ಖ್ಯಾತ ಕಿರುತೆರೆ ನಟಿ ಇಂದ ಸ್ನೇಹಿತೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ಗೆ ಪ್ರಚೋದನೆ !!

ಖ್ಯಾತ ಕಿರುತೆರೆ ನಟಿ ಇಂದ ಸ್ನೇಹಿತೆಯ ಖಾಸಗಿ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ಗೆ ಪ್ರಚೋದನೆ !!

ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಸ್ನೇಹಿತೆಯ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್‌ಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ. 61 ವರ್ಷದ ಪಾರ್ವತಿ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆಶಾ ಅವರು 2 ಕೋಟಿ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡಲು ಪಾರ್ವತಿಗೆ ಪ್ರಚೋದನೆ ನೀಡಿದ ಆರೋಪವೂ ಇದೆ.

ಆಶಾ ಜೋಯಿಸ್ ಅವರು ಸೀರಿಯಲ್ ನಟಿ ಎಂದು ಪಾರ್ವತಿ ಅವರಿಗೆ ಪರಿಚಯ ಮಾಡಿಕೊಂಡಿದ್ದರು. ಪಾರ್ವತಿ ಅವರು ತಾವು ಕೆಲಸ ಮಾಡುತ್ತಿದ್ದ ಕಂಪನಿಯ ಮಾಲೀಕರೊಂದಿಗೆ ಮದುವೆಯಾಗಿದ್ದರು. ಈ ಸಂಬಂಧ ಪತಿಗೆ ಬ್ಲ್ಯಾಕ್‌ಮೇಲ್ ಮಾಡಲು ಆಶಾ ಅವರು ಪಾರ್ವತಿಗೆ ಒತ್ತಡ ಹೇರಿದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ 2 ಕೋಟಿ ರೂಪಾಯಿಗೆ ಬ್ಲ್ಯಾಕ್‌ಮೇಲ್ ಮಾಡುವಂತೆ ಪ್ರೇರಣೆ ನೀಡಿದರೆಂದು ಆರೋಪಿಸಲಾಗಿದೆ.

ಪಾರ್ವತಿ ಅವರು ಈ ಒತ್ತಡಕ್ಕೆ ಒಪ್ಪದ ಕಾರಣ, ಆಶಾ ಅವರು ಖಾಸಗಿ ವಿಡಿಯೋಗಳು, ವಾಯ್ಸ್ ರೆಕಾರ್ಡ್‌ಗಳು ಹಾಗೂ ಫೋಟೋಗಳನ್ನು ಹರಿಬಿಡುವುದಾಗಿ ಬೆದರಿಕೆ ಹಾಕಿದರೆಂದು ದೂರಿನಲ್ಲಿ ಹೇಳಲಾಗಿದೆ. ಆದರೆ ಪಾರ್ವತಿ ಅವರು ಈ ಬೆದರಿಕೆಗೆ ಹೆದರಿ ಹೋಗದೆ, ಆ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಪರಿಚಯದ ಕೆಲವರಿಗೆ ಕಳಿಸಿದ್ದರೆಂದು ತಿಳಿದುಬಂದಿದೆ.

ಈ ಘಟನೆಗಳಿಂದಾಗಿ ಪಾರ್ವತಿ ಅವರ ಘನತೆಗೆ ಧಕ್ಕೆಯಾಗಿದ್ದು, ತಮ್ಮ ಖಾಸಗಿ ಡೇಟಾ ಕದ್ದಿದ್ದಾರೆ ಎಂಬ ಆರೋಪವನ್ನು ಅವರು ದೂರಿನಲ್ಲಿ ದಾಖಲಿಸಿದ್ದಾರೆ.