ಭಾರತದ ಈ ಹತ್ತು ದೇವಾಲಯದ ರಹಸ್ಯಗಳು ಹೇಗೆಲ್ಲಾ ಇವೆ ಗೊತ್ತಾ..? ಸೂಕ್ಷ್ಮವಾಗಿ ವಿಡಿಯೋ ಗಮನಿಸಿ

ಭಾರತದ ಈ ಹತ್ತು ದೇವಾಲಯದ ರಹಸ್ಯಗಳು ಹೇಗೆಲ್ಲಾ ಇವೆ ಗೊತ್ತಾ..? ಸೂಕ್ಷ್ಮವಾಗಿ ವಿಡಿಯೋ ಗಮನಿಸಿ

ನಮ್ಮ ಭಾರತದಲ್ಲಿ ಸಾಕಷ್ಟು ದೇವಾಲಯಗಳಿವೆ.. ದೇವಾಲಯಕ್ಕೆ ಅದರದ್ದೇ ಆದ ವೈಶಿಷ್ಟ್ಯತೆ, ವಿಶಿಷ್ಟತೆ ಮತ್ತು ಭಯ ಭಕ್ತಿ ಎಲ್ಲವೂ ಕೂಡ ಇದೆ. ಭಾರತದ ಈ ಹತ್ತು ದೇವಾಲಯಗಳಲ್ಲಿ ತುಂಬಾನೆ ವಿಶಿಷ್ಟತೆ ತುಂಬಿದೆ ಸ್ನೇಹಿತರೆ. ನಮ್ಮ ಭಾರತದ ಈ 10 ದೇವಾಲಯಗಳು ತುಂಬಾನೇ ರಹಸ್ಯವನ್ನು ಕೂಡ ಒಳಗೊಂಡಿವೆಯಂತೆ. ಆ ರಹಸ್ಯ ಅಸಲಿಗೆ ಏನು, ಈ ದೇವಾಲಯಗಳು ನಮ್ಮ ಭಾರತದಲ್ಲಿ ಎಲ್ಲಿ ಇವೆ, ಅದರ ಹಿಂದಿನ ಕಥೆ ಏನು? ಈ ದೇವಾಲಯಗಳಲ್ಲಿ ಯಾವ ರೀತಿ ರಹಸ್ಯ ಅಡಗಿದೆ ಎನ್ನುವ ಮಾಹಿತಿ ತಿಳಿದುಕೊಳ್ಳಲು ನೀವು ತುಂಬಾ ಕಾತುರರಾಗಿದ್ದೀರಾ ಹಾಗಾದರೆ ಈ ಲೇಖನವನ್ನು ಪೂರ್ತಿ ಓದಿ..

ಮೊದಲಿಗೆ ನಚಿಯಾರ್ ಕೊಲ್ಹಿ. ಈ ದೇವಸ್ತಾನ ಇರೋದು ತಮಿಳುನಾಡಿನ ಕುಂಬ ಕೊನಮ್ ನಲ್ಲಿ. ಇದು ಲಕ್ಷ್ಮಿ ದೇವಸ್ತಾನ ಆಗಿದೆ. ಆದ್ರೆ ವಾಸ್ತವವಾಗಿ ಇದೆ ಗುಡಿಯಲ್ಲಿ ವಿಷ್ಣು ಮೂರ್ತಿ ಸಹ ಇದೆ. ಅದು ಗರುಡನ ಜೊತೆಗೆ. ಈ ದೇವಸ್ಥಾನದಲ್ಲಿ ವರ್ಷಕ್ಕೆ ಒಮ್ಮೆ ಇದೆ ವಿಷ್ಣುಮೂರ್ತಿಯನ್ನ ಪೂಜೆ ಮಾಡಲಾಗುತ್ತದೆ. ಆಗ ವಾಹನ ಗರುಡನ ಮೂರ್ತಿ ಗರ್ಭಗುಡಿಯಿಂದ ಹೊರಗೆ ತರಲಾಗುತ್ತದೆ. ವಿಶೇಷ ಪೂಜೆ ಮಾಡಿಸಲಾಗುತ್ತದೆ. ಆ ವೇಳೆ ಗರ್ಭಗುಡಿಯಲ್ಲಿ ಇರುವಾಗ ಈ ವಿಷ್ಣುವಿನ ಗರುಡ ವಾಹನದ ಮೂರ್ತಿ ತುಂಬಾನೇ ಭಾರ ಕಡಿಮೆ ಇರುತ್ತದೆ..ಒಂದು ಕ್ಷಣ ಈ ಗರುಡ ವಾಹನ ಹೊರಗೆ ಬರುತ್ತಿದ್ದಂತೆಯೇ ಸುಮಾರು 70ರಿಂದ 80 ಜನ ಭಾರ ಹೋರುವಷ್ಟಾಗಿ ಬದಲಾಗುತ್ತದಂತೆ. ಇಂದಿಗೂ ಕೂಡ ವಿಜ್ಞಾನಿಗಳು ಈ ರಹಸ್ಯ ಹೇಗೆ, ಗರ್ಭಗುಡಿಯಲ್ಲಿ ಮತ್ತು ಹೊರಗೆ ಹೇಗೆ ಎಂಬುದಾಗಿ ಕಂಡು ಹಿಡಿಯಲು ಆಗಿಲ್ಲ ಎನ್ನಲಾಗಿದೆ. ಇದೇ ಈ ದೇವಸ್ಥಾನದ ಶಕ್ತಿ ಹಾಗೂ ವಿಶಿಷ್ಟತೆ ಎಂದು ಭಕ್ತರು ನಂಬಿದ್ದಾರೆ..

