ಸುಳ್ಳು ಹೇಳಿ ಬಿಗ್ ಬಾಸ್‌ಗೆ ಮನೆಗೆ ಹೋದ ಹಂಸ ಗೆ ಶಾಕ್ ಕೊಟ್ಟ ಆರೂರು ಜಗದೀಶ್ ? ಮಾಡಿದ್ದೇನು ನೋಡಿ

ಹಂಸ ಪ್ರತಾಪ್ ಅವರು "ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ನಟಿಸುತ್ತಿದ್ದರು. ಅವರು ನಿರ್ದೇಶಕರಿಗೆ ತಿಳಿಸದೆ ಬಿಗ್ ಬಾಸ್ ಕನ್ನಡ ಶೋಗೆ ಹೋಗಿದ್ದಾರೆ.ಆದರೆ, ಬಿಗ್ ಬಾಸ್ ಶೋದಲ್ಲಿ ವಕೀಲ ಜಗದೀಶ್ ಅವರೊಂದಿಗೆ ನೃತ್ಯ ಮಾಡುವ ಮೂಲಕ ಅವರು ಪ್ರಸಿದ್ಧಿ ಪಡೆದರು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯರಾದರು.
ನಿರ್ದೇಶಕ ಆರೂರು ಜಗದೀಶ್ ಅವರು ಹಂಸ ಪ್ರತಾಪ್ ಅವರು ಬಿಗ್ ಬಾಸ್ ಶೋಗೆ ಹೋಗುವುದಾಗಿ ಸತ್ಯವನ್ನು ತಿಳಿಸಿಲ್ಲ ಮತ್ತು ಧಾರಾವಾಹಿಯನ್ನು ಏಕಾಏಕಿ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ರಾಜಿ ಪಾತ್ರದಲ್ಲಿ ನಟಿಸುತ್ತಿದ್ದ ಹಂಸ ನಮಗೆ ಹೇಳದೆ ಬಿಗ್ ಬಾಸ್‌ಗೆ ಹೋಗಿದ್ದಾರೆ. ಅವರು ನಮಗೆ ಹೇಳಲೇ ಇಲ್ಲ. ಅವರ ವಿರುದ್ಧ ಪ್ರೊಡ್ಯೂಸರ್ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್ ಅಸೋಸಿಯೇಶನ್‌ಗೆ ದೂರು ಕೊಟ್ಟಿದ್ದೇವೆ ಎಂದು ನಿರ್ದೇಶಕ ಆರೂರು ಜಗದೀಶ್ ತಿಳಿಸಿದ್ದಾರೆ
ಈ ಬಗ್ಗೆ ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ನನಗೆ ಹಂಸ ಅವರಿಂದ ಫೋನ್ ಬಂದಿತ್ತು. ನಾನು ನೆಲವತ್ತು ದಿನ ಸಿನಿಮಾ ಶೂಟಿಂಗ್‌ಗಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ ಅಂದರು. ಆಗ ನಮಗೆ ಪೋಷಕ ನಟ- ನಟಿಯರನ್ನು ವಿದೇಶಕ್ಕೆ ಕರೆದುಕೊಂಡು ಹೋಗಿ ಶೂಟಿಂಗ್ ಮಾಡುತ್ತಾರಾ..? ಅದು ನೆಲವತೈದು ದಿನ ಅಂತಾ ಅನಿಸಿತು. ಆದರೂ ಸರಿ ಮೇಡಂ ಹೋಗಿ ಬನ್ನಿ ನಾನು ತಂಡಕ್ಕೆ ಹೇಳುತ್ತೇನೆ ಅಂತಾ ಹೇಳಿದ್ದೆ ಎಂದರು.
ಬಿಗ್ ಬಾಸ್‌ಗೆ ಹೋಗುತ್ತಿದ್ದೇನೆ ಅಂತಾ ಹಂಸ ಹೇಳಲೇ ಇಲ್ಲ. ಅದಾದಮೇಲೆ ನಾವು ಅವರ ವಿರುದ್ಧ ಪ್ರೊಡ್ಯೂಸರ್ ಅಸೋಸಿಯೇಶನ್‌ಗೆ, ಕನ್ನಡ ಟೆಲಿವಿಷನ್ ಅಸೋಸಿಯೇಶನ್‌ಗೆ ದೂರು ಕೊಟ್ಟಿದ್ದೇವೆ. ಆದರೆ ಅವರು ಏನು ನಿರ್ಧಾರ ತೆಗೆದುಕೊಂಡರು ಗೊತ್ತಾಗಲಿಲ್ಲ. ಆದರೆ ಕಲಾವಿದರಿಗೆ ನೈತಿಕತೆ ಬೇಕು