ದರ್ಶನ್ ಅರೋಗ್ಯ ದ ಮನವಿ ಬಗ್ಗೆ ಸಿಹಿ ಸುದ್ದಿ ಕೊಟ್ಟ ಕೋರ್ಟ್! ಏನಾಗಿದೆ ದರ್ಶನ್ ಆರೋಗ್ಯಕ್ಕೆ?
ಟ್ರಯಲ್ ಆರಂಭ ಸಂಬಂಧ ಬುಧವಾರ ಪರಪ್ಪನ ಅಗ್ರಹಾರ ಜೈಲಿಂದ ಕೋರ್ಟ್ಗೆ ವೀಡಿಯೊ ಕಾನ್ಫರೆನ್ಸ್ ಮೂಲಕ ದರ್ಶನ್, ಪವಿತ್ರ ಗೌಡ ಮತ್ತು ಇತರೆ ಆರೋಪಿಗಳು ಹಾಜರಾಗಿದ್ದರು. ಈ ವೇಳೆ ಒಂದು ಮನವಿ ಇದೆ ಎಂದ ಆರೋಪಿ ನಾಗರಾಜ್, ಬೆಡ್‌ಶೀಟ್ ಕೊಡಿಸುವಂತೆ ಮನವಿ ಮಾಡಿದರು. ‘ಸ್ವಾಮಿ ಬೆಡ್‌ಶೀಡ್ ಕೊಡಿಸಿ, ಇವರು ಕೊಡ್ತಿಲ್ಲ. ಮನೆಯಿಂದ ತಂದು ಕೊಟ್ರೆ ಅದನ್ನೂ ಕೊಡೋದಕ್ಕೆ ಬಿಡ್ತಿಲ್ಲ’ ಅಂತಾ ಅಳಲನ್ನು ತೋಡಿಕೊಂಡರು. ಈ ವೇಳೆ ಮುಂದೆ ಬಂದ ದರ್ಶನ ಮೈಕ್ ಹಿಡಿದು, ಸ್ವಾಮಿ ಇದು ನನ್ನೊಬ್ಬನ ಸಮಸ್ಯೆ ಅಲ್ಲ. ಎಲ್ಲರ ಸಮಸ್ಯೆ. ತುಂಬಾನೆ ಚಳಿ ಇದೆ ಸರ್. ಚಳಿಗೆ ರಾತ್ರಿ ಎಲ್ಲಾ ನಿದ್ದೆ ಬರ್ತಿಲ್ಲ. ನಿದ್ದೆ ಇಲ್ಲದೆ ರಾತ್ರಿಯೆಲ್ಲಾ ಎದ್ದು ಕೂರ್ತಿದ್ದೀವಿ. ಮೂಲೆಯಲ್ಲಿ ಕುಳಿತು ಕಾಲ ದೂಡ್ತಿದ್ದೀವಿ. ಎಲ್ಲರಿಗೂ ಪ್ರಾಬ್ಲಂ ಆಗಿದೆ ಸರ್. ಸಿಕ್ಕಪಟ್ಟೆ ಚಳಿ ಇದೆ, ಬೆಡ್‌ಶೀಟ್ ಕೊಡಿಸಿ ಎಂದು ಕೇಳಿದರು
ಬುಧವಾರವಷ್ಟೇ (ನ.19) ಚಳಿ ತಡೆಯೋದಕ್ಕೆ ಆಗುತ್ತಿಲ್ಲ. ಹೀಗಾಗಿ ಹೆಚ್ಚುವರಿ ಬೆಡ್‌ಶೀಟ್ ನೀಡಿ ಎಂದು ಅಂಗಲಾಚಿದ್ದರು. ಗುರುವಾರ (ನ.20) ಅದೇ ವಿಚಾರಕ್ಕೆ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ಅದರಂತೆ ಬೆಡ್ ಶೀಟ್ ನೀಡಿದ್ದಾರೆ. ಇನ್ನೂ ಇದೇ ವೇಳೆ ಕೋರ್ಟ್ನಲ್ಲೇ ನನಗೆ ಬೆನ್ನು ನೋವು ಹೆಚ್ಚಾಗಿದೆ. 2 ಬಾರಿ ಫಿಸಿಯೋಥೆರಪಿ ಮಾಡಿಸಿ, ನಿಲ್ಲಿಸಿಬಿಟ್ಟಿದ್ದಾರೆ ಎಂದು ಬೆನ್ನುನೋವಿನ ಬಗ್ಗೆ ಹೇಳಿಕೊಂಡಿದ್ದಾರೆ ದಕ್ಕೆ ಕೋರ್ಟ್ ಫಿಸಿಯೋಥೆರಪಿ ದುವರಿಸುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ.