ಎರಡನೆಯದು ಕರ್ನಿ ಮಾತಾ ದೇವಸ್ಥಾನ..ಈ ದೇವಸ್ಥಾನದಲ್ಲಿ ಸುಮಾರು ಲಕ್ಷಕ್ಕೂ ಅಧಿಕ ಇಲಿಗಳು ಅಲ್ಲಿ ಓಡಾಡುತ್ತಿರುತ್ತವೆ. ದುರ್ಗಾ ಮಾತೆಯ ದೈವ ಇವೆ ಇಲಿಗಳು ಎಂದು ಅಲ್ಲಿ ಕರೆಯಲಾಗುತ್ತದೆ. ಇಲ್ಲಿಗೆ ಭಕ್ತರು ಬಂದು ತಮ್ಮ ಬೇಡಿಕೆಯನ್ನು ಭಕ್ತಿಯಿಂದ ಬೇಡಿಕೊಂಡು, ದೇವಿಗೆ ಪೂಜೆ ಸಲ್ಲಿಸಿ ಪ್ರಸಾದವ ಇಡುತ್ತಾರೆ. ಆಗ ಅಲ್ಲಿಯ ಎಲ್ಲಾ ಇಲಿಗಳು ಬಂದು ಆ ಪ್ರಸಾದ ಸೇವಿಸುತ್ತಾವೆ. ನಂತರ ಮಿಕ್ಕಿದ ಪ್ರಸಾದವನ್ನು ಅಲ್ಲಿಯ ಭಕ್ತರು ಸೇವಿಸಬೇಕು. ಯಾವುದಾದರೂ ಇಲಿ ಈ ದೇವಸ್ಥಾನದಲ್ಲಿ ಕಾಲಿಗೆ ಅಡ್ಡ ಬಂದರೆ ಅದು ಅಪ ಶಕುನ ಎಂದು ನಂಬಲಾಗಿದೆ. ಈ ದೇವಸ್ಥಾನದ ವಿಶೇಷತೆ ಏನಂದ್ರೆ, ಇಷ್ಟು ಇಲಿಗಳು ದೇವಸ್ಥಾನದಲ್ಲಿ ಇದ್ರು ಯಾವುದೇ ರೋಗಗಳು ಅಲ್ಲಿ ಬಂದಿಲ್ಲ. ಜೊತೆಗೆ ಯಾವ ಕೆಟ್ಟ ವಾಸನೆ ಕೂಡ ಅಲ್ಲಿ ಬರುವುದಿಲ್ಲ ಎನ್ನುವುದು ವಾಡಿಕೆ..     

