮ್ಮ ಸಂಬಂಧದಲ್ಲಿ ಸೆಲೆಬ್ರಿಟಿ ಎಂಬ ಅಂಶವಿಲ್ಲ. ನಾವು ಜೀವನವನ್ನು ಸರಳವಾಗಿ, ಚಿಕ್ಕ ಚಿಕ್ಕ ಸಂತೋಷಗಳೊಂದಿಗೆ ನೋಡೋದು ಇಷ್ಟಪಡುವೆವು.
ನಮ್ಮ ಮದುವೆ ಸಂಭ್ರಮದಲ್ಲಿ ಅಮ್ಮ ತುಂಬಾ ಖುಷಿಯಿಂದ ಡ್ಯಾನ್ಸ್ ಮಾಡಿದರು. ಎಲ್ಲರ ಪ್ರೀತಿಯಿಂದ, ಬೆಂಬಲದಿಂದ ಈ ಕ್ಷಣ ಮರೆಯಲಾಗದಂತಾಗಿದೆ. ನಮ್ಮ ಬ್ರದರ್ ವರುಣ್ ಅವರು ಎಲ್ಲ ವ್ಯವಸ್ಥೆಗಳನ್ನು ಅತ್ಯಂತ ಪ್ರೀತಿಯಿಂದ ಮಾಡಿದರು. ಮಂಟಪದಿಂದ ಹಿಡಿದು ಪ್ರತಿಯೊಂದು ಅಂಶದಲ್ಲಿ ಅಪ್ಪು ಸರ್ ಅವರ ಆಶೀರ್ವಾದ, ಅವರ ನೆನಪು ನಮ್ಮ ಜೊತೆಗಿತ್ತು. ಅವರು ನಮ್ಮ ನೆರಳಾಗಿ ನಿಂತಿದ್ದಾರೆ. ಅಪ್ಪು ಸರ್‌ಗಾಗಿ ನಾವು ಒಂದು ಒಳ್ಳೆಯ ಫೋಟೋ ನೋಡಿದ್ವಿ. ಎಲ್ಲರ ಪ್ರೀತಿಗೆ, ಬೆಂಬಲಕ್ಕೆ ಮತ್ತೆ ಒಂದು ಬಾರಿ ಹೃತ್ಪೂರ್ವಕ ಧನ್ಯವಾದಗಳು.