ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ- ಸುಷ್ಮಿತಾ! ಆ ಸಿಹಿ ಸುದ್ದಿ ಏನು ಗೊತ್ತಾ?

ಫ್ಯಾನ್ಸ್ಗೆ ಗುಡ್ ನ್ಯೂಸ್ ಕೊಟ್ಟ ಚಂದನ್ ಶೆಟ್ಟಿ- ಸುಷ್ಮಿತಾ!  ಆ ಸಿಹಿ ಸುದ್ದಿ ಏನು ಗೊತ್ತಾ?

ಚಂದನ್ ಶೆಟ್ಟಿ ಕರ್ನಾಟಕದ ಪ್ರಸಿದ್ಧ ಗಾಯಕ, ಹಾಡು ಬರಹಗಾರ ಮತ್ತು ಸಂಗೀತ ನಿರ್ದೇಶಕರಾಗಿದ್ದಾರೆ. ಅವರು ವಿಶೇಷವಾಗಿ ಕನ್ನಡ ರಾಪರ್ ಎಂದು ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ನಿರ್ಮಿಸಿಕೊಂಡಿದ್ದಾರೆ. ಚಂದನ್ ಶೆಟ್ಟಿ ತಮ್ಮ ರ‍್ಯಾಪ್ ಗೀತೆಗಳಿಂದ ಬಹಳ ಪ್ರಸಿದ್ಧರಾಗಿದ್ದಾರೆ, ಅವರ ಅನೇಕ ಗೀತೆಗಳು ಯುವಕರ ಹೃದಯ ಗೆದ್ದಿವೆ. ಮೊದಲಿಗೆ ಚಂದನ್ ತಮ್ಮ ವೃತ್ತಿಯನ್ನು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹಾಯಕನಾಗಿ ಆರಂಭಿಸಿದರು. "ಒಮ್ ಶಾಂತಿ ಓಂ" ಎಂಬ ಸಿನಿಮಾದಲ್ಲಿ ತಮ್ಮ ಮೊದಲ ಹಾಡುಗಳನ್ನು ಹಾಡಿದ ನಂತರ, ಚಂದನ್ ಶೆಟ್ಟಿ ಹೆಸರು ಮಾಡಿದರು. ಅದಾದ ಬಳಿಕ ತಮ್ಮದೇ ಮ್ಯೂಸಿಕ್ ಕಂಪೋಸ್ ಮಾಡಲು ಶುರು ಮಾಡಿದರು.

ಅದರಲ್ಲೂ ಇವರ ರಾಪ್ ಸಾಂಗ್ ನಮ್ಮ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದ ಹೆಸ್ರು ಮಾಡಿದೆ ಎಂದು ಹೇಳಬಹುದು. "3 ಪೆಗ್", "ಹಳ್ಳಿಗೋಳ","ಗಾಂಧಿ ಕ್ಲಾಸ್","ಪಾರ್ಟಿ ಫ್ರೀಕ್" ಹಾಗೂ ಚಾಕಲೇಟ್ ಗರ್ಲ್ ಹಾಡುಗಳು ಈಗಲೂ ಎಲ್ಲರ ಬಾಯಲ್ಲೂ ಗುಣುಗುತ್ತಿರುತ್ತದೆ ಎಂದರೆ ತಪ್ಪಾಗಲಾರದು.ಚಂದನ್ ಶೆಟ್ಟಿಯ ವೈವಾಹಿಕ ಜೀವನವು 2019ರಲ್ಲಿ ಟಿಕ್ ಟಾಕ್ ಮಾಡಿಕೊಂಡು ಬಂದಿದ್ದ ಬಿಗ್ ಬಾಸ್ ಕನ್ನಡ ಸ್ಪರ್ಧಿಯಾದ ನಿವೇದಿತಾ ಗೌಡ ಅವರೊಂದಿಗೆ ಆರಂಭವಾಯಿತು. ಅವರು ದೀರ್ಘ ಕಾಲದ ಸ್ನೇಹಿತರಾಗಿದ್ದು, ಚಂದನ್ ಶೆಟ್ಟಿ 2019ರಲ್ಲಿ ಮೈಸೂರಿನಲ್ಲಿ ಮದುವೆಯಾದರು. ಆದರೆ ಅನ್ಯೂನ್ಯತೇಯ ಕೊರತೆಯಿಂದ ಕೇವಲ ನಾಲ್ಕು ವರ್ಷಕ್ಕೆ ತಮ್ಮ ವೈವಾಹಿಕ ಜೀವನವನ್ನು ಅಂತ್ಯ ಮಾಡಿದ್ದಾರೆ.

ತಮ್ಮ ವಿಚ್ಛೇದನದ ಬಳಿಕ ಚಂದನ್ ಶೆಟ್ಟಿ ಬಣ್ಣದ ರಂಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ ಕಾಟನ್ ಕ್ಯಾಂಡಿ ಮ್ಯೂಸಿಕ್ ವಿಡಿಯೋ ಕಳೆದ ವರ್ಷ ಡಿಸೆಂಬರ್ ನಲ್ಲಿ ಬಿಡುಗಡೆ ಆಗಿತ್ತು. ದೊಡ್ಡ ಹಿಟ್ ಪಡೆದಿರುವ ಈ ಸಾಂಗ್ ಹಾಗೂ ಸುಷ್ಮಿತಾ ಮತ್ತು ಚಂದನ್ ಶೆಟ್ಟಿಯ ಜೋಡಿಗೆ ಬಾರಿ ಮೆಚ್ಚುಗೆ ಶುರುವಾಗಿದೆ. ಈ ಮಧ್ಯೆಯೇ ಈ ಜೋಡಿಯ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಅದೇನೆಂದರೆ, ಕಾಟನ್ ಕ್ಯಾಂಡಿ ತಂಡವು ಅಭಿಮಾನಿಗಳನ್ನು ಭೇಟಿಯಾಗಲಿದ್ದೇವೆ ಎಂದು ತಿಳಿಸಿದೆ. ಯಾರ್ಯಾರು ಕಾಟನ್ ಕ್ಯಾಂಡಿ ಫ್ಯಾನ್ಸ್ ಇದ್ದೀರಾ, ನಿಮ್ಮ ಊರಿಗೆ ಬರಬೇಕು ಎಂದು ಅನ್ನಿಸಿದರೆ, ನಿಮ್ಮ ಊರಿನ ಹೆಸರನ್ನು ಕಮೆಂಟ್ ಮಾಡಬೇಕು ಅದರಲ್ಲಿ ಯಾರ ಕಾಮೆಂಟಿಗೆ ಅತಿ ಹೆಚ್ಚು ಲೈಕ್ ಬಂದಿರುತ್ತದೆ, ಆ ಊರಿಗೆ ನಮ್ಮ ತಂಡ ಬರುತ್ತದೆ ಎಂದು ಚಿತ್ರ ತಂಡ ತಿಳಿಸಿದೆ. ಇದಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಈ ವಿಡಿಯೋಗೆ ಲೈಕ್ ಮಾಡಿದ್ದು. ಕೊನೆಗೆ ಯಾವ ಜಾಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ ಎಂಬ ಕುತೂಹಲ ಎಲ್ಲೆಡೆ ಶುರುವಾಗಿದೆ