ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್; ಇವರೇ ಹೋಗಿದ್ದು ನೋಡಿ ?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಈ ಬಾರಿ ಹೊಸ ರೀತಿಯ ಟ್ವಿಸ್ಟ್‌ಗಳು ಕಂಡುಬರುತ್ತಿವೆ. ಸಾಮಾನ್ಯವಾಗಿ ಬಿಗ್ ಬಾಸ್ ಮನೆಯಲ್ಲಿ ವೋಟ್‌ಗಳನ್ನು ನಾಮಿನೇಷನ್‌ಗಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಈ ಬಾರಿ, ಮಿಡ್ ವೀಕ್ ಎಲಿಮಿನೇಷನ್‌ಗಾಗಿ ಮನೆಯವರ ವೋಟ್‌ಗಳನ್ನು ಪರಿಗಣಿಸಿ ಸ್ಪರ್ಧಿಗಳನ್ನು ಹೊರಹಾಕುವ ಪ್ರಕ್ರಿಯೆ ನಡೆಯುತ್ತಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.
ಈ ಸೀಸನ್‌ನಲ್ಲಿ ಮೊದಲ ಫಿನಾಲೆಗೂ ಮುನ್ನವೇ ಮಿಡ್ ವೀಕ್ ಎಲಿಮಿನೇಷನ್ ನಡೆದಿದೆ. ಈ ವೇಳೆ ಇಬ್ಬರು ಸ್ಪರ್ಧಿಗಳು ದೊಡ್ಮನೆಯಿಂದ ಹೊರ ಹೋಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಕ್ಟೋಬರ್ 18 ಮತ್ತು 19ರಂದು ನಡೆಯಲಿರುವ ಫಿನಾಲೆಯಲ್ಲಿ ಇನ್ನಷ್ಟು ಸ್ಪರ್ಧಿಗಳು ಎಲಿಮಿನೇಟ್ ಆಗುವ ಸಾಧ್ಯತೆ ಇದೆ. BBK 12ನಲ್ಲಿ ಸಾಕಷ್ಟು ಟ್ವಿಸ್ಟ್‌ಗಳು ಇರಲಿವೆ ಎಂಬುದನ್ನು ವಾಹನಿಯವರು ಮೊದಲೇ ಸೂಚಿಸಿದ್ದರು. ಈ ವಾರಾಂತ್ಯದಲ್ಲಿ ಮೊದಲ ಫಿನಾಲೆ ನಡೆಯಲಿದ್ದು, ಅದಕ್ಕೂ ಮೊದಲು ಬಿಗ್ ಬಾಸ್ ಮನೆಯಲ್ಲಿ ಬಿಗ್ ಟ್ವಿಸ್ಟ್‌ಗಳು ನಡೆಯುತ್ತಿವೆ.
ಸದ್ಯ ದೊಡ್ಮನೆಯಲ್ಲಿ 17 ಸ್ಪರ್ಧಿಗಳು ಇದ್ದು, ಇವರಲ್ಲಿ ಇಬ್ಬರು ವಾರದ ಮಧ್ಯದಲ್ಲಿ ಔಟ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಫಿನಾಲೆಗೂ ಮುನ್ನ ನಾಲ್ಕರಿಂದ ಐದು ಜನ ಎಲಿಮಿನೇಟ್ ಆಗುವ ಸಾಧ್ಯತೆ ಇದೆ. ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಸೋರಿಕೆಯಾದ ಮಾಹಿತಿಯ ಪ್ರಕಾರ, ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ ಸತೀಶ್ ಮತ್ತು ಮಂಜು ಭಾಷಿಣಿ ಔಟ್ ಆಗಿದ್ದಾರೆ ಎನ್ನಲಾಗಿದೆ. ಅಕ್ಟೋಬರ್ 16ರಂದು ಈ ಎಪಿಸೋಡ್ ಪ್ರಸಾರವಾಗುವ ಸಾಧ್ಯತೆ ಇದೆ. ಈಗಾಗಲೇ ಫಿನಾಲೆಗೆ ಕೆಲವು ಸ್ಪರ್ಧಿಗಳು ಆಯ್ಕೆಯಾಗಿದ್ದಾರೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಮತ್ತು ರಾಶಿಕಾ ಫಿನಾಲೆ ಸ್ಥಾನ ಪಡೆದಿದ್ದಾರೆ. ಇನ್ನೂ ಕೆಲವರು ಫಿನಾಲೆಗೆ ಆಯ್ಕೆಯಾಗಲಿದ್ದಾರೆ ಎಂಬ ನಿರೀಕ್ಷೆ ಇದೆ.
ಫಿನಾಲೆ ಅಕ್ಟೋಬರ್ 18 ಮತ್ತು 19ರಂದು ರಾತ್ರಿ 8 ರಿಂದ 11 ಗಂಟೆಯವರೆಗೆ ಪ್ರಸಾರವಾಗಲಿದೆ. ಈ ವೇಳೆ ನಾಲ್ಕೈದು ಎಲಿಮಿನೇಷನ್‌ಗಳು ನಡೆಯುವ ಸಾಧ್ಯತೆ ಇದೆ. ಫಿನಾಲೆಯ ನಂತರ ವೈಲ್ಡ್ ಕಾರ್ಡ್ ಎಂಟ್ರಿಯ ಮೂಲಕ ಕೆಲವು ಸ್ಪರ್ಧಿಗಳು ಮತ್ತೆ ದೊಡ್ಮನೆಗೆ ಪ್ರವೇಶ ಪಡೆಯುವ ಸಾಧ್ಯತೆ ಇದೆ. ಶ್ವೇತಾ ಪ್ರಸಾದ್