ಡಾಲಿ ಧನಂಜಯ್‌ ಮನಸ್ಸು ಕದ್ದ ಡಾಕ್ಟರ್ ಧನ್ಯತಾ ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತಾ ?

ಡಾಲಿ ಧನಂಜಯ್‌ ಮನಸ್ಸು ಕದ್ದ ಡಾಕ್ಟರ್ ಧನ್ಯತಾ ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತಾ ?

ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಮದುವೆ ಫಿಕ್ಸ್ ಆಗಿದೆ. ಹುಡುಗಿ ಯಾರು? ಈ ಪ್ರಶ್ನೆಗ ಖುದ್ದು ಡಾಲಿ ಧನಂಜಯ್ ಉತ್ತರಿಸಿದ್ದಾರೆ. ಹಲವು ವೇದಿಕೆಗಳಲ್ಲಿ, ಕುಟುಂಬ ಆಪ್ತರು, ಗೆಳೆಯರು ಡಾಲಿ ಧನಂಜಯ್ ಮದುವೆ ಯಾವಾಗ ಅನ್ನೋ ಪ್ರಶ್ನೆ ಕೇಳುತ್ತಲೇ ಇದ್ದರು. ಪ್ರೀತಿ, ಮದುವೆ ವಿಚಾರಗಳಲ್ಲಿ ಮೌನವಹಿಸಿದ್ದ ಡಾಲಿ ಧನಂಜಯ್ ಇದೀಗ ವೈದ್ಯೆ ಕೈಹಿಡಿಯುತ್ತಿದ್ದಾರೆ. ಹೌದು ವೈದ್ಯ ಧನ್ಯತಾ ಕೆಲ ವರ್ಷಗಳ ಹಿಂದಯೇ ಡಾಲಿ ಮನಸ್ಸು ಕದ್ದಿದ್ದಾರೆ.

ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಜೊತೆ ಡಾಲಿ ಧನಂಜಯ್ ಮದುವೆಯಾಗುತ್ತಿದ್ದಾರೆ. ಫೆಬ್ರವರಿಯಲ್ಲಿ ಇವರ ಮದುವೆ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಇದೀಗ ಡಾಲಿ ಹಾಗೂ ಧನ್ಯತಾ ಪ್ರೀತಿ ಶುರುವಾಗಿದ್ದು ಎಲ್ಲಿ? ಹೇಗೆ? ಮೊದಲು ಪ್ರಪೋಸ್ ಮಾಡಿದ್ದು ಯಾರು ಅನ್ನೋ ಹಲವು ಪ್ರಶ್ನೆಗಳು ಇದೀಗ ಹಲವರಲ್ಲಿ ಕಾಡುತ್ತಿದೆ.

ಡಾಲಿ ಧನಂಜಯ್ ಹಾಗೂ ಧನ್ಯತಾ ಹಲವು ವರ್ಷಗಳಿಂದ ಪರಿಚಯಸ್ಥರಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇವರ ಪರಿಚಯ ಪ್ರೀತಿಗೆ ತಿರುಗಿದೆ. ಧನಂಜಯ್ ಮೂಲಕ ಅರಸೀಕರೆ. ಆದರೆ ಓದಿದ್ದು ಮೈಸೂರಿನಲ್ಲಿ. ಇತ್ತ ಧನ್ಯತಾ ಕೂಡ ವೈದ್ಯಕೀಯ ಶಿಕ್ಷಣ ಮಾಡಿದ್ದು ಮೈಸೂರನಲ್ಲಿ. ಇವರಿಬ್ಬರ ಪರಿಚಯ ಮೈಸೂರಿನಿಂದ ಆರಂಭಗೊಂಡಿದೆ. ಬಳಿಕ ಧನಂಜಯ್ ಚಿತ್ರರಂಗದಲ್ಲಿ ಬ್ಯೂಸಿಯಾಗಿದ್ದರೆ, ಧನ್ಯತಾ ಗೈನಾಕಾಲಜಿಸ್ಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಚಯ, ಸ್ನೇಹ, ಪ್ರೀತಿಗೆ ನೀರೆರೆದ ಮೈಸೂರೇ ಇವರ ಫೇವರಿಟ್ ಸ್ಪಾಟ್. ಹೀಗಾಗಿ ಮೈಸೂರಿನ ಎಕ್ಸಿಬಿಷನ್‌ ಮೈದಾನದಲ್ಲಿ ಅದ್ಧೂರಿಯಾಗಿ ಡಾಲಿ ಧನಂಜಯ್ -ಧನ್ಯತಾ ಮದುವೆ ಆಯೋಜಿಲಾಗಿದೆ.

ಜೀ ಕುಟುಂಬ ಅವಾರ್ಡ್ಸ್‌ ಸಮಯದಲ್ಲಿ ಡಾಲಿ ಧನಂಜಯ್   ಅವರು  ಅವರ ಮದುವೆಯ ಬಗ್ಗೆ ಸುಳಿವನ್ನು ಕೊಟ್ಟಿದ್ದರು . ಅದು ಈಗ ನಿಜವಾಗಿದೆ 

ನನಗೂ ಸಂಗಾತಿ ಬೇಕು…ಆದಷ್ಟು ಬೇಗ ಮದುವೆ ಆಗ್ತಿನಿ ಎಂದ ಡಾಲಿ! ನನಗೂ ಸಂಗಾತಿ ಬೇಕಲ್ವೇ? ಹೀಗೆ ಪ್ರಶ್ನೆ ಮಾಡಿರೋ ಡಾಲಿ ಧನಂಜಯ್, ಆದಷ್ಟು ಬೇಗ ಮದುವೆ ಆಗುತ್ತೇನೆ ಅಂತಲೇ ಹೇಳಿದ್ದಾರೆ. ನಿರೂಪಕರಾದ ಅರ್ಜುನ್ ಜನ್ಯ ಹಾಗೂ ಗಾಯಕ ವಿಜಯ ಪ್ರಕಾಶ್ ಈ ಪ್ರಶ್ನೆ ಕೇಳಿದ್ದಕ್ಕೇನೆ ಡಾಲಿ ಧನಂಜಯ್ ಈ ಹೀಗೆ ಉತ್ತರ ಕೊಟ್ಟಿದ್ದಾರೆ.

ಮುಂದಿನ ಸಲ ಜೊತೆಗೆ ಬರುವ ಮುಂದಿನ ಜೀ ಕುಟುಂಬ ಅವಾರ್ಡ್ಸ್‌ಗೆ ಮತ್ತೆ ಬರುತ್ತೇನೆ. ಆಗ ಒಬ್ಬನೇ ಬರೋದಿಲ್ಲ. ಬದಲಾಗಿ ಪತ್ನಿ ಜೊತೆಗೇನೆ ಬರುತ್ತೇನೆ. ಆದಷ್ಟು ಬೇಗ ಮದುವೆ ಆಗುತ್ತೇನೆ ಅಂತಲೇ ಡಾಲಿ ಧನಂಜಯ್ ಹೇಳಿದ್ದಾರೆ.