ಮೂರನೆಯದು ಕೊನಾರ್ಕ್ ಟೆಂಪಲ್, ಇದು 12 ಶತಮಾನದಲ್ಲಿ ನಿರ್ಮಿಸಲಾಗಿದೆ. ನರಸಿಂಹ ದೇವನು ಇದನ್ನ ನಿರ್ಮಿಸಿದ್ದಾನೆ. ಈ ದೇವಸ್ಥಾನದ ವಿಶೇಷತೆ ಏನು ಅಂದ್ರೆ, ಈ ದೇವಸ್ಥಾನದ ದ್ವಾರದ ಮೇಲೆಯೇ ಸೂರ್ಯನ ಕಿರಣ ಮೊದಲು ಬೀಳುವಂತದ್ದು. ಅಷ್ಟು ಅತ್ಯದ್ಭುತವಾಗಿ ಈ ದೇವಸ್ಥಾನವನ್ನು ನಿರ್ಮಾಣ ಮಾಡಿದ್ದಾರೆ. ಇದೇ ದೇವಸ್ಥಾನದಲ್ಲಿ ಒಂದು ರಥವಿದೆ. ಅದು 24 ಚಕ್ರಗಳನ್ನು ಒಳಗೊಂಡಿದ್ದು, ಏಳು ಶಕ್ತಿ ಶಾಲಿ ಕುದುರೆಗಳು ಈ ರಥವನ್ನು ಎಳೆಯುತ್ತಾವೆ. ಇದರ ಅರ್ಥ ಏನು ಅಂದ್ರೆ, ವಾರದಾಲ್ಲಿಯ ಏಳು ದಿನಗಳ ಸೂಚಿಸುವ ಆ ಕುದುರೆಗಳು..ಹಾಗೂ ಜೊತೆಗೆ 24 ಚಕ್ರ ಆ ರಥದಲ್ಲಿ ಇದ್ದು, ಅದು 24 ಗಂಟೆಯ ಸೂಚಿಸುತ್ತದೆ. ಆಗಿನ ಕಾಲದಲ್ಲೇ ನಮ್ಮವರೇ ಸಮಯ ಕಂಡು ಹಿಡಿದ ಇತಿಹಾಸ ಸಹ ಈ ದೇವಸ್ಥಾನದಲ್ಲೆ ಇದೆ. ಆಗಿನ ಕಾಲದಲ್ಲಿಯೆ ಈ ಸಮಯವನ್ನು ಕಂಡುಹಿಡಿದಿದ್ದಾರೆ ಎಂದು ವಾಡಿಕೆ..ಜೊತೆಗೆ ನಂಬಲಾಗಿದೆ ಕೂಡ.. ಇದನ್ನು ಮೊಘಲರು ನಾಶಪಡಿಸಿದ್ದು ದುರವಂತೆ ಸೇರಿ ಎಂದು ಹೇಳಬಹುದು...

ನಾಲ್ಕನೆಯದು ಸೋಮನಾಥ ದೇವಾಲಯ, ಇಲ್ಲಿ ಶಿವಲಿಂಗ ಗಾಳಿಯಲ್ಲಿ ತೇಲಾಡುತ್ತದಂತೆ..ಜೊತೆಗೆ ಶ್ರೀ ಕೃಷ್ಣನ ವಿಚಾರ ಇಲ್ಲಿ ನಿಮಗೆ ಇನ್ನಷ್ಟು ಗೊತ್ತಾಗುತ್ತದೆ ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. ಇದು ಇರುವುದು ಗುಜರಾತ್ ನಲ್ಲಿ. ಐದನೆಯ ದೇವಸ್ತಾನ ಯಾಗಂತಿ ಉಮಾ ಪರಮೇಶ್ವರ್. ಇದು ಕರ್ನೂಲ್ ನಲ್ಲಿ ಇದೆ. 15 ನೆ ಶತಮಾನದಲ್ಲಿ ಹರಿಹರ ಅವರು ಈ ದೇವಸ್ತಾನ ನಿರ್ಮಿಸಿದ್ದಾರೆ. ಇದರ ವೈಶಿಷ್ಟ್ಯತೆ ಏನು ಹಾಗೆ ಇನ್ನು ಮಿಕ್ಕಿದ ಆ ಐದು ದೇವಸ್ಥಾನ ಯಾವುವು, ಹಾಗೆ ರಹಸ್ಯ ಮತ್ತು ವಿಶೇಷತೆ ಏನೆಲ್ಲಾ ಇದೆ ಎಂದು ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ.. ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ..ಒಮ್ಮೆ ನೋಡಿ ಮತ್ತು ಈ ಮಾಹಿತಿ ಉಪಯುಕ್ತ ಆಯ್ತು ಎಂದೆನಿಸಿದರೆ ಒಂದು ಮೆಚ್ಚುಗೆ ನೀಡಿ, ತಪ್ಪದೇ ವಿಡಿಯೋ ಶೇರ್ ಮಾಡಿ, ಮಾಹಿತಿಯನ್ನು ಕೂಡ ತಪ್ಪದೆ ಶೇರ್ ಮಾಡಿ, ಧನ್ಯವಾದಗಳು....