ಶಾಕಿಂಗ್ ನ್ಯೂಸ್ : ಶೂಟಿಂಗ್ ವೇಳೆ ಅಮೀರ್ ಖಾನ್ ಗೆ ಗಾಯ

Updated: Monday, October 19, 2020, 19:21 [IST]

ಶಾಕಿಂಗ್ ನ್ಯೂಸ್ : ಶೂಟಿಂಗ್ ವೇಳೆ ಅಮೀರ್ ಖಾನ್ ಗೆ ಗಾಯ

 

Advertisement

ನಟ ಅಮೀರ್ ಖಾನ್ಗೆ ಚಿತ್ರೀಕರಣದ ವೇಳೆ ಪಕ್ಕೆಲುಬಿಗೆ ಗಾಯವಾಗಿದೆ. ಲಾಲ್ ಸಿಂಗ್ ಚಡ್ಡಾದ ಸಾಹಸ ದೃಶ್ಯದ ಚಿತ್ರೀಕರಣ ಮಾಡುವಾಗ ಅಮೀರ್ ಖಾನ್ ಗಾಯಗೊಂಡರು. ಆದರೂ ಅವರು ಆ ನೋವಿನಲ್ಲೇ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ನೋವು ನಿವಾರಕ ಮಾತ್ರೆ ನುಂಗಿ ಅವರು ಚಿತ್ರತಂಡಕ್ಕೆ ಸಹಕರಿಸಿದರು.

 

Advertisement

ಲಾಲ್ ಸಿಂಗ್ ಚಡ್ಡಾದ ಬಹುತೇಕ ಚಿತ್ರೀಕರಣ ಮುಗಿಯುತ್ತಿದೆ. ಕೊನೆಯ ಹಂತದ ಸಾಹಸ ದೃಶ್ಯ ಮುಗಿಸುವುದಿತ್ತು. ಅದಕ್ಕಾಗಿ ಸಾಕಷ್ಟು ತಯಾರಿ ಮಾಡಲಾಗಿತ್ತು. ಒಂದು ವೇಳೆ ಅಮೀರ್ ಖಾನ್ ಶೂಟಿಂಗ್ ನಿಲ್ಲಿಸಿದರೆ ಕೋಟ್ಯಾಂತರ ರೂಪಾಯಿ ನಷ್ಟವಾಗುತ್ತಿತ್ತು. ಕಾರ್ಮಿಕರಿಗೂ ಕೂಡ ಆದಾಯ ಇರುತ್ತಿರಲಿಲ್ಲ. ಇದನ್ನೆಲ್ಲ ಗಮನಕ್ಕೆ ಇಟ್ಟುಕೊಂಡು ಅವರು ಶೂಟಿಂಗ್ ನಲ್ಲಿ ಭಾಗವಹಿಸಿದರು. ಇದಕ್ಕೆ ಅಲ್ಲವೇ ಅವರನ್ನು ಮಿಸ್ಟರ್ ಪರ್ಫೆಕ್ಟ್ ಅನ್ನುವುದು.

 

Advertisement

ಲಾಲ್ ಸಿಂಗ್ ಚಡ್ಡಾ ಹಾಲಿವುಡ್ ಚಲನಚಿತ್ರ ಫಾರೆಸ್ಟ್ ಗಂಪ್ ರೀಮೇಕ್. ಚಿತ್ರದ ಬಹುತೇಕ ಚಿತ್ರೀಕರಣ ದೆಹಲಿಯಲ್ಲಿ ನಡೆದಿದೆ. ಲಾಕ್ಡೌನ್ ನಂತರ ಚಿತ್ರವನ್ನು ಬಹಳ ಜಾಗರೂಕತೆಯಿಂದ ಶೂಟಿಂಗ್ ನಡೆಸಲಾಯಿತು. ಮುಂದಿನ ಜನವರಿಯಲ್ಲಿ ಚಿತ್ರದ ಬಿಡುಗಡೆ ಹಮ್ಮಿಕೊಳ್ಳಲಾಗಿತ್ತು. ಚಿತ್ರ ಮಂದಿರದಲ್ಲಿ ಜನರ ನೀರಸ ಆಗಮನದಿಂದ ಚಿತ್ರದ ಬಿಡುಗಡೆ ಮುಂದಕ್ಕೆ ಹಾಕಲಾಗಿದೆ. ಕರೋನ ಪೂರ್ತಿ ಕಡಿಮೆ ಆದಮೇಲೇಯೇ ಬಿಡುಗಡೆ ಮಾಡಲಾಗುತ್ತದೆ.