ಹೊಸ ಜೀವನ ಶುರು ಮಾಡಲಿದ್ದೇನೆ ಎಂದ ಚಂದನ್‌ ಶೆಟ್ಟಿ; ಯಾರ ಜೊತೆ ನೋಡಿ ?

ಹೊಸ ಜೀವನ ಶುರು ಮಾಡಲಿದ್ದೇನೆ  ಎಂದ ಚಂದನ್‌ ಶೆಟ್ಟಿ;  ಯಾರ ಜೊತೆ ನೋಡಿ ?

ಚಂದನ್‌ ಶೆಟ್ಟಿ ಇದೀಗ ಸರ್‌ಪ್ರೈಸಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ನಿವೇದಿತಾ ಗೌಡ ಜೊತೆ ಚಂದನ್‌ ಶೆಟ್ಟಿ ಡಿವೋರ್ಸ್‌ ಪಡೆದರು.ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಗೌಡ ವಿಚ್ಛೇದನದ ಬಳಿಕ ಇದೀಗ ಸೂತ್ರಧಾರಿ ಸಿನಿಮಾ ರಿಲೀಸ್‌ ಅಗಲಿದೆ. ಈ ಸಿನಿಮಾ ಮೂಲಕ ಚಂದನ್‌ ಶೆಟ್ಟಿ ಸ್ಯಾಂಡಲ್‌ವುಡ್‌ಗೆ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆಸೂತ್ರಧಾರಿ ಸಿನಿಮಾ ಕಾರ್ಯಕ್ರಮದಲ್ಲಿ ಮಾತನಾಡಿದ ಚಂದನ್‌ ಶೆಟ್ಟಿ, ನಾನು ನಟನಾಗಬೇಕು ಎನ್ನುವುದು ನಮ್ಮ ತಂದೆಯ ಕನಸು. ಚಿಕ್ಕಂದಿನಿಂದಲೂ ಸಿನಿಮಾ ಹೀರೋ ಆಗಬೇಕು ಅಂತಿದ್ರು ಎಂದಿದ್ದಾರೆ.

ಆದರೆ ನಾನು ಕನ್ನಡಿ ಮುಂದೆ ನಿಂತು ನೋಡ್ಕೊಳ್ತಿದ್ದೆ. ನಾನು ಯಾವಾಗ ಹೀರೋ ಆಗ್ತೀನಿ ಅಂತ ನಗು ಬರತಿತ್ತು. ಆದರೆ ನನ್ನ ತಂದೆಯ ಕನಸು ಈಡೇರುತ್ತಿದೆ. ಇದೇ ಮೇ 9ರಂದು ನಿಜ ಆಗುತ್ತಿದೆ ಎಂದು ಚಂದನ್‌ ಹೇಳಿದ್ದಾರೆ. ಸೂತ್ರಧಾರಿ ಸಿನಿಮಾದಲ್ಲಿ ನಾನು ಅಂಡರ್‌ಕವರ್‌ ಪೊಲೀಸ್‌ ಪಾತ್ರ ಮಾಡಿದ್ದೀನಿ. ಈ ಸಿನಿಮಾ ಮೂಲಕ ನಾನು ಹೊಸ ಜೀವನ ಶುರು ಮಾಡಲಿದ್ದೇನೆ ಎಂದು ಚಂದನ್‌ ಶೆಟ್ಟಿ ಹೇಳಿದ್ದಾರೆ.

ಸೂತ್ರಧಾರಿ ಚಿತ್ರದಲ್ಲಿ ಚಂದನ್ ಶೆಟ್ಟಿ ಹೀರೋ ಆಗಿದ್ದಾರೆ. ಪೊಲೀಸ್ ಪಾತ್ರದಲ್ಲಿಯೇ ಹೊಳೆಯುತ್ತಿರೋದು ಮತ್ತೊಂದು ವಿಶೇಷವೇ ನೋಡಿ. ಫಸ್ಟ್ ಟೈಮ್ ಪೊಲೀಸ್ ಪಾತ್ರ ಮಾಡಿರೋ ಚಂದನ್ ಶೆಟ್ಟಿಗೆ ನಟಿ ಅಪೂರ್ವ ಜೋಡಿ ಆಗಿದ್ದಾರೆ. ಕಿರಣ್ ಕುಮಾರ್ ಈ ಸಿನಿಮಾ ಡೈರೆಕ್ಷನ್ ಮಾಡಿದ್ದಾರೆ.

ರಾಪರ್ ಚಂದನ್ ಶೆಟ್ಟ ತಿರುಪತಿ ತಿಪ್ಪನ ಮೊರೆ ಹೋಗಿದ್ದಾರೆ. ಅಪ್ಪನ ಆಸೆಯಂತೆ ಹೀರೋ ಆಗಿದ್ದು ಆಗಿದೆ. ಆದರೆ, ಈ ಸಿನಿಮಾ ಗೆಲ್ಬೇಕು ಅಲ್ವೇ? ಅದಕ್ಕೇನೆ ತಿಮ್ಮಪ್ಪನ  ಸನ್ನಿಧಿಯಲ್ಲಿ ಚಂದನ್ ಶೆಟ್ಟಿ  ಚಿತ್ರದ ಗೆಲುವಿಗಾಗಿಯೆ ಪ್ರಾರ್ಥನೆ ಮಾಡಿದ್ದಾರೆ. ಈ ಒಂದು ಪ್ರಾರ್ಥನೆಯ ಪಯಣದಲ್ಲಿ ಚಿತ್ರದ ಡೈರೆಕ್ಟರ್ ಕಿರಣ್ ಕುಮಾರ್ ಸಾಥ್ ಕೊಟ್ಟಿದ್ದಾರೆ. ನಾಯಕಿ ಅಪೂರ್ವ ಕೂಡ ಜೊತೆಗೆ ಇದ್ದಾರೆ. ಸಿನಿಮಾದ ನಿರ್ಮಾಪಕ ನವರಸನ್  ಸಹ ಇದ್ದಾರೆ