ಬಿಗ್ ಬಾಸ್ ಶಾಕಿಂಗ್ ಮಿಡ್ ವೀಕ್ ಎಲಿಮಿನೇಷನ್ !! ವಿನ್ನರ್ ಅನ್ಕೊಂಡಿದ್ದ ಸ್ಪರ್ಧಿಯೇ ರಾತ್ರೋ ರಾತ್ರಿ ಔಟ್?

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ. ಯಾರೂ ಊಹಿಸಿರದ ಸ್ಪರ್ಧಿಗೆ ಅತಿ ಕಡಿಮೆ ವೋಟ್ ಬಂದಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಸಂಕ್ರಾಂತಿ ಹಬ್ಬದ ಹಿನ್ನೆಲೆ ಬಿಗ್ ಬಾಸ್ ಮನೆಗೆ ಇಂದಿನ ಎಪಿಸೋಡ್‌ನಲ್ಲಿ ನಟಿ ತಾರಾ ಮನೆಯಲ್ಲಿ ಸಂಕ್ರಾಂತಿ ಸಂಭ್ರಮಕ್ಕಾಗಿ ಬಂದಿದ್ದಾರೆ. ಆದರೂ ಮಿಡ್‌ವೀಕ್ ಎಲಿಮಿನೇಷನ್ ನಡೆಯೋದು ಕನ್ಫರ್ಮ್ ಆಗಿದೆ. ಧನರಾಜ್ ಆಚಾರ್ ಟಾಸ್ಕ್ ಆಡುವ ಮೂಲಕ ಅತಿ ಹೆಚ್ಚು ಅಂಕಗಳನ್ನು ಗಳಿಸಿ ಮಿಡ್‌ವೀಕ್ ಎಲಿಮಿನೇಷನ್‌ನಿಂದ ಪಾರಾಗಿದ್ದಾರೆ.
ಬಿಗ್ ಬಾಸ್ ಎಲಿಮಿನೇಷನ್ ಬಗ್ಗೆ ಸೋಷಿಯಲ್ ಮೀಡಿಯಾ ಸರ್ವೇ ಅನುಸಾರ ರಜತ್ ಅತಿ ಕಡಿಮೆ ವೋಟ್ ಪಡೆದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಿಗ್ ಬಾಸ್ ಕನ್ನಡ ಸೀಸನ್ 11 ರ ಮನೆ ಪ್ರವೇಶಿಸಿದ ರಜತ್ ಅವರ ಆಟದ ವೈಖರಿ ಅನೇಕರಿಗೆ ಇಷ್ಟವಾಗಿತ್ತು.
ಸರ್ವೇಯಲ್ಲಿ ರಜತ್ 1100, ಭವ್ಯಾ 3400, ಮೋಕ್ಷಿತಾ 3000, ಉಗ್ರಂ ಮಂಜು 3500, ಗೌತಮಿ 3800, ತ್ರಿವಿಕ್ರಮ್ 3300 ಮತಗಳನ್ನು ಗಳಿಸಿದ್ದಾರೆ. ಈ ವಾರದ ಟಾಸ್ಕ್‌ನಲ್ಲೂ ರಜತ್ ಅವರಿಗೆ ಹೆಚ್ಚು ಅಂಕ ಗಳಿಸಲು ಸಾಧ್ಯವಾಗಿಲ್ಲ. ರಜತ್ ಹೊರಬರಬಹುದು ಎಂಬುದು ನೆಟ್ಟಿಗರ ಅಭಿಪ್ರಾಯ.
ಬಿಗ್ ಬಾಸ್ ಮಿಡ್ ವೀಕ್ ಎಲಿಮಿನೇಷನ್ ನಲ್ಲಿ ಯಾರು ಹೊರ ಹೋಗ್ತಾರೆ ಎಂಬ ಸ್ಪಷ್ಟ ಚಿತ್ರಣ ಗುರುವಾರದ ಎಪಿಸೋಡ್‌ನಲ್ಲಿ ಸಿಗಲಿದೆ.