ಜಗ್ಗಪ್ಪ ನೋವಿನ ಮಾತು ನಾವು ಬದುಕಬಾರದಾ ಎಂದು ಹೇಳಿದ್ದ ಏಕೆ : ಅಸಲಿ ಕಾರಣ ಇಲ್ಲಿದೆ ನೋಡಿ ?

ಕಲಾವಿದರ ಬದುಕು ಹೀಗೆ ಇರುತ್ತೆ ಎಂದು ಹೇಳುವದಕ್ಕೆ ಆಗುವದಿಲ್ಲ ಅವರ ಜೀವನದಲ್ಲಿ ಏರು ಪೆರು ಇದ್ದೆ ಇರುತ್ತೆ . ಅದೇ ರೀತಿ ಜಗ್ಗಪ್ಪನ ಜೀವನದಲ್ಲಿ ಆಗಿದೆ . ಇತ್ತೀಚಿಗೆ ಅವರಿಗೆ ಸರಿಯಾದ ಅವಕಾಶಗಳು ಸಿಗುತ್ತಿಲ್ಲ . ಅದರಿಂದ ಅವರಿಗೆ ಜೀವನ ನಡೆಸುವುದು ಕಷ್ಟವಾಗಿದೆ .
ಮಜಾಭಾರತ ಖ್ಯಾತಿಯ ಜಗ್ಗಪ್ಪ ಹಾಗೂ ಸುಶ್ಮಿತಾ ಕಾಮಿಡಿ ಮಾಡುತ್ತಾ ಪ್ರೇಕ್ಷಕರ ಮನಗೆದ್ದಿದ್ದರು. ಈ ಜೋಡಿ ಕಾಮಿಡಿ ಮಾಡುತ್ತಲೇ ಬಳಿಕ ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಬಳಿಕ ಜಗ್ಗಪ್ಪ ಸುದ್ದಿಯಾಗಿದ್ದು ಡಿವೋರ್ಸ್ ವಿಚಾರವಾಗಿ. ಬ್ಯಾಚುಲರ್ ಆಗಿದ್ದಾಗ ಜೀವನ ತುಂಬ ಕಷ್ಟವಾಗಿತ್ತು. ನನ್ನ ಜೀವನದಲ್ಲಿ ಯಾವಾಗ ಸುಶ್ಮಿತಾ ಬಂದೋಳೋ ಜೀವನ ತುಂಬ ಚೆನ್ನಾಗಿ ಸಾಗುತ್ತಿದೆ ಎಂದಿದ್ದರು.
ಹಲವು ವರ್ಷದಿಂದ ಯುಟ್ಯೂಬ್ ಮಾಡಿಕೊಂಡು ಬರ್ತಾ ಇದ್ದೀನಿ. ಯಾಕೆ ಮಾಡ್ತಾನೆ ಅಂದು ಇದು ಅಂದರೆ ಜೀವನ ನಡಿಯಬೇಕು. ಒಂದು ಶೋ ಗೆದ್ದರೆ ಸಾಕು ಜನ ಎಷ್ಟು ಲಕ್ಷ ಬಂತು ಅಂತ ಕೇಳ್ತಾರೆ. ಹಾಗಾದ್ರೆ ಒಂದು ಶೋ ಮಾಡಿದ ಮೇಲೆ ಅವರೆಲ್ಲಾ ಏನು ಸತ್ತೇ ಹೋಗೋದಾ? ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ಮತ್ತು ನಾವು ಬದುಕಲೇ ಬಾರದ ಎಂದು ನೋವಿನಿಂದ ಹೇಳಿದ್ದಾರೆ ಅದು ಅಲ್ಲದೇ ಕೆಲವೊಮ್ಮೆ ನಾವು ಊರಿಗೇ ಹೋಗಲ್ಲ. ಎಲ್ಲದರೂ ಯಾರದರೂ ಸಿಕ್ಕರೆ ಕೆಲಸ ಇಲ್ವಾ? ಅಂತ ಕೇಳ್ತಾರೆ.ಒಂದು ಶೋಗೆ ಹೀಗಾಗಿದ್ದೀಯಾ ಅಂತಾನೆ. ಮೂರು ತಿಂಗಳು ಶೋ ಮಾಡುತ್ತಾರೆ. ಅದು ಮುಗಿದ ಮೇಲೆ ಊರಿಗೆ ಹೋಗಲೇಬೇಕು. ಆಗ ಇಂಥಹ ಮಾತುಗಳು ಕೇಳಬೇಕು. ಅದೂ ಅಲ್ಲದೇ ಒಂದು ಮೂರು ಸಿನಿಮಾ ಮಾಡಿದ್ದೇನೆ ಅಷ್ಟೇ.
ಇನ್ನು ಡಿವೋರ್ಸ್ ವಿಚಾರವಾಗಿಯೂ ಹೇಳಿಕೊಂಡಿದ್ದರು. ಸುಶ್ಮಿತಾ ಅವಳ ಮನೆಯಲ್ಲಿ ಕೆಲಸ ಮಾಡುತ್ತಾ ಇರಲಿಲ್ಲ. ಆದರೆ ಈಗ ಹಾಗಲ್ಲ ಶೂಟಿಂಗ್ ಇದ್ದರೆ ಬೆಳಗ್ಗೆ 4ಕ್ಕೆ ಎದ್ದು ಎಲ್ಲ ಕೆಲಸ ಮಾಡಿ ಹೋಗುತ್ತಾಳೆ. ನಮಗೆಲ್ಲ ತಿಂಡಿ ರೆಡಿ ಮಾಡಿ ಇಟ್ಟೇ ಆಕೆ ಹೋಗೋದು. ನಮ್ಮಿಬ್ಬರ ಮೇಲೆ ಕಣ್ಣು ಹಾಕಬೇಡಿ, ದೂರ ಮಾಡಬೇಡಿ ಎಂದಿದ್ದಾರೆ.
ನನಗೂ ಈಗ ಇವಳಿಂದ ತಾಯಿ ಪ್ರೀತಿ ಸಿಕ್ಕಿದೆ. ನಾನು ಅಜ್ಜಿ ಮನೆಯಲ್ಲಿ ಬೆಳೆದಿದ್ದು. ಆಮೇಲೆ ಹಾಸ್ಟೆಲ್ ಜೀವನ ಹೀಗಾಗಿ ಜಾಸ್ತಿ ಅಪ್ಪ ಅಮ್ಮನ ಪ್ರೀತಿ ಸಿಗಲಿಲ್ಲ. ಆಮೇಲೆ ಕೆಲಸ ಅಂತಾ ಹೊರಗಡೆ ಬಂದೆ. ಮಜಾ ಭಾರತ ಬಂದಾಗ ನನ್ನ ಹತ್ರ ದುಡ್ಡು ಇರಲಿಲ್ಲ. ಎರಡು ಮೂರು ಪ್ಯಾಂಟ್ ಟೀಶರ್ಟ್ ಇತ್ತು ನನ್ನತ್ರ ಅಷ್ಟೆ. ಆಗ ನನ್ನ ಜತೆ ಆಗಿದ್ದವಳು ಸುಶ್ಮಿತಾ. ನಾವು ಅವರಿಗೆ ಕಿರು ತೆರೆ ಮತ್ತು ಹಿರಿ ತೆರೆ ಯಲ್ಲಿ ಮತ್ತಷ್ಟು ಅವಕಾಶಗಳು ಸಿಗಲಿ ಎಂದು ಹಾರೈಸೋಣ . ಅವರ ಜೀವನ ಸುಖಕರವಾಗಿರಲಿ ಎಂದು ಹೇಳೋಣ