ಸಿನಿಮಾ ಬಿಡುಗಡೆ ವೇಳೆ ಕೊನೆಗೂ ದರ್ಶನ್ ಗೆ ಸಿಹಿ ಸುದ್ದಿ ಕೊಟ್ಟ ಕೋರ್ಟ್ !! ಏನದು ನೋಡಿ ?
ಸಾಕ್ಷಿಗಳ ವಿಚಾರಣೆ
ಇಂದು ಮಧ್ಯಾಹ್ನ 64ನೇ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿಯಿತು. ಈ ವೇಳೆ ಪ್ರಾಸಿಕ್ಯೂಷನ್ ಪರ ವಕೀಲರು ಪ್ರತ್ಯಕ್ಷ ಸಾಕ್ಷಿಗಳು, ಎಫ್.ಎಸ್.ಎಲ್. ವರದಿ, ತಾಂತ್ರಿಕ ಸಾಕ್ಷ್ಯಗಳು ಹಾಗೂ ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಪ್ರತ್ಯಕ್ಷದರ್ಶಿ ಸಾಕ್ಷಿಗಳನ್ನು ವಿಚಾರಣೆಗೆ ಕರೆಯಲು ಸಮನ್ಸ್ ನೀಡಬೇಕೆಂದು ವಕೀಲ ಎಸ್‌ಪಿಪಿ ಸಚಿನ್ ಮನವಿ ಮಾಡಿದರು.
ಅವರ ಮನವಿಯ ಮೇರೆಗೆ ಕೋರ್ಟ್ ಸಾಕ್ಷಿ ನಂಬರ್ 7 ಮತ್ತು 8 ಕ್ಕೆ ಸಮನ್ಸ್ ಜಾರಿ ಮಾಡಿತು. ಈ ಇಬ್ಬರು ಸಾಕ್ಷಿಗಳು ಹತ್ಯೆಯಾದ ರೇಣುಕಾಸ್ವಾಮಿ ಅವರ ತಂದೆ ಕಾಶೀನಾಥ್ ಹಾಗೂ ತಾಯಿ. ಇವರನ್ನು ಮೊದಲಿಗರಾಗಿ ಸಾಕ್ಷಿ ಹೇಳಲು ಕೋರ್ಟ್ ಕರೆಯಲಾಗಿದೆ. ಮಗನನ್ನು ಕಳೆದುಕೊಂಡು ದುಃಖದಲ್ಲಿರುವ ಅವರು, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವಂತೆ ಕೋರ್ಟ್‌ಗೆ ಮನವಿ ಮಾಡುವ ಸಾಧ್ಯತೆ ಇದೆ.
.ರೇಣುಕಾಸ್ವಾಮಿ ಕೊಲೆ ಪ್ರಕರಣ – ಕೋರ್ಟ್ ವಿಚಾರಣೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಹಾಗೂ ಅವರ ಸಂಗಡಿಗರಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್‌ನಲ್ಲಿ ಟಿ.ವಿ. ಒದಗಿಸಲು 64ನೇ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಜೈಲಿನಲ್ಲಿ ತಲೆ ಕೆಡುತ್ತಿದೆ, ಇರಲು ಆಗುತ್ತಿಲ್ಲ ಎಂದು ಆರೋಪಿಗಳಲ್ಲಿ ಒಬ್ಬನಾದ ನಾಗರಾಜ್ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಮನವಿ ಮಾಡಿದ್ದಕ್ಕೆ ಸ್ಪಂದಿಸಿದ ಕೋರ್ಟ್ ಜಡ್ಜ್, ದರ್ಶನ್ ಇರುವ ಬ್ಯಾರಕ್‌ಗೆ ಟಿ.ವಿ. ನೀಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸುದ್ದಿಯಿಂದ ದರ್ಶನ್ ಗೆ ಕೊಂಚ ನೆಮ್ಮದಿ ಸಿಕ್ಕ ಹಾಗೆ ಇದೆ ಏಕೆಂದ್ರೆ atleast ಸಿನಿಮಾ ಪ್ರಚಾರಕ್ಕೆ ಹೋಗದೆ ಇದ್ದರು ಸಹ ತನ್ನ ಸಿನಿಮಾ ಯಾವ ರೀತಿ ಪ್ರಚಾರ ಮಾಡುತ್ತಿದ್ದಾರೆ ಅಂತ ನೋಡ ಬಹುದಾಗಿದೆ . ಯಾರೆಲ್ಲ ದರ್ಶನ್ ಅಭಿಮಾನಿಗಳು ಇದ್ದಾರೆ ಅವರಿಗೆಲ್ಲ ಇದರಿಂದ ತುಂಬಾ ಖುಷಿಯಾಗಿದೆ . ನೀವು ಏನಂತೀರಾ ಕಾಮೆಂಟ್ ನಲ್ಲಿ ತಿಳಿಸಿ
ದರ್ಶನ್ ಪರ ವಕೀಲರ ಆಕ್ಷೇಪ
ಸಾಕ್ಷಿ ನಂಬರ್ 7 ಮತ್ತು 8 ಕ್ಕೆ ಸಮನ್ಸ್ ನೀಡಿದ್ದಕ್ಕೆ ದರ್ಶನ್ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಪಟ್ಟಿಯ ಪ್ರಕಾರವೇ ಸಾಕ್ಷಿಗಳನ್ನು ವಿಚಾರಣೆಗೆ ಕರೆಯಬೇಕು ಎಂದು ಅವರು ವಾದಿಸಿದರು.
ಆರೋಪಿಗಳ ಬೇಡಿಕೆ
ಆರೋಪಿಗಳಾದ ಅನುಕುಮಾರ್ ಹಾಗೂ ಜಗದೀಶ್ ತಮ್ಮನ್ನು ಪರಪ್ಪನ ಅಗ್ರಹಾರ ಜೈಲಿನಿಂದ ಚಿತ್ರದುರ್ಗಕ್ಕೆ ಶಿಫ್ಟ್ ಮಾಡಲು ಮತ್ತೆ ಮನವಿ ಮಾಡಿದರು. ಆದರೆ ಕೋರ್ಟ್ ಜಡ್ಜ್ ಅವರ ಅರ್ಜಿಯನ್ನು ವಜಾ ಮಾಡಿದರು.
ಮುಂದಿನ ಹಂತ
ಇಂದು ಪ್ರಾಸಿಕ್ಯೂಷನ್ ಪರ ವಕೀಲರು ಒಟ್ಟು 272 ಸಾಕ್ಷಿಗಳ ಪಟ್ಟಿಯನ್ನು ಕೋರ್ಟ್‌ಗೆ ಸಲ್ಲಿಸಿದರು. ಮುಂದಿನ ದಿನಗಳಲ್ಲಿ ಎಲ್ಲ ಸಾಕ್ಷಿಗಳಿಗೆ ಸಮನ್ಸ್ ಜಾರಿ ಮಾಡಿ ಹೇಳಿಕೆಗಳನ್ನು ದಾಖಲಿಸಲಾಗುವುದು. ವಿಚಾರಣೆಯನ್ನು ಕೋರ್ಟ್ ಡಿಸೆಂಬರ್ 17ಕ್ಕೆ ಮುಂದೂಡಿದೆ.




