ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋದವರು ಇವರೇ ನೋಡಿ !!
ಬಿಗ್ ಬಾಸ್ ಕನ್ನಡ ಸೀಸನ್ 12 – 14ನೇ ವಾರದ ಎಲಿಮಿನೇಷನ್ ಕುತೂಹಲ
ಬಿಗ್ ಬಾಸ್ ಮನೆಯಲ್ಲಿ ಈ ವಾರವೂ ಸ್ಪಂದನ ಸೇಫ್ ಆಗ್ತಾರಾ ಎಂಬ ಪ್ರಶ್ನೆ ಎಲ್ಲರ ಬಾಯಲ್ಲಿದೆ. 14ನೇ ವಾರದಲ್ಲಿ ಬಿಗ್ ಟ್ವಿಸ್ಟ್ ನಡೆಯುತ್ತಿದ್ದು, ವೋಟಿಂಗ್ ಲಿಸ್ಟ್‌ನಲ್ಲಿ ಕೊನೆಯ ಸ್ಥಾನದಲ್ಲಿರುವ ಸ್ಪರ್ಧಿಯ ಜರ್ನಿ ಮುಗಿಯಲಿದೆ. ಈ ನಡುವೆ ನಟ ಗಿಲ್ಲಿ ಕ್ಯಾಪ್ಟನ್ ಆಗಿ ನೇರವಾಗಿ ಫಿನಾಲೆ ಎಂಟ್ರಿ ಪಡೆದಿದ್ದಾರೆ. ಆದರೆ ಅಶ್ವಿನಿ ಗೌಡ ಅವರಿಗೆ ಎಲಿಮಿನೇಷನ್ ಭೀತಿ ಕಾಡುತ್ತಿದೆ. ಡಬಲ್ ಎಲಿಮಿನೇಷನ್ ಸಾಧ್ಯತೆ ಇರುವುದರಿಂದ ರಾಶಿಕಾ ಶೆಟ್ಟಿ ಅಥವಾ ಅಶ್ವಿನಿ ಗೌಡ ಅವರ ಮೇಲೆ ಕತ್ತಿ ಬೀಳಬಹುದೆಂಬ ಚರ್ಚೆ ಜೋರಾಗಿದೆ.
ಕಳೆದ 13 ವಾರಗಳ ಆಟ ಈಗ ಮತ್ತೊಂದು ಎತ್ತರಕ್ಕೆ ತಲುಪಿದೆ. ಫಿನಾಲೆ ಹಂತಕ್ಕೆ ಕೆಲವೇ ಹೆಜ್ಜೆಗಳು ಬಾಕಿ ಇರುವಾಗ ಮನೆಯೊಳಗಿನ ಪ್ರತಿಯೊಬ್ಬ ಸ್ಪರ್ಧಿಯ ಮನಸ್ಸಿನಲ್ಲಿ ನಡುಕ ಶುರುವಾಗಿದೆ. ಕಳೆದ ವಾರ ನಡೆದ ಡಬಲ್ ಎಲಿಮಿನೇಷನ್‌ನಲ್ಲಿ ಸೂರಜ್ ಸಿಂಗ್ ಮತ್ತು ಮಾಳು ನಿಪನಾಳ್ ಹೊರಬಂದ ನಂತರ ಮನೆಯ ಚಿತ್ರಣವೇ ಬದಲಾಗಿದೆ. ಈ ವಾರ ಯಾರು ಸೇಫ್, ಯಾರು ಡೇಂಜರ್ ಜೋನ್‌ನಲ್ಲಿ ಎಂಬ ಕುತೂಹಲ ಹೆಚ್ಚಾಗಿದೆ.
ಈ ವಾರ ಬಿಗ್ ಬಾಸ್ ನೀಡಿರುವ ವಿಶೇಷ ಟ್ವಿಸ್ಟ್ ಮನೆಯವರ ನಿದ್ದೆ ಕದಡಿದೆ. ಕ್ಯಾಪ್ಟನ್ ಆಗುವವರಿಗೆ ನೇರವಾಗಿ ಫಿನಾಲೆ ಎಂಟ್ರಿ ಸಿಗಲಿದೆ. ಈ ಅವಕಾಶವನ್ನು ಗಿಲ್ಲಿ ನಟ ಬಳಸಿಕೊಂಡಿದ್ದು, ಅವರು ಸೇಫ್ ಆಗಿ ಫಿನಾಲೆ ಹಂತಕ್ಕೆ ಒಂದು ಹೆಜ್ಜೆ ಹತ್ತಿರವಾಗಿದ್ದಾರೆ. ಅವರ ಜೊತೆ ಕಾವ್ಯ ರಘು ಮತ್ತು ರಕ್ಷಿತ ಕೂಡ ನಾಮಿನೇಷನ್‌ನಿಂದ ಬಚಾವಾಗಿದ್ದಾರೆ. ಆದರೆ ನಾಮಿನೇಟ್ ಆಗಿರುವ ಐವರು – ಸ್ಪಂದನ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಷ್ – ಎಲಿಮಿನೇಷನ್ ಭೀತಿಯಲ್ಲಿದ್ದಾರೆ.
