ಚಿಕ್ಕಣ್ಣ ಹುಡುಗಿ ಪಾವನ ಗೌಡ ವಯಸ್ಸಿನ ಅಂತರ ಎಷ್ಟು ಗೊತ್ತಾ? ಲವ್ ಮ್ಯಾರೇಜ್ ?

ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ ಚಿಕ್ಕಣ್ಣ ಅವರು ತಮ್ಮ ದಾಂಪತ್ಯ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಪಾವನ ಗೌಡ ಅವರೊಂದಿಗೆ ಅವರ ಮದುವೆ ನಿಶ್ಚಿತವಾಗಿದೆ. ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದ್ದು, ಅಭಿಮಾನಿಗಳು ತಮ್ಮ ಶುಭಾಶಯಗಳೊಂದಿಗೆ ಈ ಜೋಡಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ನಾವು ಚಿಕ್ಕಣ್ಣ ಮತ್ತು ಪಾವನ ಗೌಡ ಅವರ ವೈಯಕ್ತಿಕ ಹಾಗೂ ವೃತ್ತಿಪರ ಹಿನ್ನೆಲೆಯ ಕಂಪಾರಿಸನ್ ಮಾಡೋಣ.
ವಿದ್ಯಾರ್ಹತೆ ಮತ್ತು ವೃತ್ತಿ ಜೀವನ ನೋಡಿದರೆ, ಪಾವನ ಗೌಡ ಅವರು ಮೆಕ್ಯಾನಿಕಲ್ ಇಂಜಿನಿಯರ್ ಆಗಿದ್ದು, ಗ್ರೀನ್ ಔರಾ ಟೆಕ್ನೋ ವೆಂಚರ್ಸ್ ಎಂಬ ಸಂಸ್ಥೆಯ ಸ್ಥಾಪಕಿಯಾಗಿದ್ದಾರೆ. ಉದ್ಯಮಿಯಾಗಿರುವ ಪಾವನ ಅವರು ಪರಿಸರ ಪ್ರೇಮಿ ಕೂಡ ಹೌದು. ಇತ್ತ ಚಿಕ್ಕಣ್ಣ ಅವರು ಆರ್ಟ್ಸ್ ವಿಭಾಗದಲ್ಲಿ ಪಿಯುಸಿ ಪಾಸ್ ಮಾಡಿದ್ದು, ತಮ್ಮ ಹಾಸ್ಯ ಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದಿದ್ದಾರೆ. ‘ಉಪಾಧ್ಯಕ್ಷ’, ‘ಅಧ್ಯಕ್ಷ’, ‘ರಾಜಾಹುಲಿ’ ಮುಂತಾದ ಚಿತ್ರಗಳಲ್ಲಿ ಅವರು ತಮ್ಮ ಅಭಿನಯದಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ.
ಮದುವೆ ಬಗ್ಗೆ ಮಾಹಿತಿ ನೀಡಿದರೆ, ಇವರಿಬ್ಬರ ಮದುವೆ ಪಕ್ಕಾ ಅರೇಂಜ್ ಮ್ಯಾರೇಜ್ ಆಗಿದ್ದು, ಕುಟುಂಬಸ್ಥರ ಒಪ್ಪಿಗೆಯೊಂದಿಗೆ ನಿಶ್ಚಿತವಾಗಿದೆ. ಪಾವನ ಗೌಡ ಅವರು ಹಿಂದೂ ಧರ್ಮದ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ಇತ್ತೀಚೆಕೆ ಪಾವನ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಚಿಕ್ಕಣ್ಣ ಅವರೊಂದಿಗೆ ಕೈ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮದುವೆಯ ಸುದ್ದಿ ಖಚಿತವಾಗಿದೆ. ನಿಶ್ಚಿತಾರ್ಥ ಮತ್ತು ಮದುವೆ ದಿನಾಂಕ ಶೀಘ್ರದಲ್ಲೇ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ವಯಸ್ಸಿನ ಅಂತರ ನೋಡಿದರೆ, ಚಿಕ್ಕಣ್ಣ ಅವರ ವಯಸ್ಸು 41 ವರ್ಷವಾಗಿದ್ದು, ಪಾವನ ಗೌಡ ಅವರ ವಯಸ್ಸು 29 ವರ್ಷ. ಇವರಿಬ್ಬರ ನಡುವೆ 12 ವರ್ಷದ ವಯಸ್ಸಿನ ಅಂತರವಿದೆ. ಆದರೆ ಪ್ರೀತಿಯ ಬಾಂಧವ್ಯ, ಪರಸ್ಪರ ಗೌರವ ಮತ್ತು ಕುಟುಂಬದ ಬೆಂಬಲದಿಂದ ಈ ಜೋಡಿ ಯಶಸ್ವಿ ದಾಂಪತ್ಯ ಜೀವನ ನಡೆಸುವ ವಿಶ್ವಾಸವಿದೆ. ವೀಕ್ಷಕರೇ, ಈ ಜೋಡಿಗೆ ನಿಮ್ಮ ಶುಭಾಶಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಮತ್ತು ಈ ವಿಡಿಯೋಗೆ ಲೈಕ್ ಮಾಡುವುದನ್ನು ಮರೆಯಬೇಡಿ!