ಡಾಲಿ ಧನಂಜಯ ಮದುವೆ ಫಿಕ್ಸ್!! ಹುಡುಗಿ ಯಾರು ಗೊತ್ತಾ?

ಡಾಲಿ ಧನಂಜಯ ಮದುವೆ ಫಿಕ್ಸ್!! ಹುಡುಗಿ ಯಾರು ಗೊತ್ತಾ?

ಡಾಲಿ ಧನಂಜಯ್ ಅವರು ದೀಪಾವಳಿ ಹಬ್ಬಕ್ಕೆ ಶುಭ ಸುದ್ದಿ ನೀಡಿದ್ದಾರೆ. ಅವರು ಮೈಸೂರಿನಲ್ಲಿ ವೈದ್ಯೆ ಧನ್ಯತಾ ಅವರೊಂದಿಗೆ ಮದುವೆಯಾಗುತ್ತಿರುವುದಾಗಿ ಘೋಷಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಭಿಮಾನಿಗಳು ಅವರ ಮದುವೆ ಬಗ್ಗೆ ಕೇಳುತ್ತಿದ್ದರು. ಕೊನೆಗೂ ಅವರು ಮದುವೆಯಾಗುತ್ತಿರುವುದಾಗಿ ತಿಳಿಸಿದರು. ಈ ಸಂಬಂಧ ಅವರು ತಮ್ಮ ಭಾವಿ ಪತ್ನಿಯೊಂದಿಗೆ ಫೋಟೋಶೂಟ್ ಹಂಚಿಕೊಂಡಿದ್ದಾರೆ ಮತ್ತು ಎಲ್ಲರ ಆಶೀರ್ವಾದವನ್ನು ಕೇಳಿದ್ದಾರೆ.

ಡಾಲಿ ಧನಂಜಯ್ ಹಾಗೂ ಭಾವಿ ಪತ್ನಿ ಧನ್ಯತಾ ಜೊತೆಗಿನ ಸುಂದರ ಫೋಟೋಶೂಟ್ ಇದೀಗ ಎಲ್ಲೆಡೆ ವೈರಲ್ ಆಗಿದೆ.ಮುದ್ದಾದ ಜೋಡಿಗೆ ಶುಭಾಶಯಗಳ ಸುರಿಮಳೆ ವ್ಯಕ್ತವಾಗುತ್ತಿದೆ. ದಾರಾ ಬೇಂದ್ರ ಅವರ ಕವನ ಹೇಳುವ ಮೂಲಕ ಪ್ರೀತಿಯಿಂದ ಧನ್ಯತಾ ಪರಿಚಯ ಮಾಡಿಕೊಟ್ಟಿದ್ದಾರೆ. ಇವರಿಬ್ಬರ ಮುದ್ದಾಡ ಫೋಟೋ ವಿಡಿಯೋಗಳಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಫೆಬ್ರವರಿ 16ರಂದು ಮೈಸೂರಿನಲ್ಲಿ ಅದ್ದೂರಿಯಾಗಿ ಧನಂಜಯ್ ಅವರ ಮದುವೆ ನೆರವೇರಲಿದೆ. ಚಿತ್ರರಂಗದವರು, ರಾಜಕೀಯದವರು ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಈ ವಿವಾಹ ಕಾರ್ಯದಲ್ಲಿ ಭಾಗಿ ಆಗಲಿದ್ದಾರೆ.

ಧನ್ಯತಾ ಚಿತ್ರದುರ್ಗದವರು. ಡಾಲಿ ಧನಂಜಯ್ ಅವರ ವೈವಾಹಿಕ ಜೀವನಕ್ಕೆ ನಮ್ಮ ಹಾರ್ದಿಕ ಶುಭಾಶಯಗಳು. 

ಡಾಲಿ ಧನಂಜಯ್ ಮತ್ತು ಧನ್ಯತಾ ಅವರ ಮದುವೆ ಜೀವನಕ್ಕೆ ಶುಭವಾಗಲಿ

( video credit : Tv9 Kannada )