ಧ್ರುವಂತ್ ಮತ್ತು ಧನುಷ್ ತಮ್ಮದೇ ಆದ ವೋಟಿಂಗ್ ಬ್ಯಾಂಕ್ ಹೊಂದಿರುವ ಕಾರಣ ಸ್ವಲ್ಪ ಸೇಫ್ ಎನ್ನಬಹುದು. ರಾಶಿಕಾ ಶೆಟ್ಟಿ ಅವರ ನೇರ ಮಾತುಗಳು ಮತ್ತು ಅಶ್ವಿನಿ ಗೌಡ ಅವರ ಟಾಸ್ಕ್ ಪರ್ಫಾರ್ಮೆನ್ಸ್ ಅವರನ್ನು ಇಲ್ಲಿವರೆಗೆ ಉಳಿಸಿಕೊಂಡು ಬಂದಿದೆ. ಆದರೆ ಸ್ಪಂದನ ಸೋಮಣ್ಣ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಕಳೆದ ವಾರ ಅವರು ಕೊನೆಯ ಕ್ಷಣದಲ್ಲಿ ಸೇಫ್ ಆದರೂ, ಈ ವಾರ ಅವರ ಅದೃಷ್ಟ ಎಷ್ಟು ಕಾಲ ಸಾಥ್ ಕೊಡುತ್ತದೆ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ.
ಸದ್ಯದ ಟ್ರೆಂಡ್ಸ್ ಮತ್ತು ಅಭಿಪ್ರಾಯಗಳನ್ನು ಗಮನಿಸಿದರೆ, ಈ ವಾರ ಎಲಿಮಿನೇಷನ್‌ಗೆ ಸಿಲುಕುವ ಸಾಧ್ಯತೆ ಹೆಚ್ಚಿರುವವರು ಸ್ಪಂದನ ಸೋಮಣ್ಣ ಅಥವಾ ರಾಶಿಕಾ ಶೆಟ್ಟಿ. ವಿಶೇಷವಾಗಿ ಸ್ಪಂದನ ಅವರು ಪದೇ ಪದೇ ನಾಮಿನೇಟ್ ಆಗುತ್ತಿರುವುದು ಮತ್ತು ಅವರ ಆಟದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ಇರುವುದರಿಂದ ಅವರ ಜರ್ನಿ ಮುಗಿಯುವ ಲಕ್ಷಣಗಳು ಸ್ಪಷ್ಟವಾಗಿವೆ.
ಇತ್ತೀಚಿನ ಸುದ್ದಿ ಮೂಲಗಳಿಂದ ಧ್ರುವಂತ್ ಅವರು ಎಲಿಮಿನೇಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ
ಒಂದುವೇಳೆ ಬಿಗ್ ಬಾಸ್ ಸರ್ಪ್ರೈಸ್ ನೀಡದಿದ್ದರೆ, ಈ ವಾರ ಸ್ಪಂದನ ಸೋಮಣ್ಣ ಮನೆಯಿಂದ ಹೊರಬರುವ ಸ್ಪರ್ಧಿಯಾಗುವ ಸಾಧ್ಯತೆ ಹೆಚ್ಚು. ಆದರೆ ಅಶ್ವಿನಿ ಗೌಡ ಅಥವಾ ಧ್ರುವಂತ್ ಅವರಂತಹ ಬಲಿಷ್ಠ ಸ್ಪರ್ಧಿಗಳು ಹೊರಬಂದರೆ, ಅದು ಈ ಸೀಸನ್‌ನ ಅತಿ ದೊಡ್ಡ ಶಾಕ್ ಆಗುವುದು ಖಚಿತ.
???? ನಿಮ್ಮ ಅಭಿಪ್ರಾಯ ಏನು? ಈ ವಾರ ಯಾರಿಗೆ ಎಲಿಮಿನೇಷನ್ ಕತ್ತಿ ಬೀಳಬೇಕು ಎಂದು ನೀವು ಭಾವಿಸುತ್ತೀರಿ?




