ಮುಯ್ಯಿಗೆ ಮುಯ್ಯಿ ಎಂಬಂತೆ ಚೈತ್ರಾ ವಾಸುದೇವನ್ ಮಾಜಿ ಪತಿ ಸತ್ಯ ನಾಯ್ಡು 2 ನೇ ಮದುವೆ : ಯಾರ ಜೊತೆ ನೋಡಿ ?

ಮಾರ್ಚ್ 2 ರಂದು ಭಾನುವಾರ ಚೈತ್ರಾ ವಾಸುದೇವನ್ ಎರಡನೇ ಬಾರಿಗೆ ಹಸೆಮಣೆ ಏರಿದರು. ಚೈತ್ರಾ ವಾಸುದೇವನ್ ಅವರ ಎರಡನೇ ವಿವಾಹ ಮಹೋತ್ಸವ ಬೆಂಗಳೂರಿನ ಚಾಮರ ವಜ್ರದಲ್ಲಿ ಅದ್ಧೂರಿಯಾಗಿ ನೆರವೇರಿತು. ಉದ್ಯಮಿ ಜಗದೀಪ್ ಎಂಬುವರನ್ನ ಚೈತ್ರಾ ವಾಸುದೇವನ್ ಮದುವೆಯಾದರು.ಅತ್ತ ಚೈತ್ರಾ ವಾಸುದೇವನ್ ಅವರು ಎರಡನೇ ಮದುವೆಯಾದರೆ, ಇತ್ತ ಮಾಜಿ ಪತಿ ಸತ್ಯ ನಾಯ್ಡು ಸಹ ಎರಡನೇ ವಿವಾಹವಾಗಿದ್ದಾರೆ. ಅಚ್ಚರಿ ಅಂದ್ರೆ… ಒಂದೇ ಜಾಗದಲ್ಲಿ, ಒಂದೇ ದಿನದ ಅಂತರದಲ್ಲಿ ಚೈತ್ರಾ ವಾಸುದೇವನ್ ಮತ್ತು ಮಾಜಿ ಪತಿ ಸತ್ಯ ನಾಯ್ಡು ಅವರುಗಳ 2ನೇ ಮದುವೆ ನೆರವೇರಿದೆ.
ಚೈತ್ರಾ ವಾಸುದೇವನ್ ಎರಡನೇ ಮದುವೆ ನೆರವೇರಿದ ಮಾರನೇ ದಿನವೇ ಮಾಜಿ ಪತಿ ಸತ್ಯ ನಾಯ್ಡು ಅವರ 2ನೇ ವಿವಾಹ ಸಹ ಜರುಗಿದೆ. ಅದೂ ಬೆಂಗಳೂರಿನ ಚಾಮರ ವಜ್ರದಲ್ಲೇ.! ವಸುಂಧರಾ ರೆಡ್ಡಿ ಎಂಬುವರನ್ನ ಸತ್ಯ ನಾಯ್ಡು ವಿವಾಹವಾಗಿದ್ದಾರೆ. ವಸುಂಧರಾ ರೆಡ್ಡಿ - ಸತ್ಯ ನಾಯ್ಡು ವಿವಾಹ ಮಹೋತ್ಸವ ಸಿಕ್ಕಾಪಟ್ಟೆ ಅದ್ಧೂರಿಯಾಗಿ ನಡೆದಿದೆ. ರಾಜಕೀಯ ಮುಖಂಡರು ಹಾಗೂ ಕನ್ನಡ ತಾರೆಯರು ವಸುಂಧರಾ ರೆಡ್ಡಿ - ಸತ್ಯ ನಾಯ್ಡು ಮದುವೆಗೆ ಆಗಮಿಸಿ ಶುಭ ಹಾರೈಸಿದ್ದಾರೆ.
ಸತ್ಯ ನಾಯ್ಡು ಉದ್ಯಮಿ. ಎಸ್‌ಎನ್ ಕ್ಯಾಪಿಟಲ್ ಎಲ್‌ಎಲ್‌ಸಿಗೆ ಸತ್ಯ ನಾಯ್ಡು ಡೈರೆಕ್ಟರ್ ಆಗಿದ್ದಾರೆ. ಈವೆಂಟ್ಸ್ ಫ್ಯಾಕ್ಟರಿ ಸಂಸ್ಥೆಯ ಫೌಂಡರ್ ಮತ್ತು ಡೈರೆಕ್ಟರ್ ಸಹ ಇವರೇ. ನಟ ಯಶ್ ಹಾಗೂ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರಿಗೆ ಸತ್ಯ ನಾಯ್ಡು ಅತ್ಯಾಪ್ತರು.
( video credit : Filmy news kannada )